Tuesday, May 14, 2024

ವರಾಹ ರೂಪಂ ಹಾಡಿಗೆ ಬ್ರೇಕ್​​.. ಸಾಂಗ್ ಕಂಪ್ಲೀಟ್​​​ ಡಿಲೀಟ್

ಬಾಕ್ಸ್​ ಆಫೀಸ್​ ಕಲೆಕ್ಷನ್​​ ಉಡೀಸ್​ ಮಾಡಿ ವಿಶ್ವವಿಖ್ಯಾತಿ ಗಳಿಸಿದ ಸಿನಿಮಾ ಕಾಂತಾರ. ಬರೋಬ್ಬರಿ 400 ಕೋಟಿಗೂ ಅಧಿಕ ಹಣ ದೋಚಿದ ಸಿನಿಮಾ ಹಲವು ವಿವಾದಗಳಿಂದ್ಲೂ ಸದ್ದು ಮಾಡ್ತು. ವರಾಹ ರೂಪಂ ಹಾಡನ್ನು ಕದ್ದ ಆರೋಪ ಎದುರಿಸ್ತಿದ್ದ ಕಾಂತಾರ ಸಿನಿಮಾ ಕೊನೆಗೂ ಸೋಲೊಪ್ಪಿಕೊಂಡಿದೆ. ಯೆಸ್​​​​.. ಏನಿದು ವಿವಾದ ಅಂತೀರಾ..? ನೀವೇ ಓದಿ.

  • ನವರಸಂ ಹಾಡು ಕದ್ದ ಆರೋಪದಲ್ಲಿ ಕಾಂತಾರ ಚಿತ್ರಕ್ಕೆ ಹಿನ್ನಡೆ

ರಿಷಬ್​ ಶೆಟ್ಟಿ ಆ್ಯಕ್ಷನ್​ ಕಟ್​ ಹೇಳಿದ್ದ, ಹೊಂಬಾಳೆ ಬ್ಯಾನರ್​​ನ ಜನಪ್ರಿಯ ಸಿನಿಮಾ ಕಾಂತಾರ. ಯಾರೂ ನಿರೀಕ್ಷಿಸಿದ ಮಟ್ಟದಲ್ಲಿ ಸಕ್ಸಸ್​​ ಕಂಡು ಅಬ್ಬರಿಸಿ ಬೊಬ್ಬಿರಿಯುತ್ತಿರುವ ಕಾಂತಾರ ಚಿತ್ರ ಇಂದಿಗೂ ಅದೇ ಕ್ರೇಜ್​. ಕರ್ನಾಟಕದ ಹಲವು ಥಿಯೇಟರ್​ಗಳಲ್ಲಿ ಹೌಸ್​​ಫುಲ್​ ಪ್ರದರ್ಶನ ಕಾಣ್ತಿರೋ ಕಾಂತಾರ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್​​​. ಚಿತ್ರದಲ್ಲಿ ಕ್ಲೈಮ್ಯಾಕ್ಸ್​​​​​ ಸೀನ್​  ಎಲ್ಲರನ್ನು ಮಂತ್ರಮುಗ್ಧಗೊಳಿಸಿತ್ತು. ಆದ್ರೆ, ಇದೀಗ ಕ್ಲೈಮ್ಯಾಕ್ಸ್​ ಹಾಡಿಗೆ ಕತ್ತರಿ ಬಿದ್ದಿದೆ.

