Monday, December 23, 2024

ಬ್ಯಾಂಕಾಕ್​​​ಗೆ ಶಿಫ್ಟ್ ಆಯ್ತು ಪುಷ್ಪ 2.. ನೆಕ್ಸ್ಟ್ ಲೆವೆಲ್ ಶೂಟಿಂಗ್

ಗ್ಲೋಬಲ್​ ಐಕಾನ್​ ಅಲ್ಲು ಅರ್ಜುನ್​ ಅಭಿನಯದ ಪುಷ್ಪ 2 ಚಿತ್ರತಂಡದಿಂದ ಸ್ಪೆಷಲ್​ ಅಪ್ಡೇಟ್ಸ್​ ಸಿಕ್ಕಿದೆ. ಅಬ್ಬಬ್ಬಾ..! ಈ ಬಾರಿ ಪುಷ್ಪ ಸ್ಮಂಗ್ಲಿಂಗ್​ ಬ್ಯುಸಿನೆಸ್​​ ನ್ಯಾಷನಲ್​ ಲೆವೆಲ್​​​ನಲ್ಲಿ ನಡೆಯಲಿದೆ. ಸುತ್ತಾಮುತ್ತಾ ರಣಹದ್ದುಗಳಂತೆ ಶತ್ರುಗಳು ಹೊಂಚು ಹಾಕಿ ಕುಂತಿದ್ರೂ ಪುಷ್ಪ ಮಾತ್ರ ಜಗ್ಗದೇ, ಬಗ್ಗದೇ ಡೀಲ್​ ಕುದುರಿಸೋಕೆ ಸಜ್ಜಾಗಿದ್ದಾನೆ. ಯೆಸ್​​​.. ಪುಷ್ಪ ಟ್ರಾವೆಲ್​​ ಹಿಸ್ಟರಿ ತಿಳಿಬೇಕಾ..? ನೀವೇ ಓದಿ.

  • ಪುಷ್ಪ ಸ್ಮಂಗ್ಲಿಂಗ್ ತಂತ್ರಗಾರಿಕೆಯ ಮುಂದೆ ಪೊಲೀಸರು ಠುಸ್​​

ಕೆಜಿಎಫ್​​ ಚಿತ್ರದ ನಂತ್ರ ಸೌತ್​ ಸಿನಿದುನಿಯಾದಲ್ಲಿ ಸೆಡ್ಡು ಹೊಡೆದ ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾ ಪುಷ್ಪ. ನ್ಯಾಷನಲ್​ ಸ್ಟಾರ್​ ಅಲ್ಲು ಅರ್ಜುನ್​​ ಅವ್ರ ಚಿತ್ತೂರು ಸ್ವಾಗ್​ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಜೊತೆಗೆ ರಾ ಅಂಡ್​​ ರಗಡ್​ ಲುಕ್​ನಲ್ಲಿ ಪಕ್ಕಾ ಸುಕ್ಕಾ ಡೈಲಾಗ್ಸ್​ ಕೇಳಿದ್ದ ಸಿನಿಪ್ರೇಮಿಗಳು ಥ್ರಿಲ್ ಆಗಿದ್ರು. ಸೈಲೆಂಟ್​ ಟೇಕ್​ ಆಫ್​ ಆದ ಕಲೆಕ್ಷನ್​​​​ ಕೊನೆಗೆ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆಯಿತು.

ಚಂದನವನದ ನಾಟಗಳನ್ನು ಸಾಗಾಣಿಕೆ ಮಾಡೋ ಪುಷ್ಪನ ಟೆಕ್ನಿಕ್ಸ್​​ ಎಲ್ಲರನ್ನು ಅಚ್ಚರಿಗೊಳಿಸಿತ್ತು. ಶ್ರೀವಲ್ಲಿ ಆ್ಯಕ್ಟಿಂಗ್​​​, ಸ್ಯಾಮ್​ ಊ ಆಂಟಾವಾ ಮೈಮಾಟಕ್ಕೆ ಪ್ರೇಕ್ಷಕರು ಮೈಮರೆತಿದ್ರು. ಆದ್ರೆ, ಈ ಬಾರಿ ಪುಷ್ಪನ ನ್ಯೂ ಲುಕ್​​ ನೆಕ್ಸ್ಟ್​​ ಲೆವೆಲ್​​​ನಲ್ಲಿ ಇರಲಿದೆ. ಸ್ಮಂಗ್ಲಿಂಗ್​ ಡೀಲ್​ ಕುದುರಿಸೋಕೆ ಪುಷ್ಪ ವಿದೇಶಕ್ಕೆ ಹಾರಿದ್ದಾನೆ. ಯೆಸ್​​​​.. ಬ್ಯಾಂಕಾಂಕ್​ನಲ್ಲಿ ಪುಷ್ಪ ಟೀಮ್​ ಬೀಡು ಬಿಟ್ಟಿದೆ. ಅಂದ್ರೆ, ರಾಕಿಭಾಯ್​ ತರಹ ಪುಷ್ಪ ಕೂಡ ದೊಡ್ಡ ಬಿಸೆನೆಸ್​ ಮ್ಯಾನ್​ ಮಾಡೋಕೆ ಹೋಗಿದ್ದಾರೆ ಅನ್ನೋ ಟಾಕ್​ ಓಡಾಡ್ತಿದೆ.

