Wednesday, January 22, 2025

ಪಂಚರತ್ನ ರಥಯಾತ್ರೆಗೆ ನ. 18 ಕ್ಕೆ ಮರು ಚಾಲನೆ

ಬೆಂಗಳೂರು: ಜೆಡಿಎಸ್​(ಜಾತ್ಯಾತೀತ ಜನತಾ ದಳ)ನ ಮಹತ್ವದ ಪಂಚರತ್ನ ರಥಯಾತ್ರೆಗೆ ಮರು ಚಾಲನೆಗೆ  ನಿರ್ಧರಿಸಿದೆ. ನವೆಂಬರ್ 18 ರಂದು ಪಕ್ಷದ ರಾಷ್ಟ್ರಾಧ್ಯಕ್ಷರು ಈ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.

ಈ ಯಾತ್ರೆಯನ್ನು ನವೆಂಬರ್​​ 18 ಕ್ಕೆ ಮುಂದೂಡಲಾಗಿದೆ. ಕಳೆದ ಎರಡು ದಿನಗಳಿಂದ ಜಿಟಿ ಜಿಟಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಂಚರತ್ನ ರಥಯಾತ್ರೆಯನ್ನು ಮತ್ತೆ ಈಗ ಮುಂದೂಡಲಾಗಿದೆ.

ಮುಳಬಾಗಿಲುವಿನ ಕುರುಡುಮಲೆ ಮಹಾಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಂಚರತ್ನ ಯಾತ್ರೆಗೆ ಹೆಚ್​ಡಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿಗಳು ಚಾಲನೆ ನೀಡಿದ್ದಾರೆ. ಆದರೆ, ಪಂಚರತ್ನ ರಥಗಳಿಗೆ ಚಾಲನೆ ನೀಡಿ ಬಹಿರಂಗ ಸಮಾವೇಶ ಪ್ರಾರಂಭಿಸುವ ವೇಳೆ ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಕಾರಣಕ್ಕೆ ಈ ಯಾತ್ರೆಯನ್ನ ಅಲ್ಲಿಗೆ ಮೊಟಕುಗೊಳಿಸಿ ಮುಂದೂಡಲಾಯಿತು.

ಮಳೆಯಿಂದಾಗಿ ಕಳೆದ ಬಾರಿ ತಟಸ್ಥಗೊಂಡಿದ್ದ ಯಾತ್ರೆಗೆ ಈಗ ಇದೀಗ ಮತ್ತೆ ಚಾಲನೆ ನೀಡಲು ಪಕ್ಷದ ನಿರ್ಧಾರ ಮಾಡಿದ್ದು, ಮುಳಬಾಗಿಲಿನಿಂದಲೇ ಯಾತ್ರೆಗೆ ಚಾನಲೆ ನೀಡಲಿದ್ದಾರೆ. ಪಂಚ ಯೋಜನೆಗಳನ್ನ ಮುಂದಿಟ್ಟುಕೊಂಡು ಈ ಯಾತ್ರೆ ಮೂಲಕ ಮತದಾರರ ಮುಂದೆ ಜೆಡಿಎಸ್​ ಪ್ರಚಾರ ಮಾಡಲಿದೆ.

RELATED ARTICLES

Related Articles

TRENDING ARTICLES