Wednesday, January 22, 2025

4 ಟಿಆರ್​ಎಸ್​ ಶಾಸಕರ ಖರೀದಿ ವಿಫಲ; ಪುತ್ತೂರಿನಲ್ಲಿ ಎಸ್​ಐಟಿ ದಾಳಿ.!

ಮಂಗಳೂರು; ತೆಲಂಗಾಣದಲ್ಲಿ ನಾಲ್ವರು ಟಿಆರ್‌ಎಸ್ ಶಾಸಕರ ಖರೀದಿ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಪುತ್ತೂರಿನಲ್ಲಿ ಬಿಜೆಪಿ ಎಜೆಂಟನನ ಮನೆಗೆ ಎಸ್ಐಟಿ ದಾಳಿ ನಡೆಸಿದೆ.

ಇತ್ತೀಚಿಗೆ ತೆಲಂಗಾಣದಲ್ಲಿ 4 ಟಿಆರ್​ಎಸ್​ ಪಕ್ಷದ ಶಾಸಕರನ್ನ ಆಪರೇಶನ್ ಕಮಲ ಸೆಳೆಯಲು ಪ್ಲಾನ್​ ಮಾಡಲಾಗಿತ್ತು. ಆದರೆ, ಈ ವಿಡಿಯೋ ವೈರಲ್​ ಆದ ಹಿನ್ನಲೆಯಲ್ಲಿ ಆಪರೇಷನ್​ ಬಿಜೆಪಿ ಪ್ಲಾಪ್​ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ತೆಲಂಗಾಣ ಸರ್ಕಾರ ಉನ್ನತ ಮಟ್ಟದ ತನಿಖೆಗೆ ವಿಶೇಷ ತಂಡವನ್ನ ರಚನೆ ಮಾಡಿತ್ತು.

4 ಶಾಸಕರಿಗೆ ಬಿಜೆಪಿ ಸೇರಲು 250 ಕೋಟಿ ಆಫರ್ ಬಿಜೆಪಿ ಎಜೆಂಟ್​​ ಎನ್ನಲಾದ ರಾಮಚಂದ್ರ ಭಾರತಿ ನೀಡಿದ್ದನಂತೆ, ಆಪರೇಷನ್​ ಕಮಲದ ಸಿಕ್ರೇಟ್​ ವಿಡಿಯೋ ವೈರಲ್ ಆಗುತ್ತಿದ್ದಂತೆ ಉದ್ಯಮಿ ನಂದಕುಮಾರ್, ತಿರುಪತಿಯ ಸಿಂಹಯ್ಯಾಜಿ ಬಂಧನ ಆಗಿತ್ತು.

ತೆಲಂಗಾಣದ ಫರೀದಾಬಾದ್ ನಲ್ಲಿ ರಾಮಚಂದ್ರ ಭಾರತಿ ನೆಲೆಸಿದ್ದಾರೆ. ಮೂಲತಃ ಮಂಗಳೂರಿನ ಪುತ್ತೂರಿನವರಾದ ರಾಮಚಂದ್ರ ಭಾರತಿ ಅವರ ಮನೆ ಮೇಲೆ ಇಂದು ತೆಲಂಗಾಣದ ಎಸ್​ಐಟಿ ದಾಳಿ ನಡೆಸಿದೆ. ಬಿಜೆಪಿ ಸೇರಿದರೆ ನೂರು ಕೋಟಿ ಆಮಿಷ ಒಡ್ಡಿದ್ದಾಗಿ ಟಿಆರ್ ಎಸ್ ಶಾಸಕ ರೋಹಿತ್ ರೆಡ್ಡಿ ಆರೋಪಿಸಿದ್ದರು. ಆಮಿಷದ ಬಗ್ಗೆ ವಿಡಿಯೋವನ್ನ ಟಿಆರ್​ಎಸ್​ ಶಾಸಕರು ಬಿಡುಗಡೆ ಮಾಡಿದ್ದರು.

RELATED ARTICLES

Related Articles

TRENDING ARTICLES