Monday, December 23, 2024

ಎಲ್ಲೆಡೆ ರಾಣ ರಾಕಿಂಗ್.. ಮಾಸ್ ಹೀರೋ ಶ್ರೇಯಸ್ ಮಿಂಚು

ಸ್ಯಾಂಡಲ್​ವುಡ್​ ಪಡ್ಡೆಹುಲಿ ರಾಣ ಅವತಾರದಲ್ಲಿ ಎಂಟ್ರಿ ಕೊಡ್ತಿದ್ದಾರೆ ಅಂದಾಗ, ಎಲ್ಲರ  ನಿರೀಕ್ಷೆಗಳು ಗರಿಗೆದರಿದ್ವು. ಇದೀಗ, ರಾಣ ಸಿನಿಮಾ ಎಲ್ಲೆಡೆ ಜಯಭೇರಿ ಬಾರಿಸಿದೆ. ಪಾಸಿಟಿವ್​ ರೆಸ್ಪಾನ್ಸ್​ ಮೂಲಕ ಥಿಯೇಟರ್​ಗಳಲ್ಲಿ ಅಬ್ಬರಿಸ್ತಿದೆ ರಾಣನ ಖದರ್​​​ಗೆ ಸಿನಿಪ್ರಿಯರು ಕೂಡ ಚಿಲ್ ಆಗಿದ್ದಾರೆ. ಯೆಸ್​​​.. ಕರುನಾಡಿನಾದ್ಯಂತ ರಾಣ ಹವಾ ಹೇಗಿದೆ ಗೊತ್ತಾ..? ಈ ಸ್ಟೋರಿ ಓದಿ.

  • ಆ್ಯಕ್ಷನ್​ ಹೀರೋ ಎಂಟ್ರಿಗೆ ಫ್ಯಾನ್ಸ್​ ಪುಳಕ.. ರಾಣ ರಣಭೇರಿ..!

ಮೊದಲ ಚಿತ್ರದಲ್ಲಿ ಲವರ್​ ಬಾಯ್​ ಆಗಿ ಯುವಮನಸ್ಸುಗಳ ಕದ್ದಿದ್ದ ಶ್ರೇಯಸ್ ಮಂಜು ಆ್ಯಕ್ಷನ್​ ಕಿಂಗ್​ ಆಗಿದ್ದಾರೆ. ರಾಜ್ಯಾದ್ಯಂತ ತೆರೆ ಕಂಡು ಸೌಂಡ್​ ಮಾಡ್ತಿರೋ ರಾಣ ಚಿತ್ರದಲ್ಲಿ ಶ್ರೇಯಸ್,​ ಮಾಸ್​ ಅವತಾರದಲ್ಲಿ ಮಿಂಚಿದ್ದಾರೆ. ರಾಜ್ಯಾದ್ಯಂತ 200ಕ್ಕೂ ಅಧಿಕ ಥಿಯೇಟರ್​ಗಳಲ್ಲಿ ರಾಣಗೆ ಭರ್ಜರಿ ರೆಸ್ಪಾನ್ಸ್​ ಸಿಗ್ತಿದೆ. ಮೌತ್ ಟು ಮೌತ್​ ಪಾಸಿಟಿವ್​ ಟಾಕ್​ ಶುರುವಾಗಿರೋದ್ರಿಂದ ಥಿಯೇಟರ್​​ನತ್ತ ಪ್ರೇಕ್ಷಕರು ದಾಳಿ ಇಡ್ತಿದ್ದಾರೆ.

ರಾಣ ಚಿತ್ರದ ಮೂಲಕ ಕರುನಾಡಿನ ಹೆಮ್ಮೆಯ ಪುತ್ರನಾಗ್ಬೇಕು ಏಂದು ಕನಸು ಕಂಡಿದ್ದ ಶ್ರೇಯಸ್​ ತಪಸ್ಸಿನ ಫಲ ಫಲಿಸಿದೆ. ಸಿಕ್ಕಾಪಟ್ಟೆ ಹಾರ್ಡ್​ ವರ್ಕ್​ ಮಾಡಿರೋ ಶ್ರೇಯಸ್​ ಆ್ಯಕ್ಟಿಂಗ್​​ಗೆ ಎಲ್ಲರೂ ಮನಸೋತಿದ್ದಾರೆ. ಈ ಚಿತ್ರದ ಮೂಲಕ ಆ್ಯಕ್ಟಿಂಗ್​​​​, ಡ್ಯಾನ್ಸಿಂಗ್​​, ಫೈಟಿಂಗ್​​​ ಎಲ್ಲದಕ್ಕೂ ಸೈ ಅನ್ನೋದನ್ನ ಫ್ರೂವ್​ ಮಾಡಿದ್ದಾರೆ.

