Wednesday, April 2, 2025

ಪ್ರತಿ ಲೀಟರ್​​ ಹಾಲು-ಮೊಸರಿನ ದರ 3 ರೂ ಹೆಚ್ಚಳ.!

ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಹಾಲು ಹಾಗೂ ಮೊಸರಿನ ದರ ಹೆಚ್ಚಿಕೆ ಮಾಡಿ ಕೆಎಂಎಫ್(ಕರ್ನಾಟಕ ಹಾಲು ಮಹಾಮಂಡಳಿ)​ ಆದೇಶ ಹೊರಡಿಸಿದೆ.

ಇಂದು ಮಧ್ಯರಾತ್ರಿಯಿಂದಲೇ ರಾಜ್ಯದಲ್ಲಿ ಪ್ರತಿ ಲೀಟರ್​ಗೆ ಹಾಲು-ಮೊಸರಿನ ದರ 3 ರೂ ಹೆಚ್ಚಳ ಮಾಡಿ ಕೆಎಂಎಫ್​ ಆದೇಶಿಸಿದೆ.

ನಾಳೆಯಿಂದ ಒಂದು ಲೀಟರ್ ಹಾಲಿನ ದರ 40 ರೂಪಾಯಿ ನಿಗದಿ ಮಾಡಲಾಗಿದ್ದು, ಹಾಲಿನ ಜೊತೆ ಮೊಸರಿನ ದರ ಕೂಡ ಏರಿಕೆ ಮಾಡಲಾಗಿದೆ. ಇಷ್ಟು ದಿನ 37 ರೂಪಾಯಿ ಒಂದು ಲೀಟರ್ ಇತ್ತು. ಮೊಸರು ಪ್ರತಿ ಲಿಟರ್​​ಗೆ 45 ರೂಪಾಯಿ ಇತ್ತು. ಈಗ ನಾಳೆಯಿಂದ ಒಂದು ಲೀಟರ್ ಮೊಸರು 48 ರೂಪಾಯಿ ಇರಲಿದೆ.

ಹಾಲಿನ ದರ ಹೆಚ್ಚಳಕ್ಕೆ ಕಾರಣಗಳು

ಹಸುವಿಗೆ ನೀಡುವ ಮೇವಿನ ದರ ಹೆಚ್ಚಳ ಮಾಡಲಾಗಿದೆ. ಹವಾಮಾನ ವೈಪರೀತ್ಯ ಕಾರಣದಿಂದ ಮೇವು ಸಿಗುತ್ತಿಲ್ಲ. ಹಸುವಿಗೆ ಚರ್ಮ ಗಂಟು ರೋಗ, ಜೊತೆಗೆ ಸಾಗಾಣಿಕೆ , ವಿದ್ಯುತ್, ಪ್ಯಾಕಿಂಗ್, ಸಕರಣೆ ವೆಚ್ಚ 25 ರಿಂದ 35 % ಹೆಚ್ಚಳ ಮಾಡಲಿದೆ. ಹೀಗಾಗಿ ಮೊಸರು ಹಾಗೂ ಹಾಲಿರ ದರ ಹೆಚ್ಚಳ ಮಾಡಿ ಕೆಎಂಎಫ್​ ಮಾಹಿತಿ ಹೊರಡಿಸಿದೆ.

RELATED ARTICLES

Related Articles

TRENDING ARTICLES