Wednesday, January 22, 2025

ಆ 2 ಕ್ಷೇತ್ರದ ಮೇಲೆ ಸಿದ್ದರಾಮಯ್ಯ ಕಣ್ಣು.!

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಗುಟ್ಟು ಜೋಪಾನವಾಗಿಟ್ಟಿದ್ದಾರೆ.

ಇದೀಗ‌ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡಲಿದ್ದೇನೆ ಎಂದು ಪರೋಕ್ಷವಾಗಿ ಹೇಳಿದ್ದರು. ಈಗ ವಿರೋಧಿಗಳು ಅಲರ್ಟ್​ ಆಗುತ್ತಿದ್ದಂತೆ, ಸಿದ್ದರಾಮಯ್ಯ ಅವರು ಬೇರೆ ವಿಧಾನಸಭೆ ಚುನಾವಣೆಗೆ ಕಣಕ್ಕಿಳಿಯಲು ಸಿದ್ದರಾಮಯ್ಯ ಅವರ ಬೆಂಬಲಿಗರು ಒತ್ತಡ ಹಾಕುತ್ತಿದ್ದಾರಂತೆ.

ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಟೀಂ ಹೇಳುತ್ತಿದೆ. ಆದ್ರೆ ಸಿದ್ದಾರಾಮಯ್ಯನ ತಲೆ ಇರೋ ಕ್ಷೇತ್ರವೇ ಬೇರೆ ಇದೆ. ಸದ್ಯಕ್ಕೆ ವಿರೋಧಿಗಳಿಗೆ ಅಹಾರ ಅಗೋದು ಬೇಡ ಅಂತ ತನ್ನ ಸ್ಪರ್ಧೆಯ ಕ್ಷೇತ್ರವನ್ನ ಸಿದ್ದು ಗುಟ್ಟು ಬಿಡುತ್ತಿಲ್ಲ ಎನ್ನಲಾಗಿದೆ.

ಚುನಾವಣೆ ಸ್ಪರ್ಧೆ ಬಗ್ಗೆ ಕಳೆದ ವಾರ ಸಿದ್ದರಾಮಯ್ಯ ಅವರು ತಮ್ಮ ಅಪ್ತರ ನಡುವೆ ರಹಸ್ಯ ಸಭೆ ನಡೆಸಿದ್ದು, ಇದ್ರಲ್ಲಿ ಕೆಲವರು ಕ್ಷೇತ್ರದ ಹೆಸರನ್ನ‌ ಈಗಲೇ ರಿವೀಲ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ, ಕ್ಷೇತ್ರದ ಗುಟ್ಟು ಬಿಟ್ಟರೆ ವಿರೋಧಿಗಳಿಗೆ ಸುಲಭದ ಆಹಾರ ಆಗುತ್ತೇವೆ. ಸಿದ್ದರಾಮಯ್ಯರಿಗೆ(ನಿಮಗೆ) ಹೊರಗಡೆ ಹೇಗೆ ಶತ್ರುಗಳಿದರೋ ನಮ್ಮ ಪಕ್ಷದಲ್ಲಿಯೇ ನಿಮ್ಮನ್ನ ಸೋಲಿಸಲು ರಣತಂತ್ರ ಎಣೆಯುತ್ತಾರೆ. ಹೀಗಾಗಿ ‌ಕ್ಷೇತ್ರದ ಗುಟ್ಟು ಬಿಟ್ರೆ ಸ್ವಪಕ್ಷದವರೇ ವಿರೋಧಿಗಳಿಗೆ ಹಾಕಿಕೊಡುತ್ತಾರೆ ಎಂದು‌ ಸಲಹೆ ನೀಡಿದ್ದಾರೆ.

ಇನ್ನು ಕೆಲವು ಬೆಂಬಲಿಗರು ಚುನಾವಣೆ ಸಂದರ್ಭದಲ್ಲಿ ನೀವು ಕ್ಷೇತ್ರ ಘೋಷಣೆ ಮಾಡೋದ್ರಿಂದ ಬಾರೀ‌ ಎಫೆಕ್ಟ್ ಅಗುತ್ತದೆ. ಹೀಗಾಗಿ ಈಗಲೇ ನೀವು ನಿಲ್ಲುವ ಕ್ಷೇತ್ರ ಸ್ಪರ್ಧೆ ಬಗ್ಗೆ ಘೋಷಣೆ ಮಾಡಿ, ಜ‌ನರ ಸಂಪರ್ಕದ‌ ಜೊತೆ ಒಡನಾಟ ಇದ್ರೆ ಜಯ ಸುಲಭ ಅನ್ನೋ‌ ಸಲಹೆಯನ್ನ ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆಂದು ಹೇಳಲಾಗಿದೆ.

RELATED ARTICLES

Related Articles

TRENDING ARTICLES