Monday, December 23, 2024

ಆನ್​​​​ಲೈನ್ ಫುಡ್ ಹೆಸರಲ್ಲಿ ವಂಚನೆ

ಬೆಂಗಳೂರು : ಬೆಸ್ಕಾಂ, ಕ್ರೆಡಿಟ್ ಕಾರ್ಡ್, ಬ್ಯಾಂಕ್ ವ್ಯವಹಾರ ಎಲ್ಲದರಲ್ಲೂ ಆನ್​ಲೈನ್ ವಂಚಕರು ಮೂಗು ತೂರಿಸಿ ಸಾಕಷ್ಟು ವಂಚನೆ ಮಾಡುತ್ತಿದ್ದಾರೆ. ಈಗ ಫುಡ್ ಡಿಲಿವರಿ ವ್ಯವಸ್ಥೆಗೂ ಕಾಲಿಟ್ಟಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಆಹಾರ ವ್ಯಾಪಾರದ ಜಾಹೀರಾತು ಬಿಡುತ್ತಾರೆ. ಅದನ್ನು ಕ್ಲಿಕ್ ಮಾಡಿ ಅಲ್ಲಿ ನೀಡಿದ ಇನ್ಸ್​ಟ್ರಕ್ಷನ್​ನಂತೆ ನಡೆದರೆ ಸಾಕು, ನಿಮ್ಮ ಖಾತೆಯಿಂದ ಲಕ್ಷಗಟ್ಟಲೆ ಹಣ ಇದ್ದಕ್ಕಿದ್ದಂತೆ ಮಂಗಮಾಯ ಆಗುತ್ತದೆ. ಹೀಗೆ ಹಲವು ಮಂದಿ ಆಹಾರದ ಹೆಸರಿನಲ್ಲಿ ಲಕ್ಷ ಲಕ್ಷ ಲೂಟಿಗೊಳಗಾಗಿದ್ದಾರೆ. ಖಾಂಧಾನಿ ರಾಜಧಾನಿ ಫುಡ್, ರುಚಿ ಸಾಗರ್ ಹೆಸರಿನಲ್ಲಿ ನಕಲಿ ಆ್ಯಪ್​ಗಳು ಕಾರ್ಯ ಪ್ರವೃತ್ತವಾಗಿವೆ. ಆ್ಯಪ್ ಡೌನ್​ಲೋಡ್ ಮಾಡಿ ಫುಡ್ ಆರ್ಡರ್ ಮಾಡಲು ಇವು ಆಮಿಷ ಒಡ್ಡುತ್ತವೆ. ಝೊಮಾಟೋ, ಸ್ವಿಗ್ಗಿಯಂತೆ ಕಾರ್ಯನಿರ್ವಹಿಸುವ ಆ್ಯಪ್ ಎಂದು ತಿಳಿದು ಡೌನ್​ಲೋಡ್ ಮಾಡಿಕೊಂಡರೋ ಮುಗಿತು, ನಂತರ ಲಿಂಕ್ ಕ್ಲಿಕ್ ಮಾಡಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮಾಹಿತಿಗಳನ್ನು ತುಂಬಲು ಸೂಚನೆ ಬರುತ್ತದೆ.

ಕಾರ್ಡ್ ನಂಬರ್ ಅವರಿಗೆ ಸಿಕ್ಕಿದರೆ ಸಾಕು ಹಂತ ಹಂತವಾಗಿ ಹಣ ಮಾಯವಾಗುತ್ತದೆ. ಹೀಗೆ ಇಮ್ರಾನ್ ಉಲ್ಲಾ ಖಾನ್ ಎಂಬುವರು 2 ಲಕ್ಷದ 23 ಸಾವಿರ ಹಣ ಕಳೆದುಕೊಂಡಿದ್ದಾರೆ. ದೀಪಿಕಾ ಎಂಬುವವರೂ ಹಣ ಕಳೆದುಕೊಂಡಿದ್ದು, ಈ ಸಂಬಂಧ ಬೆಂಗಳೂರಿನ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಾಗಿದೆ.

RELATED ARTICLES

Related Articles

TRENDING ARTICLES