Wednesday, January 22, 2025

‘ಕೆಜಿಎಫ್’ ದಾಖಲೆ ಉಡೀಸ್.. ಕಾಂತಾರ ಚಿತ್ರಕ್ಕೆ ಎರಡೇ ಹೆಜ್ಜೆ

ಕಾಂತಾರ ಸಿನಿಮಾ ರಿಲೀಸ್​ ಆದಾಗ ಹಿಸ್ಟರಿ ಕ್ರಿಯೇಟ್​ ಮಾಡುತ್ತೆ ಅಂತಾ ಯಾರು ಊಹಿಸಿರಲಿಲ್ಲ. ಆದ್ರೆ, ಇಂದು ಕಾಂತಾರ ಎಲ್ಲರ ಬಾಯಿ ಮುಚ್ಚಿಸಿದೆ. ಇನ್ನೂ ಬಾಕ್ಸ್​ ಆಫೀಸ್​ ಕಲೆಕ್ಷನ್​ ಲೆಕ್ಕಾಚಾರ ಕೇಳಿದ್ರೆ, ಎಲ್ಲರೂ ಶಾಕ್​ ಆಗ್ತೀರಾ. ಅದೇನೆ ಇರಲಿ ವಿಶ್ವ ಮೆಚ್ಚಿದ ಕೆಜಿಎಫ್​​ ಗೂ ಸೆಡ್ಡು ಹೊಡಿತಿದೆ ಕಾಂತಾರ. ಇನ್ನೂ ಎರಡು ಹೆಜ್ಜೆ ಮುಂದಿಟ್ಟರೆ ರಾಖಿಭಾಯ್​ ದಾಖಲೆಯನ್ನು ಧೂಳಿಪಟ ಮಾಡಲಿದೆ.

  • ರಾಕಿಭಾಯ್​​ ಹಿಂದಿಕ್ಕಿದ ರಿಷಬ್​​​​.. ಕರ್ನಾಟಕದಲ್ಲಿ ನಂ.1 ಪಟ್ಟ

ಕರಾವಳಿ ಸಾಂಸ್ಕೃತಿಕ ನೆಲೆಯನ್ನು ಎಲ್ಲರಿಗೂ ಮನಮುಟ್ಟುವಂತೆ ತೋರಿಸಿದ ಸಿನಿಮಾ ಕಾಂತಾರ. ಇನ್ನೂ ಸಿನಿಮಾ ನೋಡಿದವ್ರಿಗೆಲ್ಲಾ ಧೈವದ ವಿಶೇಷ ಅನುಭೂತಿಯ ಫೀಲ್​ ಆಗಿದ್ದು ಚಿತ್ರದ ಗ್ರೇಟ್​ನೆಸ್​​​. ಸಿನಿಮಾ ನೋಡ್ತಾ ನೋಡ್ತಾ ಪಂಜುರ್ಲಿ ಧೈವದ ಆಹಾವನೆಯಾಗಿದ್ದು ಹೆಮ್ಮೆಯ ವಿಚಾರ. ಉಸಿರಲಿ ಉಸಿರಾಗಿ ಬೆರೆತ ಕಥೆ ಕಾಂತಾರ ಬಾಕ್ಸ್​ ಆಫೀಸ್​ ಲೆಕ್ಕಾಚಾರಗಳನ್ನೆಲ್ಲಾ ನೆಲ ಕಚ್ಚುವಂತೆ ಮಾಡಿದೆ. ಬರೋಬ್ಬರಿ 500 ಕೊಟಿಯತ್ತ ದಾಪುಗಾಲು ಇಟ್ಟಿದೆ.

ಪ್ಯಾನ್​ ಇಂಡಿಯಾ ಸಿನಿಮಾಗಳ ಸಾಲಿಗೆ ಸೌತ್​ ಸಿನಿಮಾಗಳು ಅಬ್ಬರಿಸಿ ಬೊಬ್ಬಿರಿಯುತ್ತಿವೆ. ಆರ್​ಆರ್​ಆರ್​​​, ಕೆಜಿಎಫ್​​ ಬರೆದ ಚರಿತ್ರೆಯನ್ನು ಯಾರು ಮರೆಯುವಂತಿಲ್ಲ. ಆದ್ರೆ, ಇಂದಿಗೂ ಅತಿಯಾಗಿ ಕಾಡ್ತಿರೋದು ಕಾಂತಾರ ಸಿನಿಮಾ. ಸೂಪರ್ ಸ್ಟಾರ್​ಗಳ ಬಾಯಲ್ಲೂ ಕಾಂತಾರ ಕಥೇ ನಲಿದಾಡಿದ್ದು ವಿಶೇಷ.

ಯೆಸ್​.. ಇದೀಗ ಕರ್ನಾಟಕದಲ್ಲಿ ನಂ. 1 ಪಟ್ಟ ಕಾಂತಾರ ಚಿತ್ರದ ಪಾಲಾಗಲಿದೆ. ಕೆಜಿಎಫ್​ ದಾಖಲೆಯನ್ನು ಉಡೀಸ್​ ಮಾಡೋಕೆ ಎರಡೇ ಕೋಟಿ ಬಾಕಿ ಇದೆ. ಕನ್ನಡ ಮಣ್ಣಿನಲ್ಲಿ 155 ಕೋಟಿ ಗಳಿಸಿದ್ದ ಕೆಜಿಎಫ್​ ದಾಖಲೆಯನ್ನು ಉಡೀಸ್​ ಮಾಡಲಿದೆ ಕಾಂತಾರ.

