Wednesday, January 22, 2025

ಪಿಎಸ್​ಐ ಪರೀಕ್ಷೆ ಅಕ್ರಮ; ಐಪಿಎಸ್​ ಅಧಿಕಾರಿ ಅಮೃತ್​ ಪೌಲ್​ ಮತ್ತೆ ಸಿಐಡಿ ವಶಕ್ಕೆ

ಬೆಂಗಳೂರು: 545 ಪಿಎಸ್​ಐ ಅಭ್ಯರ್ಥಿಗಳ ಅಕ್ರಮ ಪರೀಕ್ಷೆ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿತ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರನ್ನ ಮತ್ತೆ ಸಿಐಡಿ ವಶಕ್ಕೆ ಪಡೆದಿದೆ.

ಪಿಎಸ್​ಐ ಪರೀಕ್ಷೆ ಅಕ್ರಮ ಹಿನ್ನಲೆಯಲ್ಲಿ ಅಮೃತ್ ಪಾಲ್ ಅವರನ್ನ ಇಡಿ(ಜಾರಿ ನಿರ್ದೇಶನಾಲಯ) ಬಂಧನ ಮಾಡಿ ತನಿಖೆಗೆ ಒಳಪಡಿಸಿತ್ತು. ಈಗ ಬೆಂಗಳೂರಿನ ಸಿಐಡಿ ಕಾರ್ಲಟನ್ ಭವನ ಆವರಣ ಕಚೇರಿಯಲ್ಲಿ ಸಿಐಡಿ ಡಿವೈಎಸ್ ಪಿ ಅಂಜುಮಾಲಾ ನೇತೃತ್ವದಲ್ಲಿ ಅಮೃತ್​ ಪೌಲ್​ ಗ್ರಿಲ್ ನಡೆಸುತ್ತಿದ್ದಾರೆ. ಈ ವರೆಗೂ ಒಟ್ಟು ನಾಲ್ಕನೇ ಬಾರಿ ಪೌಲ್ ಅವರನ್ನ ವಶಕ್ಕೆ ಪಡೆದು ತೀವ್ರ ತನಿಖೆ ಮಾಡುತ್ತಿದ್ದಾರೆ.

RELATED ARTICLES

Related Articles

TRENDING ARTICLES