Monday, December 23, 2024

ರಾಪಿಡೊ ಟ್ಯಾಕ್ಸಿ​ ಚಾಲಕನ ಮೇಲೆ ಸುಳ್ಳು ಕೇಸ್​ ನೀಡಿ ಸಿಕ್ಕಿಬಿದ್ದ ನಟಿ.!

ಬೆಂಗಳೂರು: ರಾಪಿಡೊ ಟ್ಯಾಕ್ಸಿ ಆಟೋ ಚಾಲಕನ ಮೇಲೆ ಕೇಸ್​ ದಾಖಲಿಸಿ ಈ ಹಿಂದೆ ರಂಪಾಟ ಮಾಡಿದ್ದ ನಟಿ ಯೋರ್ವಳ ​ನಿಜ ಬಣ್ಣ ಪೊಲೀಸರ ತನಿಖೆಯಿಂದ ಹೊರಬಿದ್ದಿದ್ದು, ನಟಿ ಸುಳ್ಳು ಕೇಸ್​ ದಾಖಲಿಸಿದ್ದಳು ಎಂಬ ಮಾಹಿತಿ ದೊರೆತಿದೆ.

ರಾಪಿಡೊ ಟ್ಯಾಕ್ಸಿ ಆಟೋ ಚಾಲಕನ ಮೇಲೆ ಸುಖಾ ಸುಮ್ಮನೆ ಲೈಂಗಿಕ ಕಿರುಕುಳ ಆರೋಪ ಮಾಡಿ, ಚಾಲಕನ ಮೇಲೆ ಈ ನಟಿ ಕೇಸ್​ ದಾಖಲು ಮಾಡಿದ್ದಳು. ಈಗ ಈ ನಟಿಯ ಆರೋಪವನ್ನ ಪೊಲೀಸ್​ ತನಿಖೆಯಲ್ಲಿ ತಳ್ಳಿಹಾಕಿ, ರ‍್ಯಾಪಿಡೋ​ ಚಾಲಕನಿಂದ ಲೈಂಗಿಕ ಕಿರುಕುಳ ಆಗಿಲ್ಲ. ದೂರಿನಲ್ಲಿ ನಟಿ ಹೇಳಿದ ರೀತಿ ಆ ದಿನ ಏನೂ ನಡೆದಿರಲಿಲ್ಲ ಅಂಶ ದೊರೆತಿದೆ. ಈ ಮೂಲಕ ಮಾಡೆಲ್​ ಕಂ ನಟಿಯ ಅಸಲಿ ಬಣ್ಣ ಬಯಲಾಗಿದೆ.

ರ‍್ಯಾಪಿಡೋ​ ಬುಕ್ ಮಾಡಿ ಮಾಡೆಲ್​ ಕ್ಯಾನ್ಸಲ್ ಮಾಡಿದ್ದಳು. ರ‍್ಯಾಪಿಡೋ​ ಚಾಲಕ ಮಾಡೆಲ್​ ಇದ್ದ ಜಾಗಕ್ಕೆ ಬಂದೇ ಇರಲಿಲ್ಲ. ಆ ವ್ಯಕ್ತಿ ಅಲ್ಲಿಗೆ ಬಂದಿದ್ದಕ್ಕೆ ಯಾವುದೇ ಪುರಾವೆ ಇಲ್ಲ. ಸುಖಾ ಸುಮ್ಮನೆ ಲೈಂಗಿಕ ಕಿರುಕುಳ ಮಾಡೆಲ್​ ಆರೋಪ ಮಾಡಿದ್ದಳು. ಆದ್ರೆ, ರ‍್ಯಾಪಿಡೋ​ ಚಾಲಕನಿಂದ ಲೈಂಗಿಕ ಕಿರುಕುಳ ಆಗಿಲ್ಲ. ದೂರಿನಲ್ಲಿ ನಟಿ ಹೇಳಿದ ರೀತಿ ಆ ದಿನ ಏನೂ ನಡೆದಿರಲಿಲ್ಲ. ಯಾವ ಕಾರಣಕ್ಕೆ ಸುಳ್ಳು ದೂರು ದಾಖಲಿಸಿದ್ರೋ ಗೊತ್ತಿಲ್ಲ. ಈ ಹಿಂದೆಯೂ ರ‍್ಯಾಪಿಡೋ ವಿರುದ್ಧ ದೂರು ದಾಖಲು ಮಾಡಿದ್ದಳು. ಪೊಲೀಸರು ವಿಚಾರಣೆ ನಡೆಸಿದಾಗ ಸುಳ್ಳಿನ ಕಹಾನಿ ಬಯಲಾಗಿದೆ.

RELATED ARTICLES

Related Articles

TRENDING ARTICLES