ಹಾವೇರಿ: ಸಿಎಂ ಬಸವರಾಜ ಬೊಮ್ಮಾಯಿ ಅವರ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕಲು ಕೈ ಪಡೆ ರಣ ತಂತ್ರ ಹಣೆದಿದ್ದು, ಕಾಂಗ್ರೆಸ್ನಿಂದ ಸ್ಪರ್ಧಿಸಲು ಕೆಪಿಸಿಸಿಗೆ ಮೂವರು ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಸಿಎಂ ಬೊಮ್ಮಾಯಿ ಅವರು ಶಿಗ್ಗಾವಿ-ಸವಣೂರು ಮತ ಕ್ಷೇತ್ರದಿಂದ ಸತತವಾಗಿ ವಿಧಾನಸಭಾ ಚುನಾವಣೆಯಲ್ಲಿ ಮೂರು ಬಾರಿ ಅಯ್ಕೆಯಾಗಿದ್ದಾರೆ. ಸಿಎಂ ಎದುರಾಳಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ನಿಂದ ಘಟಾನು ಘಟಿ ಆಕಾಂಕ್ಷಿ ಅಭ್ಯರ್ಥಿಗಳು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ.
ಬಸವರಾಜ ಬೊಮ್ಮಯಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಹಾಗೂ ಇತ್ತೀಚಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಸೋಮಣ್ಣ ಬೇವಿನಮರದ ಹಾಗೂ ಸಿಬಿ.ಯಲಿಗಾರ, ಸೇವಾ ಸಂಸ್ಥೆಯ ಅಧ್ಯಕ್ಷರಾದ ಶಶಿಧರ ಯಲಿಗಾರ ಸಹ ಅವರ ಅಭಿಮಾನಿಗಳ ಒತ್ತಾಯದ ಮೇರೆಗೆ ಕಾಂಗ್ರೆಸ್ ಸದಸ್ಯತ್ವ ಪಡೆದು ಟಿಕೆಟ್ ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಇದರ ಜೊತೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಎಚ್ ಕೆ.ಪಾಟೀಲ್, ಹಾಗೂ ಜಮೀರ್ ಅಹ್ಮದ್ ಅಪ್ತರಾಗಿ ಗುರುತಿಸಿಕೊಂಡಿರುವ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಸಹ ಟಿಕೆಟ್ ಗಾಗಿ ಭಾರಿ ಪೈಪೋಟಿ ನಡೆಸಿದ್ದಾರೆ. ಡಿಕೆಶಿ ಅಪ್ತ ದಿ. ಮಾಜಿ ಶಾಸಕ ಶಿವಳ್ಳಿ ಅವರ ಸಹೋದರ ಎಸ್ಎಸ್ ಶಿವಳ್ಳಿ ಅವರು ಸಹ ಟಿಕೆಟ್ ಗಾಗಿ ಲಾಭಿ ನಡೆಸಿದ್ದಾರೆ. ಇದರ ಜೊತೆ ಹಾವೇರಿ ನಗರಸಭೆ ಅಧ್ಯಕ್ಷರಾದ ಸಂಜೀವ್ ಕುಮಾರಗ ನೀರಲಗಿ, ಕೆಪಿಸಿಸಿ ಮುಖಂಡರಾಗಿರುವ ಯಾಸಿರ್ಖಾನ್ ಪಠಾಣ್ ಸಹ ಅದೃಷ್ಟ ಪರಿಕ್ಷೇಗೆ ಮುಂದಾಗಿದ್ದಾರೆ.
ಇವರೆಲ್ಲಾದರ ನಡುವೆ ಸೋಮಣ್ಣ ಬೇವಿನಮರದ ಹಾಗು ಶಶಿಧರ ಯಲಿಗಾರ ಮತ್ತು ಅಜ್ಜಂಪೀರ್ ಖಾದ್ರಿ, ಹೈಕಾಮಾಂಡ್ ಮಟ್ಟದಲ್ಲಿ ಟಿಕೆಟ್ ಗಾಗಿ ಭರ್ಜರಿ ಪೈಪೋಟಿ ನಡೆಸಿದ್ದಾರೆ. ಈ ನಡುವೆ ಲಿಂಗಾಯತ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮಾತುಗಳು ಕೆಪಿಸಿಸಿ ವಲಯದಲ್ಲಿ ಕೇಳಿ ಬರುತ್ತಿದೆ. ಹೀಗಾಗಿ ಲಿಂಗಾಯತ ಅಭ್ಯರ್ಥಿಗಳಾದ ಶಶಿಧರ ಯಲಿಗಾರ ಹಾಗೂ ಸೋಮಣ್ಣ ಬೇವಿನಮರದ ಇಬ್ಬರು ಅಭ್ಯರ್ಥಿಗಳು ಇದ್ದಾರೆ. ಇವರ ನಡುವೆ ಯಾರಿಗೆ ಟಿಕೆಟ್ ಸಿಗ್ಗುತ್ತದೆ ಎನ್ನೋದು ತೀರ್ವ ಕುತೂಹಲ ಮೂಡಿಸಿದೆ.