Sunday, December 22, 2024

ತಾರಕ್ಕೇರಿದ ಪೋಸ್ಟರ್ ವಾರ್

ಕಲಬುರಗಿ : ಪೇ ಸಿಎಂ ಅಭಿಯಾನ ಜೋರಾಗುತ್ತಿದೆ. ಕಲಬುರಗಿ ಜಿಲ್ಲೆಗೆ ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಆಗಮನ ಹಿನ್ನೆಲೆ ಕಲಬುರಗಿಯಲ್ಲಿ ಪೇ ಸಿಎಂ ಪೋಸ್ಟರ್ ಗಳು ರಾರಾಜಿಸುತ್ತಿವೆ.

ಸಂಗಮೇಶ್ವರ ನಗರ, ಟ್ಯಾಂಕ್ ಬಂಡ್ ರಸ್ತೆ ಸೇರಿದಂತೆ ಅನೇಕ ಕಡೆ ಪೇ ಸಿಎಂ ಪೋಸ್ಟರ್ ಗಳು ರಾರಾಜಿಸುತ್ತಿವೆ. ತಡರಾತ್ರಿ ಪೇ ಸಿಎಂ ಪೋಸ್ಟರ್ ಅಂಟಿಸಿರೋ ಕೈ ಕಾರ್ಯಕರ್ತರು ಅಭಿಯಾನ ತೀವ್ರಗೊಳಿಸಿದ್ದಾರೆ.

ವಾರದ ಹಿಂದೆ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ ಅಂತ ಬಿಜೆಪಿ ಮುಖಂಡರು ಪೋಸ್ಟರ್ ಅಂಟಿಸಿದ್ದರು. ಈ ಘಟನೆ ಚಿತ್ತಾಪುರ ಕ್ಷೇತ್ರ ಹಾಗೂ ಕಲ್ಬುರ್ಗಿಯಲ್ಲಿ ನಗರದಲ್ಲೂ ಹಲವಾರು ಗಲಾಟೆಗಳಿಗೆ ಕಾರಣವಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೂರು ಕೂಡ ದಾಖಲಾಗಿದೆ. ಇದರ ಜೊತೆಯಲ್ಲೇ, ಪ್ರಿಯಾಂಕ್ ಖರ್ಗೆ ಅವರನ್ನು ಶೂಟ್ ಮಾಡ್ತೀನಿ ಎಂಬ ವಿವಾದಾತ್ಮಕ ಹೇಳಿಕೆ ಕೇಳಿಬಂದಿತ್ತು. ಹಾಗಾಗಿ, ಬಿಜೆಪಿ ನಾಯಕರಿಗೆ ಟಕ್ಕರ್ ಕೊಡಲು ಕೈ ಕಾರ್ಯಕರ್ತರು ಪೇ ಸಿಎಂ ಪೋಸ್ಟರ್ ಅಂಟಿಸಿದ್ದಾರೆ.

RELATED ARTICLES

Related Articles

TRENDING ARTICLES