Wednesday, January 22, 2025

ಸೋಲಿನ ಸುಳಿಯಲ್ಲಿ ಆಮೀರ್.. ಅಭಿನಯಕ್ಕೆ ಬಿಗ್ ಬ್ರೇಕ್

ಆಮೀರ್ ಖಾನ್​ಗೆ ಅಭದ್ರತೆ ಎದ್ದು ಕಾಡ್ತಿದೆ. ಎಂದೋ ಆಡಿದ ಮಾತು ಇದೀಗ ಅಕ್ಷರಶಹ ಮುಳುವಾಗಿದೆ. ಲಾಲ್ ಸಿಂಗ್ ಚಡ್ಡಾ ಫ್ಲಾಪ್ ಆದ ಬೆನ್ನಲ್ಲಿ ಬಣ್ಣ ಹಚ್ಚೋ ಮನಸನ್ನ ಸಹ ಬದಲಿಸಿದ್ದಾರೆ. ಒಂದಷ್ಟು ದಿನ ನಟನೆಗೆ ಫುಲ್​ಸ್ಟಾಪ್ ಇಡ್ತಿರೋ ಮಿಸ್ಟರ್ ಪರ್ಫೆಕ್ಷನಿಸ್ಟ್, ಅಲ್ಲಿಯವರೆಗೆ ಏನು ಮಾಡ್ತಾರೆ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ. ಅದಕ್ಕೆ ಉತ್ತರ ನಿಮ್ಮ ಮುಂದೆ.

  • ನೋ ಆ್ಯಕ್ಟಿಂಗ್​​​​.. ಓನ್ಲಿ ಪ್ರೊಡಕ್ಷನ್ ಎಂದ ಬಿಟೌನ್ ಖಾನ್..!

ಕಳೆದೆರಡು ವರ್ಷಗಳ ಹಿಂದೆ ಆಮೀರ್​ ಖಾನ್​​ ಚಿತ್ರರಂಗದಿಂದ ದೂರ ಸರಿಯುವ ಆಲೋಚನೆ ಮಾಡಿದ್ರಂತೆ. ಈ ಶಾಕಿಂಗ್​ ಸುದ್ದಿ ಬಾಲಿವುಡ್​​ ಅಂಗಳದಲ್ಲಿ ಸಖತ್​ ಸದ್ದು ಮಾಡಿತ್ತು. ಅದೃಷ್ಠವಶಾತ್ ಆಮೀರ್​​​​​​​​​​ ಖಾನ್​​​​​​ಗೆ ಅಂದು ಮನವೊಲಿಸಿದ್ದು ಹೆಂಡತಿ & ಮಕ್ಕಳು. ಆದ್ರೆ, ಇದೀಗ ಮತ್ತೆ ಈ ಅಚ್ಚರಿ ಸುದ್ದಿ ಮುನ್ನೆಲೆಗೆ ಬಂದಿದೆ. ಮಿಸ್ಟರ್​ ಖಾನ್​​ ಮತ್ತೆ ನಟನೆಯಿಂದ ದೂರವಾಗೋ ಮಾತನಾಡಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಸೂಪರ್​ ಹಿಟ್​​ ಸಿನಿಮಾಗಳ ಮೂಲಕ ಅಭಿಮಾನಿಗಳ ಹೃದಯದಂಗಳದಲ್ಲಿ ದೊರೆಯಾಗಿ ಮಿಂಚ್ತಿರೋ ಸ್ಟಾರ್​​ ಆಮೀರ್​ ಖಾನ್​​. ಆದ್ರೇ ಇನ್​ಟಾಲರೆನ್ಸ್​​ ಬಗ್ಗೆ ಆಮೀರ್​ ಮಾತನಾಡಿದ್ದೇ ತಡ, ಆಮೀರ್​ ಸಿನಿಮಾಗಳಿಗೆ ಕುತ್ತು ಬಂದಿತ್ತು. ಇತ್ತೀಚೆಗೆ ಲಾಲ್​ ಸಿಂಗ್​ ಚಡ್ಡಾ ಸಿಕ್ಕಾಪಟ್ಟೆ ಹೈಪ್​ ಕ್ರಿಯೇಟ್​ ಮಾಡಿತಾದ್ರೂ ಕೂಡ ನೆಲಕಚ್ಚಿತ್ತು. ಈ ನಡುವೆ ಆಮೀರ್​ ಖಾನ್​​​​​​ ಸಂದರ್ಶನವೊಂದರಲ್ಲಿ ಮಾತನಾಡಿರೋ ಮಾತುಗಳು ಆಗ ತೆಗೆದುಕೊಂಡಿದ್ದ ನಿರ್ಧಾರಕ್ಕೆ ಪುಷ್ಠಿ ನೀಡ್ತಿವೆ.

