Monday, December 23, 2024

ನಾಗಮಂಗಲದಲ್ಲಿ ನಾನು ಗೆಲ್ಲದಿದ್ದರೆ ಶಿರಚ್ಛೇದನ ಮಾಡಿಕೊಳ್ಳುವೆ; ಸವಾಲೆಸೆದ ಶಿವರಾಮೇಗೌಡ

ಮಂಡ್ಯ: ನಾಗಮಂಗಲದಲ್ಲಿ 3 ಜನ ಪಕ್ಷೇತರರಾಗಿ ಸ್ಪರ್ಧೆ ಮಾಡೋಣ. ಅಲ್ಲಿ ನಾನು ಗೆಲ್ಲದಿದ್ದರೆ ಶಿರಚ್ಛೇದನ ಮಾಡಿಕೊಳ್ಳುವೆ ಎಂದು ಮಾಜಿ ಸಂಸದ ಎಲ್​.ಆರ್​ ಶಿವರಾಮೇಗೌಡ ಅವರು ಚಲುವರಾಯಸ್ವಾಮಿ ಹಾಗೂ ಸುರೇಶ್ ಗೌಡಗೆ ಸವಾಲೆಸೆದಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೌಡ್ಲೆಯಲ್ಲಿ ಮಾತನಾಡಿದ ಅವರು, ಸುರೇಶ್ ಗೌಡ, ಚಲುವರಾಯಸ್ವಾಮಿ ಇಬ್ಬರು ಪಕ್ಷಗಳ ಅಭ್ಯರ್ಥಿಗಳಾಗದೆ, ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿ. ಅವರ ವಿರುದ್ಧ ನಾನು ಗೆಲ್ಲದೆ ಹೋದರೆ ಶಿರಚ್ಛೇದನ ಮಾಡಿಕೊಳ್ಳುತ್ತೇನೆ. ನಾಗಮಂಗಲದಲ್ಲಿ ನಾನೇ ಲೀಡ್​ನಲ್ಲಿ ಗೆಲ್ತೇನೆ. ಪಾರ್ಟಿ ಮೇಲೆ ನೀವೇನು ಗೆಲ್ಲೋದು ಯಾರು ಬೇಕಾದ್ರು ಗೆಲ್ತಾರೆ. ಬನ್ನಿ ಪಕ್ಷೇತರರಾಗಿ ನಿಂತು ತೋರಿಸೋಣಾ ಎಂದರು.

ಈ ಹಿಂದೆ ಮಂಡ್ಯ ಜಿಲ್ಲೆ, ಜೆಡಿಎಸ್ ಭದ್ರಕೋಟೆ ಆಗಿತ್ತು ನಿಜ, ಜಿಲ್ಲೆಯ ಕೆಲ ಭಟ್ಟಂಗಿಗಳಿಂದ ಜೆಡಿಎಸ್ ಭದ್ರಕೋಟೆ ಕುಸಿಯುತ್ತಿದೆ. ನನಗೆ ದೇವೇಗೌಡರು, ಕುಮಾರಸ್ವಾಮಿ, ನಿಖಿಲ್ ಬಗ್ಗೆ ಗೌರವ ಇದೆ.‌ ಅವರ ಬಗ್ಗೆ ನಾನು ಹಗುರವಾಗಿ ಮಾತನಾಡುವುದಿಲ್ಲ. ನಾಗಮಂಗಲ ಕ್ಷೇತ್ರದಿಂದ ಸುರೇಶ್ ಗೌಡಗೆ ಜೆಡಿಎಸ್​ನಿಂದ ಟಿಕೆಟ್ ನೀಡಿದರೇ ಸೋಲು ಕಟ್ಟಿಟ್ಟ ಬುತ್ತಿ. ಜೆಡಿಎಸ್ ಪಕ್ಷ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೇ ಮಾತ್ರ ಗೆಲುವು ಖಚಿತ’ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES