Monday, December 23, 2024

ಸಿದ್ದರಾಮಯ್ಯ ಎಲ್ಲಿ ನಿಲ್ತಾರೋ, ಬಿಡ್ತಾರೋ ನಮಗೇನೂ ಸಂಬಂಧವಿಲ್ಲ : ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : ಸಿದ್ದರಾಮಯ್ಯ ಎಲ್ಲಿ ನಿಲ್ತಾರೋ, ಬಿಡ್ತಾರೋ ನಮಗೇನೂ ಸಂಬಂಧವಿಲ್ಲ ಯಾವ ಕ್ಷೇತ್ರದಲ್ಲಿ ಚುನಾವಣೆ ಸೋತಿದ್ರೋ ಅದೇ ಕ್ಷೇತ್ರದಲ್ಲಿ ಮುಂದುವರಿಯಬೇಕು ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಜನಪ್ರತಿನಿಧಿ ಯಾವ ಕ್ಷೇತ್ರದಲ್ಲಿ ಗೆದ್ದಿರ್ತಾನೋ ಅದೇ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ನಿಂತರೆ ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ ಎಂದರ್ಥ ಯಾವ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲ, ಆ ಜನರ ಪ್ರೀತಿ ವಿಶ್ವಾಸ ಗಳಿಸಿಲ್ಲ ಎಂಬ ಅಭಿಪ್ರಾಯ ಬರುತ್ತೆ. ಹಿಂದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾವುದೋ ಕಾರಣಕ್ಕೆ ಸೋತಿರಿ, ಯಾರ್ಯಾರಿಗೋ ಬೈದಿರಿ, ಕಾರ್ಯಕರ್ತರಿಗೆ ಕೆಲಸ ಮಾಡಿಲ್ಲ ಎಂದು ಬೈದಿರಿ. ಚಾಮುಂಡೇಶ್ವರಿಯಲ್ಲಿ ನಿಂತು ಗೆದ್ದು ತೋರಿಸಿ ಎಂದರು.

ಇನ್ನು, ಯಾವ ಕ್ಷೇತ್ರದಲ್ಲಿ ಚುನಾವಣೆ ಗೆದ್ದಿದ್ರೋ, ಯಾವ ಕ್ಷೇತ್ರದಲ್ಲಿ ಚುನಾವಣೆ ಸೋತಿದ್ರೋ ಅದೇ ಕ್ಷೇತ್ರದಲ್ಲಿ ಮುಂದುವರಿಯಬೇಕು. ಅದು ಪ್ರಜಾಪ್ರಭುತ್ವದ ವ್ಯವಸ್ಥೆ. 224 ಕ್ಷೇತ್ರಗಳ ಜನ ಪ್ರೀತಿ ಹೊಂದಿಲ್ವಾ. ಒಬ್ಬ ಮುಖ್ಯಮಂತ್ರಿ ಆದವರು 224 ಕ್ಷೇತ್ರಗಳಲ್ಲಿ ಪ್ರೀತಿ ಇಟ್ಕೋಬೇಕು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀವು ಒಳ್ಳೆಯ ಕೆಲಸ ಮಾಡಿದ್ದೀರಿ. ಆದ್ರೂ ಚುನಾವಣೆಯಲ್ಲಿ ಅಲ್ಲಿ ಸೋತ್ರಿ. ಸೋತ ಮೇಲೆ ಯಾಕೆ ಸೋತೆ ಅಂತ ಆ ಕ್ಷೇತ್ರದಲ್ಲಿ ನಿಂತು ಮತ್ತೆ ನೀವು ಗೆದ್ರೆ ಅವತ್ತು ನಿಮಗೆ ಜನನಾಯಕ ಅಂತಾರೆ ಎಂದು ಸಿದ್ದರಾಮಯ್ಯ ಅವರಿಗೆ ಕೆ.ಎಸ್. ಈಶ್ವರಪ್ಪ ಸಲಹೆ ನೀಡಿದರು.

RELATED ARTICLES

Related Articles

TRENDING ARTICLES