ಮಂಗಳೂರು: ಮಂಗಳೂರು-ಉಡುಪಿ ನಡುವೆ ಬರುವ ಸುರತ್ಕಲ್ ಟೋಲ್ಗೇಟ್ ರದ್ದು ಆದೇಶದ ಬದಲು ವಿಲೀನಕ್ಕೆ ಹೆದ್ದಾರಿ ಪ್ರಧಾಕಾರ ಆದೇಶಿಸಿದೆ.
ಸುರತ್ಕಲ್ ಟೋಲ್ ಗೇಟ್ ರದ್ದಾಗಬೇಕು ಎಂದು ಹೋರಾಟವನ್ನ ಜನಸಾಮಾನ್ಯರು ನಡೆಸಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಈ ಬಗ್ಗೆ ಆದೇಶ ಹೊರಡಿಸಲಾಗಿದ್ದು ನಂತೂರಿನಿಂದ ಸುರತ್ಕಲ್ ವರೆಗಿನ ರಸ್ತೆಯ ಟೋಲ್ ಶುಲ್ಕವನ್ನು ಹೆಜಮಾಡಿ ಟೋಲ್ ಗೇಟ್ ನಲ್ಲಿ ಹೆಚ್ಚುವರಿಯಾಗಿ ಸಂಗ್ರಹಿಸಲು ಆದೇಶ ನೀಡಿದೆ.
ಹೆಜಮಾಡಿ ಟೋಲ್ ಗೇಟ್ನಲ್ಲಿ ಈ ಮೊದಲು ಕಾರಿಗೆ 40 ರೂ ಇತ್ತು. ಆದರೆ ಈಗ 80ರಂದ 90 ರೂ. ನೀಡಬೇಕಾಗುವ ಸಾಧ್ಯತೆ ಇದೆ. ತಲಪಾಡಿಯಿಂದ ಕುಂದಾಪುರದ ವರೆಗಿನ ರಸ್ತೆಯನ್ನು ನವಯುಗ ಸಂಸ್ಥೆಯು ಮಾಡಿದ್ದು ಇದಕ್ಕಾಗಿ ತಲಪಾಡಿ, ಹೆಜಮಾಡಿ ಮತ್ತು ಸಾಸ್ತಾನದಲ್ಲಿ ಟೋಲ್ ಶುಲ್ಕ ಸಂಗ್ರಹ ಮಾಡಲಾಗುತ್ತಿದೆ. ಇದರ ಮಧ್ಯೆ ಇರುವ 17 ಕಿಮೀ ಉದ್ದದ ಪಡೀಲ್- ನಂತೂರು- ಸುರತ್ಕಲ್ ಎನ್‌ಐಟಿಕೆ ವರೆಗಿನ ರಸ್ತೆಯ ಟೋಲ್ ಶುಲ್ಕವನ್ನು ಹೆಚ್ಚುವರಿಯಾಗಿ ಹೆಜಮಾಡಿಯಲ್ಲಿ ಸಂಗ್ರಹಿಸಲು ಹೊಸ ಆದೇಶದಲ್ಲಿ ತಿಳಿಸಲಾಗಿದೆ.
ಸುರತ್ಕಲ್ ಟೋಲ್ ತೆರವಿಗೆ 17 ದಿನದಿಂದ ನಡೆದಿದ್ದ ಧರಣಿ ನಡೆದಿತ್ತು. ಈಗ ಟೋಲ್ ರದ್ದು ಮಾಡದೆ ಗಾಯದ ಮೇಲೆ ಬರೆ ಎಳೆದಂತೆ ಈ ಟೋಲ್ ಗೇಟ್ ದರವನ್ನ ಇನ್ನೊಂದು ಟೋಲ್ಗೇಟ್ನಲ್ಲಿ ತೆಗೆದುಕೊಳ್ಳಲು ರೆಡಿ ಆಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಅದೆಷ್ಟು ಸರಿ ಕಾದುನೋಡಬೇಕಿದೆ.