Monday, December 23, 2024

ಇಂದೇ ನಿಗದಿಯಾಗಲಿದ್ಯಾ ಓಲಾ, ಉಬರ್ ಪ್ರಯಾಣ ದರ?

ಬೆಂಗಳೂರು : ಇಂದು ಸಾರಿಗೆ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಉಬರ್ ದರ ನಿಗದಿಗೆ ಸಾರಿಗೆ ಇಲಾಖೆ ಸಭೆ ಕರೆದಿದೆ.

ಶಾಂತಿನಗರ ಸಾರಿಗೆ ಇಲಾಖೆ ಕಚೇರಿಯಲ್ಲಿ ಮಹತ್ವದ ಮೀಟಿಂಗ್‌ ನಡೆಯಲಿದ್ದು, ಸಾರ್ವಜನಿಕರು, ಆಟೋ ಚಾಲಕರು, ಓಲಾ-ಉಬರ್ ಕಂಪನಿಗಳ ಜೊತೆ ಸಭೆ ನಡೆಯಲಿದೆ. ಈಗಾಗಲೇ ಸಭೆ ನಡೆಸಿ ಪರಿಹಾರಕ್ಕೆ ಸೂಚನೆ ನೀಡಿರೋ ರಾಜ್ಯ ಹೈಕೋರ್ಟ್, ಹೊಸ ದರ ನಿಗದಿ ಮಾಡಲು ಅಧಿಕಾರಿಗಳಿಗೆ ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇನ್ನು, ಸಾರಿಗೆ ಇಲಾಖೆಯಿಂದ ಇಂದೇ ಓಲಾ-ಉಬರ್ ಫೈನಲ್ ರೇಟ್ ಫಿಕ್ಸ್ ಆಗುತ್ತಾ? ಮಿನಿಮಮ್ 2 ಕಿ.ಮೀಗೆ 100 ರೂ ದರ ನಿಗದಿ ಮಾಡುವಂತೆ ಕಂಪನಿಗಳು ಡಿಮ್ಯಾಂಡ್ ಮಾಡಿದೆ. ಹೀಗಾಗಿ ಹೊಸ ದರ ನಿಗದಿಗೆ ಇಲಾಖೆ ಅಧಿಕಾರಿಗಳು ಮತ್ತೆ ಸಭೆ ಮಾಡಲಿದ್ದಾರೆ.

RELATED ARTICLES

Related Articles

TRENDING ARTICLES