ಯೆಸ್​​.. ಆಫ್ಟರ್​ ಲಾಲ್​ ಸಿಂಗ್​ ಚಡ್ಡಾ, ಆಮೀರ್​ ಆ್ಟಕ್ಟಿಂಗ್​ನಿಂದ ದೂರ ಸರಿಯೋಕೆ ತೀರ್ಮಾನಿಸಿದ್ದಾರೆ. ನಾನು ಸದ್ಯ ಆ್ಯಕ್ಟಿಂಗ್​ ಮಾಡೋದಿಲ್ಲ. ಕೇವಲ ಸಿನಿಮಾ ನಿರ್ಮಾಣ ಮಾಡ್ತೀನಿ ಅಂದಿದ್ದಾರೆ. ಮೂರೂವರೆ ದಶಕಗಳ ಕಾಲ ಒಂದೇ ಮನಸ್ಥಿತಿಯಲ್ಲಿ ಸಿನಿಮಾ ಕುರಿತಾಗಿ ಫೋಕಸ್​ ಮಾಡಿದ್ದೇನೆ. ಸದ್ಯ ನನ್ನ ಮನಸ್ಸು ಬೇರೆ ಯೋಚಿಸ್ತಿದೆ ಎಂದು ನಟನೆಯಿಂದ ದೂರ ಉಳಿಯೋ ಪ್ಲಾನ್​ ಮಾಡಿದ್ದಾರೆ.

ನಾನು ಸಿನಿಮಾ ಮಾಡುವಾಗ ಸಾಕಷ್ಟು ಅಂಶಗಳನ್ನು ಮಿಸ್ ಮಾಡ್ಕೊಂಡಿದ್ದೇನೆ. ಸದ್ಯ ಚಾಂಪಿಯನ್ಸ್​​​​ ಸಿನಿಮಾ ನಿರ್ಮಾಣದಲ್ಲಿ ಬ್ಯುಸಿ ಇದ್ದೇನೆ. ಅಮ್ಮ, ಹೆಂಡತಿ, ಮಕ್ಕಳಿಗೆ ಟೈಮ್​ ಕೊಡಬೇಕು. ಹಾಗಾಗಿ ಬ್ರೇಕ್​ ಬೇಕು ಎಂದ್ರು. ಅದೇನೆ ಇರಲಿ, ಸದ್ಯ ಆಮೀರ್​ ನಾಯಕನಾಗಿ ಆ್ಯಕ್ಟ್​ ಮಾಡಿದ್ರೂ ಸಹ, ನಿರ್ಮಾಪಕರಿಗೆ ಬಿಗ್​ ಲಾಸ್​ ಆಗೋ ಸಾಧ್ಯತೆ ಜಾಸ್ತಿ ಇದೆ. ಹಾಗಾಗಿ ಸದ್ಯ ಇರೋ ಬಾಯ್ಕಾಟ್​ ಪರಿಸ್ಥಿತಿಗಳು, ಮನಸ್ಥಿತಿಗಳು ಬದಲಾದ ಮೇಲೆ ಎಂಟ್ರಿ ಕೊಡೋ ಆಲೋಚನೆಯಲ್ಲಿ ಆಮೀರ್​ ಇರಬಹುದು. ಈ ನಿರ್ಧಾರದಿಂದ ಆಮೀರ್​​​​ ಖಾನ್​ರ ಅಭಿಮಾನಿಗಳಿಗೆ ನಿರಾಶೆಯಂತೂ ಆಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES