Thursday, December 19, 2024

ರಾಜ್ಯದಲ್ಲಿ ಪಕ್ಷ ಸಂಘಟನೆ ಪ್ರವಾಸ ಮಾಡೋದಾಗಿ ಘೋಷಣೆ ಮಾಡಿದ ಗೌಡರು

ಹಾಸನ: ಯಾರಾರು ಏನೇನು ಮಾಡಿದರು ಎಂದು ವಿಶ್ಲೇಷಣೆ ಮಾಡಲ್ಲ ಎಂದು ಹಾಸನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದರು.

ನಗರದಲ್ಲಿ ಮುಂದಿನವಾರ ಪ್ರವಾಸ ಮಾಡುತ್ತೇನೆ. ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರದಾನಿ ದೇವೇಗೌಡರ ಆಮಂತ್ರಣ ವಿಚಾರದಲ್ಲಿ ಚರ್ಚೆ ವಿಚಾರದಲ್ಲಿ ನಾನು ಈ ವಿಚಾರದಲ್ಲಿ ಏನೂ ಮಾತನಾಡಲ್ಲ. ಯಾರಾರು ಏನೇನು ಮಾಡಿದರು ಎಂದು ವಿಶ್ಲೇಷಣೆ ಮಾಡಲ್ಲ ಎಂದರು.

ಇನ್ನು, ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ಗೌಡರು, ಹಾಸನ ಜಿಲ್ಲೆ ಪ್ರವಾಸದ ಬಳಿಕ ರಾಜ್ಯ ಪ್ರವಾಸವನ್ನು ಮಾಡುತ್ತೇನೆ ರಾಜ್ಯವನ್ನ ಮರೆಯೊದಿಲ್ಲ. ಪ್ರವಾಸ ಮುಗಿಸಿ ಪಾರ್ಲಿಮೆಂಟ್​ಗೂ ಹೋಗ್ತೇನೆ. ರಾಜ್ಯದಲ್ಲಿ ಪಕ್ಷ ಸಂಘಟನೆ ಪ್ರವಾಸ ಮಾಡೋದಾಗಿ ಘೋಷಣೆ ಮಾಡಿದ ಗೌಡರು, ಹುಟ್ಟೂರು ಹರದನಹಳ್ಳಿಯಲ್ಲಿ ಮನೆದೇವರಾದ ದೇವೇಶ್ವರನಿಗೆ ಪೂಜೆ ಸಲ್ಲಿಸಿದರು.

RELATED ARTICLES

Related Articles

TRENDING ARTICLES