  • ಅರೋಪಗಳ ವಿರುದ್ಧ ತೊಡೆ ತಟ್ಟಿ ನಿಂತ ‘ಕಾಂತಾರ’
  • KGF-2 ವಿಶ್ವದಾಖಲೆಗೆ ಟಕ್ಕರ್​ ಕೊಡ್ತಾರಾ ರಿಷಬ್​​..?

ಹಳ್ಳಿ, ಗಲ್ಲಿ,ದಿಲ್ಲಿಯಲ್ಲೂ ಕಾಂತಾರ ಕಂಪನ ಜೋರಾಗಿದೆ. ಟ್ರ್ಯಾಕ್ಟರ್​​, ಬಸ್ಸುಗಳಲ್ಲಿ ಸಿನಿಮಾ ನೋಡಿ ಬರುವ ಹಳೆ ಚಾಳಿ ಕಾಣಿಸಿದ್ದು ಕಾಂತಾರ ಚಿತ್ರದಿಂದ. ಥಿಯೇಟರ್​​ ಮುಖವನ್ನೆ ನೋಡದ ಅನೇಕ ಪ್ರೇಕ್ಷಕರನ್ನು ಬಡಿದೆಬ್ಬಿಸಿ ಕರೆತಂದಿದ್ದು ರಿಷಬ್​ ಆ್ಯಕ್ಟಿಂಗ್​​​ ತಾಕತ್ತು. ಕಥೆಯ ಗತ್ತು ಗಮ್ಮತ್ತು, ಸ್ಥಳಿಯ ಭಾಷೆಯ ಕರಾಮತ್ತು ಕಾಂತಾರ ಚಿತ್ರವನ್ನು ಗೆಲ್ಲಿಸಿದೆ. ಬರೋಬ್ಬರಿ ಒಂದು ಕೋಟಿ ಟಿಕೆಟ್​ ಮಾರಾಟ ಮಾಡಿದ ಹೆಗ್ಗಳಿಕೆಯೂ ಕಾಂತಾರ ಚಿತ್ರಕ್ಕೆ ಸಲ್ಲುತ್ತದೆ.

ಇನ್ನೂ ಕೇವಲ ಎರಡು ಕೋಟಿ ಗಳಿಸಿದ್ರೆ ಕೆಜಿಎಫ್​ ದಾಖಲೆಯನ್ನು ಮುರಿಯಲಿದೆ. ಆದ್ರೆ, ಕೆಜಿಎಫ್​ 2 ಬರೆದ ವಿಶ್ವದಾಖಲೆಯನ್ನು ಸರಿಗಟ್ಟೋದು ಕಷ್ಟಸಾಧ್ಯವಾಗುತ್ತದೆ. ವರ್ಲ್ಡ್​​​ ವೈಡ್​​ 1300 ಕೋಟಿಗೂ ಮೀರಿ ಕಲೆಕ್ಷನ್​ ಬಾಚಿದ್ದ ಕೆಜಿಎಫ್​ ತನ್ನಲ್ಲೇ ದಾಖಲೆಯನ್ನು ಉಳಿಸಿಕೊಂಡಿದೆ.

ಅಂತೂ ಕರ್ನಾಟಕದಲ್ಲಿದ್ದ ಕೆಜಿಎಫ್​ ಅಲೆಯನ್ನು ಹೊಂಬಾಳೆ ಸಂಸ್ಥೆ ತಮ್ಮದೇ ಬ್ಯಾನರ್​ ಮೂಲಕ ಅಳಿಸಿ ಹಾಕಿದೆ. ಮೂಲೆ ಮೂಲೆಯಲ್ಲೂ ಕೋಲ ಆಚರಣೆಗಳ ಅನುರಣನ ಕೇಳಿಸಿದೆ. ಯ್ಯುಟ್ಯೂಬ್​​ನಲ್ಲಿ ಭೂತಕೋಲ ವೀಡಿಯೋ ವೀಕ್ಷಣೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಮೈಂಡ್​ ಬ್ಲೋಯಿಂಗ್​ ಆ್ಯಕ್ಟಿಂಗ್​ ಮಾಡಿದ ರಿಷಬ್​ ದೇವರಾಗಿದ್ದಾರೆ. ಅದೇನೆ ಇರಲಿ, ಕನ್ನಡ ಸಿನಿಮಾಗಳ ಪಾಲಿದೆ ಸದ್ಯ ಶುಕ್ರದೆಸೆ ಶುರುವಾಗಿದೆ. ಈ ಸುವರ್ಣ ಯುಗ ಹೀಗೆ ಮುಂದುವರೆಯಲಿ.

ರಾಕೇಶ್​ ಆರುಂಡಿ, ಫಿಲ್ಮ್​​​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES