Wednesday, January 22, 2025

ಬಿಜೆಪಿ ಮುಖಂಡನ ಬರ್ಬರ ಹತ್ಯೆ; ಸ್ಥಳಕ್ಕೆ ಶಾಸಕ ಭೇಟಿ

ಕಲಬುರಗಿ; ಬಿಜೆಪಿ ಮುಖಂಡನ ಬರ್ಬರ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ನಡೆದಿದೆ.

ಮಲ್ಲಿಕಾರ್ಜುನ್ ಮುತ್ಯಾಲ (64) ಬರ್ಬರ ಹತ್ಯೆ, ಮರ್ಮಾಂಗಕ್ಕೆ ಚಾಕು ಇರಿದು, ಕುತ್ತಿಗೆ ಹಗ್ಗ ಬಿಗಿದು ನಿನ್ನೆ ತಡರಾತ್ರಿ ಎಲೆಕ್ಟ್ರಾನಿಕ್ ಅಂಗಡಿಯಲ್ಲೆ ಕೊಚ್ಚಿ ಕೊಲೆ ಮಾಡಲಾಗಿದೆ.

ಎಲೆಕ್ಟ್ರಾನಿಕ್ ಅಂಗಡಿ ಮತ್ತು ಟಿವಿ ಶಾಪ್ ಮಾಲೀಕ, ಬಿಜೆಪಿ ಮುಖಂಡನಾದ ಮಲ್ಲಿಕಾರ್ಜುನ ಮುತ್ಯಾಲ, ಕೊಲೆ ಮಾಡಿದ ದುಷ್ಕರ್ಮಿಗಳು ನಾಪತ್ತೆಯಾಗಿದ್ದು, ಸ್ಥಳಕ್ಕೆ ಸೇಡಂ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ಭೇಟಿ ನೀಡಿ ಪರೀಶಿಲಿಸಿದ್ದಾರೆ. ಈ ಬಗ್ಗೆ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES