Monday, December 23, 2024

ಪರೇಶಮೆಸ್ತಾ ಪ್ರಕರಣ; ಸಿಬಿಐ ‘ಬಿ’ ರಿಪೋರ್ಟ್’ಗೆ ಕುಟುಂಬದಿಂದ ಆಕ್ಷೇಪಣೆ

ಕಾರವಾರ; ಕಳೆದ ನಾಲ್ಕುವರೆ ವರ್ಷದ ಹಿಂದೆ ಸಾವನ್ನಪ್ಪಿದ ಪರೇಶಮೆಸ್ತಾ ಸಾವಿನ ಪ್ರಕರಣದಲ್ಲಿ ಈಗಾಗಲೆ ಸಿಬಿಐ ಬಿ ರಿಪೋರ್ಟ್ ಸಲ್ಲಿಸಿದ್ದು, ಈವರಿಗೆ ಆತನ ಕುಟುಂಬಸ್ಥರು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದು, ನ್ಯಾಯಾಲಯವು ಅರ್ಜಿ ಸಲ್ಲಿಸಲು ನ್ಯಾಯಾಲಯವು ಸದ್ಯ ಪ್ರಕರಣವನ್ನ ಡಿಸೆಂಬರ್ 21ಕ್ಕೆ ಮುಂದುಡಿದೆ.

ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿರುವ ಬಿ ರಿಪೋರ್ಟ್ ಕುರಿತು ಪರೇಶ್ ತಂದೆ ಕಮಲಾಕರ ಮೇಸ್ತಾ ಹಾಗೂ ಅವರ ಪರ ವಕೀಲ ನಾಗರಾಜ ನಾಯಕ ಕೋರ್ಟ್ ಗೆ ಹಾಜರಾಗಿ ಬಿ ರಿಪೋರ್ಟ್ ಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದು, ಡಿಸೆಂಬರ್ 21ಕ್ಕೆ ಅರ್ಜಿ ವಿಚಾರಣೆಯನ್ನ ಮುಂದೂಡಿದೆ. ಮತ್ತೆ ಅಂದು ತಮ್ಮ ಅರ್ಜಿಯನ್ನ ಸಲ್ಲಿಸುವುದಾಗಿ ಮೃತ ಪರೇಶಮೆಸ್ತಾ ಪರ ವಕೀಲ ನಾಗರಾಜ ನಾಯಕ ತಿಳಿಸಿದ್ದಾರೆ.

2017ರ ಡಿಸೆಂಬರ್ ನಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದ್ದ ಗಲಭೆಯೊಂದರ ವೇಳೆ ಮೃತಪಟ್ಟಿದ್ದ ಪರೇಶ್ ಮೇಸ್ತಾನದ್ದು ಸಹಜ ಸಾವು ಎಂದು ಸಿಬಿಐ ನಾಲ್ಕು ವರ್ಷಗಳ ಬಳಿಕ ಹೊನ್ನಾವರ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿತ್ತು. ಆದ್ರೆ ಇದು ಸಾವಲ್ಲ, ಕೊಲೆ ಎಂದು ಪರೇಶ್ ಮೇಸ್ತಾ ಕುಟುಂಬ ಹಾಗೂ ಬಿಜೆಪಿಯವರು ವಾದಿಸಿದ್ದರು. ಅಲ್ಲದೇ ಪ್ರಕರಣ ರಾಜಕೀಯವಾಗಿ ತಿರುವು ಪಡೆದಿತ್ತು.

ಇಂದು ಹೊನ್ನಾವರದ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರಾದ ಕಮಲಾಕರ ಮೇಸ್ತಾ ಹಾಗೂ ನಾಗರಾಜ ನಾಯಕ, ನ್ಯಾಯಾಧೀಶರ ಮುಂದೆ ಸಿಬಿಐನ ಬಿ ರಿಪೋರ್ಟ್ ಕುರಿತು ತಕರಾರು ಸಲ್ಲಿಸಲು ಅವಕಾಶ ನೀಡಲು ಕೋರಿದ್ದಾರೆ. ಈ ಹಿಂದೆ ಕೂಡ ಬೇರೆ ಬೇರೆ ಪ್ರಕರಣದಲ್ಲಿ ಸಿಬಿಐ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ ಬಳಿ ಮರು ಅರ್ಜಿ ಸಲ್ಲಿಸಿ ತನಿಖೆ ನಡೆಸಿದ ಬಳಿಕ ಆರೋಪಿಗಳಿಗೆ ಶಿಕ್ಷೆ ಆಗಿರೋ ಪ್ರಕರಣಗಳಿವೆ ಹೀಗಾಗಿ ಈ ಪ್ರಕರಣದಲ್ಲಿಯೂ ನಮ್ಮಗೆ ನ್ಯಾಯ ಸಿಗಲಿದೆ ಅಂತಾ ಬಿಜೆಪಿಗರು ವಿಶ್ವಾಸ ವ್ಯಕ್ತಪಡಿಸ್ತಿದ್ದಾರೆ.

ಒಟ್ಟಾರೆ ಘಟನೆ ನಡೆದ ಸಂರ್ಭದಲ್ಲಿ ಬಿಜೆಪಿಗರು ಪರೇಶಮೆಸ್ತಾ ಸಾವಿನ ಪ್ರಕರಣವನ್ನ ಸಿಬಿಐಗೆ ಒಪ್ಪಿಸುವಂತೆ ಪ್ರತಿಭಸಿದ್ರು, ಬಳಿಕ ಅಂದಿನ ಕಾಂಗ್ರೇಸ್ ಸರಕಾರ ಪ್ರಕರಣವನ್ನ ಸಿಬಿಐಗೆ ನೀಡಿತ್ತು. ಆದ್ರೆ ಈಗ ಬಿಜೆಪಿಗರು ಸಿಬಿಐ ವರದಿಯೇ ಸರಿಯಿಲ್ಲ ಅನ್ನೋ ಮೂಲಕ ಮತ್ತೆ ನ್ಯಾಯಾಂಗ ಹೋರಾಟಕ್ಕೆ ಮುಂದಾಗಿದ್ದಾರೆ. ಇದು ಚುನಾವಣೆಯ ವೇಳೆ ಯಾವೇಲ್ಲಾ ತಿರುವು ಪಡೆದುಕೊಳ್ಳತ್ತೆ ಅಂತಾ ಕಾದು ನೋಡಬೇಕಿದೆ.

ಉದಯ್ ಬರ್ಗಿ, ಪವರ್ ಟಿವಿ. ಕಾರವಾರ

RELATED ARTICLES

Related Articles

TRENDING ARTICLES