ಬಾಕ್ಸ್ ಆಫೀಸ್ ಕಲೆಕ್ಷನ್ ಉಡೀಸ್ ಮಾಡಿ ವಿಶ್ವವಿಖ್ಯಾತಿ ಗಳಿಸಿದ ಸಿನಿಮಾ ಕಾಂತಾರ. ಬರೋಬ್ಬರಿ 400 ಕೋಟಿಗೂ ಅಧಿಕ ಹಣ ದೋಚಿದ ಸಿನಿಮಾ ಹಲವು ವಿವಾದಗಳಿಂದ್ಲೂ ಸದ್ದು ಮಾಡ್ತು. ವರಾಹ ರೂಪಂ ಹಾಡನ್ನು ಕದ್ದ ಆರೋಪ ಎದುರಿಸ್ತಿದ್ದ ಕಾಂತಾರ ಸಿನಿಮಾ ಕೊನೆಗೂ ಸೋಲೊಪ್ಪಿಕೊಂಡಿದೆ. ಯೆಸ್.. ಏನಿದು ವಿವಾದ ಅಂತೀರಾ..? ನೀವೇ ಓದಿ.
- ನವರಸಂ ಹಾಡು ಕದ್ದ ಆರೋಪದಲ್ಲಿ ಕಾಂತಾರ ಚಿತ್ರಕ್ಕೆ ಹಿನ್ನಡೆ
ರಿಷಬ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿದ್ದ, ಹೊಂಬಾಳೆ ಬ್ಯಾನರ್ನ ಜನಪ್ರಿಯ ಸಿನಿಮಾ ಕಾಂತಾರ. ಯಾರೂ ನಿರೀಕ್ಷಿಸಿದ ಮಟ್ಟದಲ್ಲಿ ಸಕ್ಸಸ್ ಕಂಡು ಅಬ್ಬರಿಸಿ ಬೊಬ್ಬಿರಿಯುತ್ತಿರುವ ಕಾಂತಾರ ಚಿತ್ರ ಇಂದಿಗೂ ಅದೇ ಕ್ರೇಜ್. ಕರ್ನಾಟಕದ ಹಲವು ಥಿಯೇಟರ್ಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣ್ತಿರೋ ಕಾಂತಾರ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್. ಚಿತ್ರದಲ್ಲಿ ಕ್ಲೈಮ್ಯಾಕ್ಸ್ ಸೀನ್ ಎಲ್ಲರನ್ನು ಮಂತ್ರಮುಗ್ಧಗೊಳಿಸಿತ್ತು. ಆದ್ರೆ, ಇದೀಗ ಕ್ಲೈಮ್ಯಾಕ್ಸ್ ಹಾಡಿಗೆ ಕತ್ತರಿ ಬಿದ್ದಿದೆ.
ಯೆಸ್.. ವರಾಹ ರೂಪಂ ಹಾಡನ್ನು ಹೊಂಬಾಳೆ ಯ್ಯುಟ್ಯೂಬ್ ಚಾನಲ್ನಿಂದ ಎತ್ತಂಗಡಿ ಮಾಡಲಾಗಿದೆ. ಎಲ್ಲರನ್ನು ಮೈನವಿರೇಳಿಸಿದ್ದ ಈ ಹಾಡು ಕ್ಲೈಮ್ಯಾಕ್ಸ್ಗೆ ಮತ್ತಷ್ಟು ಮೈಲೇಜ್ ಕೊಟ್ಟಿತ್ತು. ಎಲ್ಲರನ್ನೂ ಭಕ್ತಿ ಭಾವದಲ್ಲಿ ತೇಲಿಸಿತ್ತು. ಆದ್ರೆ, ನವರಸಂ ಅನ್ನೋ ಅಲ್ಬಂ ಸಾಂಗ್ನಿಂದ ಕದ್ದ ಆರೋಪ ಎದುರಿಸಿದ ಚಿತ್ರತಂಡ ಕೊನೆಗೂ ಹಾಡನ್ನು ಕಂಪ್ಲೀಟ್ ಡಿಲೀಟ್ ಮಾಡಿದೆ.
ವರಾಹ ರೂಪಂ ಹಾಡು ಮಲಯಾಳಂನ ನವರಸಂ ಹಾಡನ್ನು ಹೋಲ್ತಿದೆ ಎಂಬ ಕಾರಣ ನೀಡಿ ತೈಕುಡಂ ಬ್ರಿಡ್ಜ್ ಸಂಸ್ಥೆ ಹೊಂಬಾಳೆ ಸಂಸ್ಥೆಯ ವಿರುದ್ಧ ಕೋರ್ಟ್ನಲ್ಲಿ ದಾವೆ ಹೂಡಿತ್ತು. ಕೂಡಲೇ ಹಾಡನ್ನು ಡಿಲೀಟ್ ಮಾಡ್ಬೇಕು. ಮತ್ತು ಯಾವುದೇ ವೇದಿಕೆಗಳಲ್ಲಿ ಬಳಸಬಾರದು ಎಂದು ಅರ್ಜಿಯಲ್ಲಿ ತಿಳಿಸಿತ್ತು. ಇದಾದ ನಂತ್ರವೂ, ಯಾವುದೇ ನೋಟಿಸ್ ತಲುಪಿಲ್ಲ ಎಂಬ ಕಾರಣಕ್ಕೆ ಕಾಂತಾರ ಚಿತ್ರತಂಡ ಹಾಡಿಗೆ ಕತ್ತರಿ ಹಾಕಿರಲಿಲ್ಲ.
ಅಂತೂ ಕೊನೆಗೂ ಕೋರ್ಟ್ ಆದೇಶಕ್ಕೆ ಮಣಿದು ವರಾಹ ರೂಪಂ ಹಾಡನ್ನು ತನ್ನ ಖಾತೆಯಿಂದ ಹೊಂಬಾಳೆ ಡಿಲೀಟ್ ಮಾಡಿದೆ. ಜೊತೆಗೆ ಬೇರೆ ಆ್ಯಪ್ ಸೇರಿದಂತೆ, ಸೋಶೀಯಲ್ ಮೀಡಿಯಾಗಳಲ್ಲೂ ಬಳಕೆಗೆ ತಡೆ ಒಡ್ಡಲಾಗಿದೆ. ಅದೇನೆ ಇರಲಿ. ವರಾಹ ರೂಪಂ ಗೀತೆ ಚಿತ್ರದಲ್ಲಿ ಪ್ರಮುಖ ಘಟ್ಟದಲ್ಲಿ ಬರೋದ್ರಿಂದ, ಹಾಡನ್ನು ಡಿಲೀಟ್ ಮಾಡಿದ್ದು ಬಿಗ್ ಲಾಸ್ಆಗಿದೆ. ಎನಿ ಹವ್ ಕೋರ್ಟ್ನಲ್ಲಿರೋ ಈ ವಿವಾದಕ್ಕೆ ಸದ್ಯದಲ್ಲೇ ತೆರೆ ಬಿದ್ದು ಹಾಡನ್ನು ಮತ್ತೆ ಕೇಳುವಂತಾಗಲಿ ಎಂಬುದೇ ಅಭಿಮಾನಿಗಳ ಆಶಯ.
ರಾಕೇಶ್ ಆರುಂಡಿ, ಫಿಲ್ಮ್ ಬ್ಯುರೋ, ಪವರ್ ಟಿವಿ