Thursday, January 23, 2025

ಗುಮ್ಮಟನಗರಿಯಲ್ಲಿ ಮಾದರಿ ರೇಷ್ಮೆ ಘಟಕ : ತಪ್ಪಿದ ಮಧ್ಯವರ್ತಿ ಹಾವಳಿ, ರೈತರಿಗೆ ಸಂತಸ

ವಿಜಯಪುರ : ಗುಮ್ಮಟನಗರಿ ವಿಜಯಪುರ ತಾಲೂಕಿನ ಕುಮಟಗಿ ಗ್ರಾಮದಲ್ಲಿ ರೇಷ್ಮೇ ನೂಲು ಬಿಚ್ಚುವ ಘಟಕವನ್ನು ಆರಂಭಿಸಲಾಗಿದೆ. ಇಲ್ಲಿ ಪ್ರತಿನಿತ್ಯ 5 ರಿಂದ 6 ಕ್ವಿಂಟಾಲ್ ರೇಷ್ಮೆ ಗೂಡು ಖರೀದಿಸಿ 50 ರಿಂದ 60 ಕೆಜಿಯಷ್ಟು ರೇಷ್ಮೆಯನ್ನೂ ನೂಲು ಮಾಡಿ ಮಾರಾಟ ಮಾಡಲಾಗುತ್ತಿದೆ. ಉದ್ಯಮಿಗಳಾದ ಪಿ.ಕೆ ಚಿಂಚಲಿ, ಸಿದ್ದಯ್ಯ ಮಠ, ಮಲ್ಲಿಕಾರ್ಜುನ ಬಿಜ್ಜರಗಿ ಹಾಗೂ ಸುರೇಶ ಪರಗೊಂಡ ಎಂಬ ನಾಲ್ವರು ಸ್ನೇಹಿತರು ಸೇರಿ ಈ ರೇಷ್ಮೆ ಘಟಕ ಆರಂಭಿಸಿದ್ದಾರೆ.ಅಲ್ಲದೆ, ಸ್ವಯಂಚಾಲಿತ ರೇಷ್ಮೆ ನೂಲು ಬಿಚ್ಚಣಿಕೆ ಘಟಕ ಆರಂಭಿಸಿದ್ದು, ನಿರುದ್ಯೋಗಿಗಳಿಗೆ ನೌಕರಿ ಸಿಕ್ಕಿದೆ.

ಇನ್ನು ಜಿಲ್ಲೆಯಲ್ಲಿ‌ ಸುಮಾರು 1000 ಎಕರೆಯಷ್ಟು ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತಿದ್ದು ದಲ್ಲಾಳಿಗಳ ಮೂಲಕ ರಾಮನಗರಕ್ಕೆ ಕಳುಹಿಸಲಾಗುತ್ತಿತ್ತು. ಇದೀಗ ಈ ಘಟಕ ಆರಂಭದಿಂದ ದಲ್ಲಾಳಿಗಳ ಹಾವಳಿ, ಸಾರಿಗೆ ವೆಚ್ಚ ತಪ್ಪಿದಂತಾಗಿದೆ. ಅಲ್ಲದೆ, ಹಲವಾರು ನಿರುದ್ಯೋಗಿಗಳಿಗೂ ನೌಕರಿ ಸಿಕ್ಕಿದೆ. ಜೊತೆಗೆ ಸ್ವಯಂಚಾಲಿತ ರೇಷ್ಮೆ ನೂಲು ಬಿಚ್ಚಣಿಕೆ ಘಟಕ ಇರುವ ಕಾರಣ ಹೆಚ್ಚು ಕೆಲಸಗಾರರ ಅವಶ್ಯಕತೆ ಸಹ ಇಲ್ಲವಾಗಿದೆ.

ಒಟ್ಟಾರೆ ವಿಜಯಪುರ ಜಿಲ್ಲೆ ಸೇರಿ ಕಲ್ಯಾಣ ಕರ್ನಾಟಕ, ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ರೇಷ್ಮೆ ಬೆಳೆ ಬೆಳೆಯಲಾಗುತ್ತಿದ್ದು, ಈ ಘಟಕ ಆರಂಭಗೊಂಡಿರುವುದು ರೈತರಿಗೆ ಮತ್ತಷ್ಟು ಸಂತಸ‌ ತರಿಸಿದೆ.

ಸುನೀಲ್ ಭಾಸ್ಕರ ಪವರ ಟಿವಿ ವಿಜಯಪುರ

RELATED ARTICLES

Related Articles

TRENDING ARTICLES