ಯೆಸ್​.. ವರಾಹ ರೂಪಂ ಹಾಡನ್ನು ಹೊಂಬಾಳೆ ಯ್ಯುಟ್ಯೂಬ್​​ ಚಾನಲ್​​ನಿಂದ ಎತ್ತಂಗಡಿ ಮಾಡಲಾಗಿದೆ. ಎಲ್ಲರನ್ನು ಮೈನವಿರೇಳಿಸಿದ್ದ ಈ ಹಾಡು ಕ್ಲೈಮ್ಯಾಕ್ಸ್​​​ಗೆ ಮತ್ತಷ್ಟು ಮೈಲೇಜ್​ ಕೊಟ್ಟಿತ್ತು. ಎಲ್ಲರನ್ನೂ ಭಕ್ತಿ ಭಾವದಲ್ಲಿ ತೇಲಿಸಿತ್ತು. ಆದ್ರೆ, ನವರಸಂ ಅನ್ನೋ ಅಲ್ಬಂ ಸಾಂಗ್​ನಿಂದ ಕದ್ದ ಆರೋಪ ಎದುರಿಸಿದ ಚಿತ್ರತಂಡ ಕೊನೆಗೂ ಹಾಡನ್ನು ಕಂಪ್ಲೀಟ್​ ಡಿಲೀಟ್​ ಮಾಡಿದೆ.

ವರಾಹ ರೂಪಂ ಹಾಡು ಮಲಯಾಳಂನ ನವರಸಂ ಹಾಡನ್ನು ಹೋಲ್ತಿದೆ ಎಂಬ ಕಾರಣ ನೀಡಿ ತೈಕುಡಂ ಬ್ರಿಡ್ಜ್​ ಸಂಸ್ಥೆ ಹೊಂಬಾಳೆ ಸಂಸ್ಥೆಯ ವಿರುದ್ಧ ಕೋರ್ಟ್​​ನಲ್ಲಿ ದಾವೆ ಹೂಡಿತ್ತು. ಕೂಡಲೇ ಹಾಡನ್ನು ಡಿಲೀಟ್​ ಮಾಡ್ಬೇಕು. ಮತ್ತು ಯಾವುದೇ ವೇದಿಕೆಗಳಲ್ಲಿ ಬಳಸಬಾರದು ಎಂದು ಅರ್ಜಿಯಲ್ಲಿ ತಿಳಿಸಿತ್ತು. ಇದಾದ ನಂತ್ರವೂ, ಯಾವುದೇ ನೋಟಿಸ್​ ತಲುಪಿಲ್ಲ ಎಂಬ ಕಾರಣಕ್ಕೆ ಕಾಂತಾರ ಚಿತ್ರತಂಡ ಹಾಡಿಗೆ ಕತ್ತರಿ ಹಾಕಿರಲಿಲ್ಲ.

ಅಂತೂ ಕೊನೆಗೂ ಕೋರ್ಟ್​ ಆದೇಶಕ್ಕೆ ಮಣಿದು ವರಾಹ ರೂಪಂ ಹಾಡನ್ನು ತನ್ನ ಖಾತೆಯಿಂದ ಹೊಂಬಾಳೆ ಡಿಲೀಟ್​ ಮಾಡಿದೆ. ಜೊತೆಗೆ ಬೇರೆ ಆ್ಯಪ್​​​ ಸೇರಿದಂತೆ, ಸೋಶೀಯಲ್​ ಮೀಡಿಯಾಗಳಲ್ಲೂ ಬಳಕೆಗೆ ತಡೆ ಒಡ್ಡಲಾಗಿದೆ. ಅದೇನೆ ಇರಲಿ. ವರಾಹ ರೂಪಂ ಗೀತೆ ಚಿತ್ರದಲ್ಲಿ ಪ್ರಮುಖ ಘಟ್ಟದಲ್ಲಿ ಬರೋದ್ರಿಂದ, ಹಾಡನ್ನು ಡಿಲೀಟ್​ ಮಾಡಿದ್ದು ಬಿಗ್​ ಲಾಸ್​​​ಆಗಿದೆ. ಎನಿ ಹವ್​​​ ಕೋರ್ಟ್​​ನಲ್ಲಿರೋ ಈ ವಿವಾದಕ್ಕೆ ಸದ್ಯದಲ್ಲೇ ತೆರೆ ಬಿದ್ದು ಹಾಡನ್ನು ಮತ್ತೆ ಕೇಳುವಂತಾಗಲಿ ಎಂಬುದೇ ಅಭಿಮಾನಿಗಳ ಆಶಯ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್ ಟಿವಿ 

RELATED ARTICLES

Related Articles

TRENDING ARTICLES