Monday, December 23, 2024

ಕಾಂಗ್ರೆಸ್ ಟಿಕೆಟ್​​’ಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಬೆಂಗಳೂರು: ಮುಂಬರುವ 2023 ವಿಧಾನಸಭಾ ಚುನಾವಣೆ ಕಾಂಗ್ರೆಸ್ ಟಿಕೆಟ್​ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ ಮಾಡಿ ರಾಜ್ಯ ಕಾಂಗ್ರೆಸ್​ ಆದೇಶಿಸಿದೆ.

ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡುವ ಅಭ್ಯರ್ಥಿಗಳು ತಮ್ಮ ಟಿಕೆಟ್​ಗಾಗಿ ಕಪಿಸಿಸಿ(ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿ) ಗೆ ಅರ್ಜಿ ಸಲ್ಲಿಸಬೇಕೆಂದು ಇತ್ತೀಚಿಗೆ ಡಿ.ಕೆ ಶಿವಕುಮಾರ್ ಅವರು ಆದೇಶಿಸಿದ್ದರು. ಈ ಹಿನ್ನಲೆಯಲ್ಲಿ ಸುಮಾರು 1000 ಕ್ಕೂ ಹೆಚ್ಚು ಅರ್ಜಿಗಳು ಈ ವರೆಗೂ ಕಾಂಗ್ರೆಸ್​ಗೆ ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ. ಇದನ್ನ ಕಾಂಗ್ರೆಸ್​ ಹೈಕಮಾಂಡ್​ ಗಮನಿಸಿ ಟಿಕೆಟ್​ ಘೋಷಣೆ ಮಾಡಲಿದೆ.

ಈ ಹಿನ್ನಲೆಯಲ್ಲಿ ನವೆಂಬರ್ 05 ರಿಂದ 15 ವರೆಗೆ ಸಲ್ಲಿಸಬೇಕೆಂದ ಮೇಲೆ ಇಂದು ಅರ್ಜಿ ಸಲ್ಲಿಸಲು ಕೊನೆಯದಿನ ಆಗಿದ್ದರಿಂದ ಹಲವರು ಕಾಂಗ್ರೆಸ್​ಗೆ ಅರ್ಜಿ ಸಲ್ಲಿಸಲಾಗಿಲ್ಲ. ಹೀಗಾಗಿ ರಾಜ್ಯ ಕಾಂಗ್ರೆಸ್​ ನವೆಂಬರ್ 21 ರವರೆಗೆ ಅರ್ಜಿ ಅವಧಿ ವಿಸ್ತರಣೆ ಮಾಡಿ ಸೂಚನೆ ಹೊರಡಿಸಿದೆ.

ಈವರೆಗೂ ಕಾಂಗ್ರೆಸ್ ನ ಘಟಾನುಘಟಿಗಳೇ ಇನ್ನೂ ಅರ್ಜಿ ಹಾಕಿಲ್ಲ. 30 ಕ್ಕೂ ಹೆಚ್ಚು ಹಾಲಿ ಶಾಸಕರು ಅರ್ಜಿ ಹಾಕಿಲ್ಲ. ಹಾಗಾಗಿಯೇ ನವೆಂಬರ್ 21 ರವರೆಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ ‌ಮಾಡಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ತಿಳಿಸಿದೆ.

 

RELATED ARTICLES

Related Articles

TRENDING ARTICLES