ನವದೆಹಲಿ : ದೆಹಲಿಯಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಳವಾಗ್ತಿದೆ. ಪ್ರತಿ ವರ್ಷ ಸಹ ವಾಯು ಮಾಲಿನ್ಯ ಉಂಟಾಗ್ತಿದ್ದು, ಜನರು ನಲುಗಿ ಹೋಗ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ವಾಯು ಮಾಲಿನ್ಯ ಹೆಚ್ಚಳವಾಗಿದೆ.
ವಾಯು ಮಾಲಿನ್ಯ ಹೆಚ್ಚಳಕ್ಕೆ ಮುಖ್ಯ ಕಾರಣ ಕೃಷಿ ತ್ಯಾಜ್ಯಾ ಸುಡುವಿಕೆಯಾಗಿದ್ದು, ಸರ್ಕಾರ ಇದಕ್ಕೆ ಕಡಿವಾಣ ಹಾಕಲು ಮುಂದಾಗ್ತಿಲ್ಲ. ವಿಡಿಯೋದಲ್ಲಿನ ದೃಶ್ಯದಲ್ಲಿ ಮಂಜು ಮುಸುಕಿದಂತೆ ಕಾಣ್ತಿದ್ದು, ಇದು ಮಂಜಲ್ಲ ಬದಲಾಗಿ ಇಂಗಾಲದ ಡೈ ಆಕ್ಸೈಡ್ನಿಂದ ಕೂಡಿದ ಕಲುಷಿತಗಾಳಿಯಾಗಿದೆ.
ಕೇಂದ್ರ ಸರ್ಕಾರ ಪಂಜಾಬ್ ಮತ್ತು ದೆಹಲಿ ಸರ್ಕಾರಕ್ಕೆ ಕೃಷಿ ತ್ಯಾಜ್ಯಾ ಸಮರ್ಪಕವಾಗಿ ನಾಶಗೊಳಿಸಲು ಪರಿಸರ ಸ್ನೇಹಿ ವ್ಯವಸ್ಥೆಯನ್ನು ಅಳವಡಿಸಿ ಎಂದು ಇಂತಿಷ್ಟು ಹಣ ಬಿಡುಗಡೆ ಮಾಡಿದೆ. ಆದ್ರೆ ರಾಜ್ಯ ಸರ್ಕಾರಗಳು ಇತ್ತ ಕಡೆ ಗಮನಹರಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರ ವಾದಿಸುತ್ತಿದೆ. ವಿಪರ್ಯಾಸವೆಂದರೆ ನಾವು ವಾಯು ಮಾಲಿನ್ಯ ಕಡಿಮೆಗೊಳಿಸುವ ಕುರಿತಾಗಿ ವೈಜ್ಞಾನಿಕ ಸಂಶೋಧನೆಗಳ ಮೇಲೆ ಹೆಚ್ಚಿನ ಗಮನ ಹರಿಸುತ್ತಿಲ್ಲ. ಹಾಗೆ ನೋಡಿದ್ರೆ ಸುಲಭವಾಗಿ ಮಾಡಬಹುದಾದ ಪರಿಹಾರೋಪಾಯಗಳನ್ನೂ ನಾವು ಕೈಗೊಳ್ಳುತ್ತಿಲ್ಲ.