Wednesday, June 5, 2024

ಶಿವಸೇನೆ ಪಕ್ಷದ ಹೆಸರು-ಚಿಹ್ನೆ ಸ್ಥಗಿತ; ಉದ್ಧವ್ ಠಾಕ್ರೆ ಸಲ್ಲಿಸಿದ್ದ ಅರ್ಜಿ ವಜಾ

ಮಹಾರಾಷ್ಟ್ರ: ಶಿವಸೇನಾ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ಸ್ಥಗಿತಗೊಳಿಸಿದ ಚುನಾವಣಾ ಆಯೋಗದ ಮಧ್ಯಂತರ ಆದೇಶದ ವಿರುದ್ಧ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ಮಹಾರಾಷ್ಟ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಹಾಗೂ ಉದ್ಧವ್​ ಠಾಕ್ರೆ ಅವರ ನಡುವಿನ ಶಿವಸೇನೆ ಬಣಗಳ ನಡುವಿನ ವಿವಾದವನ್ನು ಆದಷ್ಟು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ದೆಹಲಿ ಹೈಕೋರ್ಟ್ ಚುನಾವಣೆ ಆಯೋಗಕ್ಕೆ ಕೇಳಿದೆ.

ಶಿವಸೇನೆಯ ಎರಡು ಬಣಗಳು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಶಿವಸೇನೆಯ ಬಿಲ್ಲು ಮತ್ತು ಬಾಣದ ಚುನಾವಣಾ ಚಿಹ್ನೆ ಮತ್ತು ಹೆಸರನ್ನು ಬಳಸುವ ಚುನಾವಣಾ ಆಯೋಗದ ಪ್ರಕ್ರಿಯೆಗಳು ಶೀಘ್ರದಲ್ಲೇ ಮುಕ್ತಾಯಗೊಳ್ಳಲಿವೆ ಎಂದು ನ್ಯಾಯಮೂರ್ತಿ ಸಂಜೀವ್ ನರುಲಾ ಹೇಳಿದರು. ಸಮಸ್ಯೆಯನ್ನು ಸಾಧ್ಯವಾದಷ್ಟು ತ್ವರಿತವಾಗಿ ನಿರ್ಧರಿಸಲು ಅದು ಚುನಾವಣಾ ಸಮಿತಿಯನ್ನು ಕೇಳಿದೆ. ಪ್ರಸ್ತುತ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಈ ವರ್ಷದ ಆರಂಭದಲ್ಲಿ, ಪ್ರಸ್ತುತ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿರುವ ಏಕನಾಥ್ ಶಿಂಧೆ ಅವರು ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗೆ ಮೈತ್ರಿ ಸರ್ಕಾರವನ್ನ ತೊರೆದಿದ್ದರು. ಆಗ ಶಿವಸೇನೆ ಪಕ್ಷದಲ್ಲಿದ್ದ 55 ಶಾಸಕರ ಪೈಕಿ 40ಕ್ಕೂ ಹೆಚ್ಚು ಶಾಸಕರು ಶಿಂಧೆ ಅವರನ್ನು ಬೆಂಬಲಿಸಿದ್ದು, ಇದಕ್ಕೆ ಇಬ್ಬರ ನಡುವೆ ಶಿವಸೇನೆ ಪಕ್ಷದ ಹೆಸರು ಹಾಗೂ ಬಾವುಟದ ಬಗ್ಗೆ ಬಂಡಾಯ ಎದ್ದಿದ್ದರು.

RELATED ARTICLES

Related Articles

TRENDING ARTICLES