  • ಬ್ಯಾಂಕಾಕ್​ನಲ್ಲಿ ನಡೆಯುತ್ತಾ ಅದ್ಧೂರಿ ಫೈಟ್​​​​​ ಸೀನ್​..?
  • 40 ದಿನಗಳ ಶೆಡ್ಯೂಲ್​​​.. ಪುಷ್ಪ ಚಿತ್ರತಂಡ ಫುಲ್​ ಶಿಪ್ಟ್​​

ಅಲ್ಲು ಅರ್ಜುನ್​ ಅವ್ರ ಬ್ರಾಂಡ್​ ಇಮೇಜ್​ಗೆ ತಕ್ಕಂತೆ ನಿರ್ದೇಶಕ ಸುಕುಮಾರ್​​ ಸಿನಿಮಾ ಮಾಡಿದ್ರು. ಪುಷ್ಪ ಚಿತ್ರದಲ್ಲಿ ಅಲ್ಲು ಲುಕ್​ ಕಂಡು ಇಡೀ ವಿಶ್ವವೇ ಸರ್​​ಪ್ರೈಸ್​ ಆಗಿತ್ತು. ಜೊತೆಗೆ ತಗ್ಗದೆಲೆ ಡೈಲಾಗ್​​​ಗೆ ಪ್ರಪಂಚದ ಶ್ರೇಷ್ಟ ಕಲಾವಿದ್ರೆಲ್ಲಾ ದನಿಗೂಡಿಸಿದ್ರು. ಟಿಕ್​ಟಾಕ್​​​, ರೀಲ್ಸ್​ಗಳಲ್ಲಿ ಪುಷ್ಪ ಕಮಾಲ್​ ಮಾಡಿದ್ರು. ಇದೀಗ ಇಡೀ ಚಿತ್ರತಂಡವೇ ಬ್ಯಾಂಕಾಕ್​ ಸಿಟಿಗೆ ಶಿಫ್ಟ್​ ಆಗಿದೆ. ಫಹಾದ್ ಪಾಸಿಲ್​​, ರಶ್ಮಿಕಾ ಮಂದಣ್ಣ, ಸುನೀಲ್​ ಸೇರಿದಂತೆ ಚಿತ್ರದ ಕಲಾವಿದ್ರೆಲ್ಲಾ ಫ್ಲೈಟ್​​ ಹತ್ತಿ ಇಳಿದಿದ್ದಾರೆ.

ಎದುರಾಳಿಗಳ ಎದೆಸೀಳೋಕೆ ಅಲ್ಲು ಸಖತ್​ ಪ್ಲಾನ್​ ಮಾಡಿದ್ದಾರೆ. ಕತ್ತಿ ಮಸೆಯುತ್ತಿರೋ ಶತ್ರುಗಳಿಗೆ ಪುಷ್ಪ ರಿಯಾಕ್ಷನ್​ ಕೂಡ ಭಯಂಕರವಾಗಿರಲಿದೆ. ಜೊತೆಗೆ ಬ್ಯಾಂಕಾಕ್​ ಸಿಟಿ ತಲುಪಿರೋದ್ರಿಂದ ಬ್ಯುಸಿನೆಸ್​​​ ಯಾವ ಹಂತ ತಲುಪಿದೆ ಅನ್ನೋದು ಗೊತ್ತಾಗ್ತಿದೆ. ಜೊತೆಗೆ ಈ ಬಾರಿಯ ಸ್ಕ್ರಿಪ್ಟ್​ ಮೇಲೆ ಸಿಕ್ಕಾಪಟ್ಟೆ ವರ್ಕ್​​ ಮಾಡಿ ಹೊಸ ಫ್ಲೇವರ್​ ಟಚ್​ ಕೊಡಲಾಗಿದೆಯಂತೆ. 40 ದಿನಗಳ ಕಾಲ ಬ್ಯಾಂಕಾಕ್​ ಸುತ್ತಮುತ್ತ ಶೂಟಿಂಗ್​ ನಡೆಯಲಿದೆಯಂತೆ.

ಅಂತೂ, ಪುಷ್ಪ ಪ್ರೀಕ್ವೆಲ್ ಸಿನಿಮಾ ಡಿಸೆಂಬರ್​​ 17ಕ್ಕೆ ರಿಲೀಸ್ ಆಗಿ ಒಂದು ವರ್ಷ ಕಂಪ್ಲೀಟ್​ ಆಗಲಿದೆ. ಹಾಗಾಗಿ ಚಿತ್ರತಂಡ ಏನಾದ್ರೂ ಸರ್​​ಪ್ರೈಸ್​ ಕೊಡುತ್ತಾ ಅನ್ನೋದನ್ನ ಕಾದು ನೋಡ್ಬೇಕಾಗಿದೆ. ಟೀಸರ್​ ರಿಲೀಸ್​ ಆದ್ರೆ, ಅಭಿಮಾನಿಗಳ ಪಾಲಿಗೆ ಹಬ್ಬದ ದಿನವೇ ಆಗಲಿದೆ. ಅದೇನೆ ಇರಲಿ, ಜನಮನ ಗೆದ್ದಿರುವ ಪುಷ್ಪ ಸೀಕ್ವೆಲ್​ ಹೇಗಿರುತ್ತೋ ಅನ್ನೋ ಕುತೂಹಲ ಮಾತ್ರ ಕೋಟ್ಯಾನುಕೋಟಿ ಅಭಿಮಾನಿಗಳ ಎದೆಯಲ್ಲಿ ಹಾಗೆ ಇದೆ.

ರಾಕೇಶ್​ ಆರುಂಡಿ, ಫಿಲ್ಮ್​​​ ಬ್ಯುರೋ, ಪವರ್ ಟಿವಿ

RELATED ARTICLES

Related Articles

TRENDING ARTICLES