  • ಸಕಲಕಲಾವಲ್ಲಭ ಶ್ರೇಯಸ್​ ಆ್ಯಕ್ಷನ್​​​ಗೆ ಕ್ಲೀನ್​ಬೋಲ್ಡ್​
  • ‘ರಾಣ’ ರಿಯಲ್​ ಸ್ಟಂಟ್ಸ್​​ಗೆ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ

ಅಪ್ಪನ ಕೊನೆಯ ಆಸೆಯನ್ನು ನನಸು ಮಾಡೋಕೆ ಗಲ್ಲಿಬಾಯ್​ ಹರಸಾಹಸದ ಕಥೆ ಬಲು ರೋಚಕವಾಗಿದೆ. ಪ್ರೇಕ್ಷಕರು ಕಥೆಯಲ್ಲಿ ಬೆರೆತು ತಾವೇ ಪಾತ್ರದಲ್ಲಿ ಲೀನವಾಗೋದ್ರಿಂದ ಕಥೆಗೆ ಎನರ್ಜಿ ಸಿಕ್ಕಿದೆ. ಪಾತಕಿಗಳ ಮಟ್ಟ ಹಾಕೋಕೆ ರಾಣ ಮಾಡೋ ಕಸರತ್ತು ಇಂಪ್ರೆಸ್ಸಿವ್​ ಆಗಿದ್ದು, ಥಿಯೇಟರ್​ನಲ್ಲಿ ರಾಣಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ರೀಷ್ಮಾ ಎರಡನೇ ಸಿನಿಮಾ ಇದಾಗಿದ್ದು, ಇಲ್ಲೂ ಪ್ಯಾಟೆ ಗರ್ಲ್​ ರೋಲ್​ನಲ್ಲಿ ಕ್ಯೂಟ್​ ಆಗಿ ಕಾಣಿಸ್ತಾರೆ. ಒಳ್ಳೆ ಲವ್​ಸ್ಟೋರಿಯ ಜೊತೆಗೆ ಮಾಸ್ ಅಂಡ್ ಮಾಸ್​ ಲುಕ್​​ನಲ್ಲಿ ರಾಣ ಮಾರ್ಷಲ್​ ಆರ್ಟ್ಸ್​​ ಖಡಕ್ಕಾಗಿದೆ. ಹಿಟ್​ ಸಿನಿಮಾಗಳ ಸರದಾರ ನಂದಕಿಶೋರ್​​ ಈ ಚಿತ್ರದಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿರೋದ್ರಿಂದ ಕಥೆಗೆ ವೈಟೇಜ್​ ಸಿಕ್ಕಿದೆ.

​ರಾಣಾ ನಾಗಾಲೋಟ ಈ ವಾರವೂ ಮುಂದುವರೆದಿದೆ. ಕಮರ್ಷಿಯಲ್​ ಎಲಿಮೆಂಟ್ಸ್​ ಜೊತೆ ಫ್ಯಾಮಿಲಿ ಎಂಟರ್​​ಟೈನ್​ ಚಿತ್ರದ ತೂಕವನ್ನು ಹೆಚ್ಚಿಸಿದೆ. ಚಿತ್ರದ ಹಾಡುಗಳು ಪ್ರೇಕ್ಷಕನ್ನು ಕೈಬೀಸಿ ಕರೆಯುತ್ತಿವೆ. ಗುಜ್ವಾಲ್​ ಪುರುಷೋತ್ತಮ್​ ರಿಚ್​ ಆಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ರಾಣ ರಣಬೇಟೆ ಈ  ವಾರವೂ ಮುಂದುವರೆದಿದ್ದು ಮಿಸ್​ ಮಾಡದೇ ಸಿನಿಮಾ ನೋಡಿ ಎಂಜಾಯ್​ ಮಾಡಬಹುದು.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೊ, ಪವರ್ ಟಿವಿ

RELATED ARTICLES

Related Articles

TRENDING ARTICLES