ಮಂಗಳೂರು : ಮಗುವಿನ ರೋಗ ವಾಸಿ ಮಾಡಲು ದಿಕ್ಕು ಕಾಣದೆ ತುಳುನಾಡಿನ ದೈವ ಕೊರಗಜ್ಜನ ಮಹಿಮೆಗೆ ವಿದೇಶಿ ದಂಪತಿ ಮಾರುಹೋಗಿದ್ದಾರೆ.
ಮೂರು ತಿಂಗಳ ಕಾಲ ಬಂಟ್ವಾಳ ತಾಲೂಕಿನ ಕುಮ್ಢೇಲು ಎಂಬಲ್ಲಿ ವಾಸವಿದ್ದ ದಂಪತಿ, ರೋಗ ವಾಸಿ ಮಾಡುವಂತೆ ಕೊರಗಜ್ಜನಿಗೆ ಹರಕೆ ಹೇಳಿಕೊಂಡಿದ್ದರು. ಉಕ್ರೇನ್ ದೇಶದ ಆ್ಯಂಡ್ರೂ, ಎಲೆನಾ ದಂಪತಿಯ ಏಳು ವರ್ಷದ ಮಗು ಮ್ಯಾಕ್ಸಿಂಗೆ ಟೈಪ್ ವನ್ ಸುಗರ್ ಇತ್ತು. ಜೀವನ ಪೂರ್ತಿ ಇನ್ಸುಲಿನ್ ಇಂಜೆಕ್ಷನ್ ಬಿಟ್ಟು ಬೇರೆ ಚಿಕಿತ್ಸೆ ಇಲ್ಲ ಎಂದಿದ್ದ ಅಲೋಪತಿ ವೈದ್ಯರು, ಮಧ್ಯಪ್ರದೇಶದ ವೃಂದಾವನದಲ್ಲಿದ್ದ ಭಕ್ತಿಭೂಷಣದಾಸ್ ಗುರೂಜಿ ಬಗ್ಗೆ ಮಾಹಿತಿ ಪಡೆದು ಆಗಮಿಸಿದ್ದಾರೆ.
ಸದ್ಯಕ್ಕೆ ಬಂಟ್ವಾಳ ತಾಲೂಕಿನ ಕುಮ್ಡೇಲಿನಲ್ಲಿ ಗೋಶಾಲೆಯಲ್ಲಿ ಉಳಿದುಕೊಂಡಿರುವ ಗುರೂಜಿ, ನಾಡಿ ಚಿಕಿತ್ಸೆ, ಆಯುರ್ವೇದ ಬಗ್ಗೆ ಅಪಾರ ಜ್ಞಾನ ಹೊಂದಿರುವ ಭಕ್ತಿಭೂಷಣದಾಸ್, ನಿರಂತರ ಚಿಕಿತ್ಸೆಯಿಂದ ರೋಗ ನಿಯಂತ್ರಣ ಸಾಧ್ಯ ಎಂದಿದ್ದರು, ಗೋಶಾಲೆಯಲ್ಲಿದ್ದಾಗ ತುಳುನಾಡಿನ ದೈವ ಕೊರಗಜ್ಜನಿಗೆ ಹರಕೆ ಹೇಳಿಕೊಂಡಿದ್ದ ಉಕ್ರೇನ್ ದಂಪತಿ, ರೋಗ ವಾಸಿ ಹಿನ್ನೆಲೆಯಲ್ಲಿ ಕೊರಗಜ್ಜನಿಗೆ ಅಗೇಲು ಸೇವೆ ಕೊಟ್ಟಿದ್ದಾರೆ.