Wednesday, January 22, 2025

ಸ್ವಪಕ್ಷದವರಿಂದ ದೂರವಿರಿ ಎಂದು ಸಿದ್ದರಾಮಯ್ಯಗೆ ಸಲಹೆ ನೀಡಿದ ಕೆ.ಹೆಚ್​ ಮುನಿಯಪ್ಪ

ಬೆಂಗಳೂರು: ಕೋಲಾರದಲ್ಲಿ ಸಿದ್ದರಾಮಯ್ಯ ಕಾರ್ಯಕ್ರಮಗಳಿಂದ ಗೈರು ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯಗೆ ಪರೋಕ್ಷವಾಗಿ ಕೆ.ಹೆಚ್​ ಮುನಿಯಪ್ಪ ಎಚ್ಚರಿಕೆ ನೀಡಿದರು.

ಸಿದ್ದರಾಮಯ್ಯ ವಿರುದ್ಧ ಮುನಿಸು ಬಗ್ಗೆ ಮಾತನಾಡಿದ ಮಾಜಿ ಸಂಸದ ಕೆ.ಹೆಚ್​ ಮುನಿಯಪ್ಪ, ಕೋಲಾರ ಕಾಂಗ್ರೆಸ್ ನಲ್ಲಿ ಸಮಸ್ಯೆ ಇದೆ. ಮೂಲ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇದನ್ನ ಸರಿಪಡಿಸಿಕೊಂಡು ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬಂದರೆ ಸ್ಪರ್ಧೆ ಅನುಕೂಲ. ಕಳೆದ ಬಾರಿ ಬಿಜೆಪಿ ಪರವಾಗಿ ಕೆಲಸ ಮಾಡಿದವರನ್ನು ನಂಬಿಕೊಂಡು ಕೋಲಾರಕ್ಕೆ ಬರಬೇಡಿ ಎಂದು ಸಿದ್ದರಾಮಯ್ಯ ಅವರಿಗೆ ಮುನಿಯಪ್ಪ ಎಚ್ಚರವಹಿಸಿದರು.

ಕೆಲವರನ್ನ ನಂಬಿಕೊಂಡು ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬಂದರೆ ಅವರ ಗೆಲುವು ಕಷ್ಟವಾಗಬಹುದು. ಸಮಸ್ಯೆ ಸರಿಪಡಿಸಿಕೊಂಡೇ ಬನ್ನಿ ಎಂದು ಸಲಹೆ ನೀಡಿದ್ದೇನೆ ಎಂದರು.

ಇನ್ನು ಸಿದ್ದರಾಮಯ್ಯ ಹೋದಾಗ ಕೋಲಾರದಲ್ಲಿ ಗೈರಾದ ವಿಚಾರವಾಗಿ ಮಾತನಾಡಿ, ಗುಜರಾತ್ ನಲ್ಲಿ ಚುನಾವಣಾ ಕೆಲಸ ಇತ್ತು. ಸಿದ್ದರಾಮಯ್ಯ ಜೊತೆ ಮಾತಾಡಿದ್ದೇನೆ. ಅವರನ್ನು ಸ್ವಾಗತ ಮಾಡಿದ್ದೇನೆ. ಆದರೆ ಅಲ್ಲಿ ಸ್ವಲ್ಪ ಭಿನ್ನಾಭಿಪ್ರಾಯವಿದೆ. ಅದನ್ನು ಸರಿ‌‌ ಮಾಡಬೇಕು ಎಂದು ಹೇಳಿದ್ದೇನೆ.

ಸಿದ್ದರಾಮಯ್ಯ ಅವರು ಸ್ಪರ್ಧೆಗೆ ಕೋಲಾರದಲ್ಲಿ ರಿಸ್ಕ್ ಏನು ಇಲ್ಲ. ನಾವೆಲ್ಲ ಒಂದಾಗಿ ಕೆಲಸ ಮಾಡಿದ್ರೆ ಗೆಲ್ಲಲು ಕಷ್ಟವಿಲ್ಲ. ಹೋದ ಬಾರಿ ಬಿಜೆಪಿಗೆ ಕೆಲಸ ಮಾಡಿದವರ ಮುಂದಾಳತ್ವದಲ್ಲಿ ಹೋದರೆ ಗೆಲುವು ಕಷ್ಟ ಆಗುತ್ತದೆ. ಕಾಂಗ್ರೆಸ್ ನಲ್ಲಿ ಅವರನ್ನು ಸೋಲಿಸಲು ಯಾರೂ ಸಂಚು ಮಾಡುತ್ತಿಲ್ಲ. ಲಾಯಲ್ ಕಾಂಗ್ರೆಸ್ ನವರು ಯಾರು ಇದ್ದಾರೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.

ಇನ್ನು ರಮೇಶ್ ಕುಮಾರ್ ಬಣದ ವಿರುದ್ದ ಅಸಮಾಧಾನ ಹೊರಹಾಕಿದ ಮುನಿಯಪ್ಪ, ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕೋಲಾರ ಸ್ಪರ್ಧಿಸಿದರೆ, ಸಿದ್ದರಾಮಯ್ಯ ಗೆಲುವಿಗೆ ಕಷ್ಟ ಎಂಬ ಮೆಸೇಜ್ ಮುನಿಯಪ್ಪ ಪಾಸ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES