Monday, December 23, 2024

ಹಾಲಿನ ದರ ಪರಿಷ್ಕರಣೆ, ನ 20 ರ ನಂತರ ತೀರ್ಮಾನ – ಸಿಎಂ ಬೊಮ್ಮಾಯಿ

ಕಲಬುರಗಿ: ಇಂದು ಕೆಎಂಎಫ್​ ಪ್ರತಿ ಲೀಟರ್​​ ಹಾಲು-ಮೊಸರು ದರ 3 ರೂ ಹೆಚ್ಚಳ ಮಾಡಿ ಆದೇಶಿಸಲಾಗಿದೆ. ಇದಕ್ಕೆ ಸಿಎಂ ಜಿಲ್ಲೆಯ ಸೇಡಂನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಹಾಲು-ಮೊಸರು ದರ ಏರಿಕೆ ಬಗ್ಗೆ ನವೆಂಬರ್​​ 20 ರ ನಂತರ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಸ್ಪಷ್ಟನೆ ನೀಡಿದರು.

ಕಳೆದ ಹಲವಾರು ತಿಂಗಳಿನಿಂದ ಹಾಲು-ಮೊಸರು ಏರಿಕೆ ಬಗ್ಗೆ ಚರ್ಚೆಯಾಗುತ್ತಿದ್ದು, ಈ ತಿಂಗಳ 20ನೇ ತಾರೀಖಿನ ನಂತರ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಸಿಎಂ ತಿಳಿಸಿದರು.

RELATED ARTICLES

Related Articles

TRENDING ARTICLES