Thursday, January 23, 2025

ಒಡನಾಡಿ ಸಂಸ್ಥೆಯ ಮಕ್ಕಳಿಂದ ಇಂದು ಕರಾಳ ದಿನಾಚರಣೆ ಆಚರಣೆ

ಮೈಸೂರು: ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನ ಇಂದು ಆಚರಣೆ ಮಾಡಲಾಗುತ್ತಿದೆ. ಆದರೆ, ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯಲ್ಲಿ ಕಪ್ಪು ಪಟ್ಟಿ ಧರಿಸಿಕೊಂಡು ಕರಾಳ ದಿನವಾಗಿ ಆಚರಣೆ ಮಾಡಲಾಯಿತು.

ರಾಜ್ಯದ ಪ್ರತಿಸ್ಠಿತ ಸ್ವಾಮೀಜಿಯಿಂದ ಮಕ್ಕಳ ಮೇಲೆ ಕಿರುಕುಳಕ್ಕೆ ಒಳಗಾದ ಹಿನ್ನೆಲೆಯಲ್ಲಿ ಮಕ್ಕಳಿಗೆ ಈ ಕೇಸ್​ನಲ್ಲಿ ನ್ಯಾಯ ದೊರಕುತ್ತಿಲ್ಲ. ಈ ವೇಳೆ ಸಂಭ್ರಮದ ಆಚರಣೆ ಸೂಕ್ತವಲ್ಲ ಎಂದು ಒಡನಾಡಿ ಸೇವಾ ಸಂಸ್ಥೆಯ ಸ್ಟ್ಯಾನ್ಲಿ ಹಾಗೂ ಪರುಶುರಾಮ್ ಸೇರಿ ಮಕ್ಕಳೊಂದಿಗೆ ಕರಾಳ ದಿನ ಆಚರಣೆ ಮಾಡಿದ್ದಾರೆ.

ಈ ಮಕ್ಕಳಿಗೆ ನ್ಯಾಯಕ್ಕಾಗಿ ಇಂದು ನಾಡಿನ ಜನತೆ ಮಕ್ಕಳ ನ್ಯಾಯಕ್ಕಾಗಿ ಒಂದು ನಿಮಿಷ ಮೌನಚರಣೆ ಮಾಡಿ ಕನಿಷ್ಠ ಒಂದು ರೂಪಾಯಿ ನೀಡುವ ಮೂಲಕ ಕಿರುಕುಳಕ್ಕೆ ಒಳಗಾದ ಮಕ್ಕಳ ಪರ ನಿಲ್ಲಬೇಕು. ಮಕ್ಕಳಿಗೆ ನ್ಯಾಯ ದೊರೆಯುವಂತಾಗಬೇಕು ಎಂದರು.

ಈ ಹಿನ್ನೆಲೆ ಇಂದು ಕಪ್ಪು ಪಟ್ಟಿ ಧರಿಸಿ ಮಕ್ಕಳ ದಿನಾಚರಣೆಯ ಕರಾಳ ದಿನ ಆಚರಣೆ ಮಾಡುತ್ತಿದ್ದೇವೆ ಎಂದು ಒಡನಾಡಿ ಸೇವಾ ಸಂಸ್ಥೆ ನ್ಯಾಯಕ್ಕಾಗಿ ಒತ್ತಾಯ ಮಾಡಿದರು.

RELATED ARTICLES

Related Articles

TRENDING ARTICLES