Wednesday, January 22, 2025

ಸಿದ್ದರಾಮಯ್ಯ ವರ್ಚಸ್ಸು ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಜಾಸ್ತಿ; ಸಿಟಿ ರವಿ ವ್ಯಂಗ್ಯ

ಕೋಲಾರ: ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮುಂಬರುವ ವಿಧಾನಸಭಾ ಚುನಾವಣೆಯಲಲ್ಲಿ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾತನಾಡಿದ್ದಾರೆ.

ಜಿಲ್ಲೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮ್ಮು-ಕಾಶ್ಮೀರದಲ್ಲಿ ನಿಂತರೂ ಸಿದ್ದರಾಮಯ್ಯ ಗೆಲ್ತಾರೆ. ಪಾಕಿಸ್ತಾನದಲ್ಲಿ ಕೂಡ ಸಿದ್ದರಾಮಯ್ಯನವರೇ ಗೆಲ್ಲೋದು ಎಂದು ವ್ಯಂಗವಾಡಿದರು.

ಪಾಕಿಸ್ತಾನದಲ್ಲಿ ಯಾರಾದ್ರೂ ಕಾಂಪಿಟೇಟರ್ ಇದ್ರೆ ಅದು ಸಿದ್ದರಾಮಯ್ಯ ಮಾತ್ರ, ಆದ್ರೆ, ಕರ್ನಾಟಕದಲ್ಲಿ ಮಾತ್ರ ಅವರು ಗೆಲ್ಲೋದು ಕಷ್ಟ. ಸಿಎಂ ಆಗಿದ್ದವರು ಸ್ವಕ್ಷೇತ್ರದಲ್ಲಿ ಸೋತವರು. ಅವರ ಜನಪ್ರಿಯತೆ ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಜಾಸ್ತಿಯಾಗಿದೆ. ಸ್ವಕ್ಷೇತ್ರದಲ್ಲಿ ಮಾತ್ರ ಕಡಿಮೆಯಾಗಿದೆ ಎಂದು ಸಿ.ಟಿ ರವಿ ಲೇವಡಿ ಮಾಡಿದರು.

RELATED ARTICLES

Related Articles

TRENDING ARTICLES