Wednesday, December 25, 2024

ಪತ್ನಿಯ ಕಾಟಕ್ಕೆ ತಾಯಿ-ಮಗ ನೇಣಿಗೆ ಶರಣು

ಬೆಂಗಳೂರು: ತಾಯಿ, ಮಗ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ರಾಜಗೋಪಾಲನಗರದ ಶ್ರೀಗಂಧ ನಗರದಲ್ಲಿ ನಡೆದಿದೆ.

ಭಾಗ್ಯಮ್ಮ(ತಾಯಿ) ಹಾಗೂ ಶ್ರೀನಿವಾಸ್(ಮಗ) ಮೃತ ದುರ್ದೈವಿಗಳು, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಾಯಿ ಮಗ ನೇಣಿಗೆ ಶರಣಾಗಿದ್ದಾರೆ. ಮೃತ ಶ್ರೀನಿವಾಸ್, ತಂದೆ ತಾಯಿಗೆ ವಯಸ್ಸಾದ ಕಾರಣ ಅಪ್ಪ ಹಾಗೂ ಅಮ್ಮನನ್ನು ಊರಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ.

ತಂದೆ-ತಾಯಿಯನ್ನು ಯಾಕೆ ಕರೆದುಕೊಂಡು ಬಂದಿದ್ದು ಅಂತ ಶ್ರೀನಿವಾಸ್ ಪತ್ನಿ ಸಂಧ್ಯಾ ಗಲಾಟೆ ಮಾಡಿದ್ದಾರೆ. ಶ್ರೀನಿವಾಸ್ ಪತ್ನಿ ಸಂಧ್ಯಾ ಹಾಗೂ ಶ್ರೀನಿವಾಸ್​ ತಂದೆ-ತಾಯಿಯ ಜತೆಗೆ ಕಳೆದ ಕೆಲವು ದಿನಳಿಂದ ಗಲಾಟೆ ಮಾಡುತ್ತಿದ್ದರು. ಇದರಿಂದ ಬೇಸತ್ತ ಶ್ರೀನಿವಾಸ್​ ಹಾಗೂ ತಾಯಿ ಇಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ರಾಜಗೋಪಾಲನಗರ ಪೊಲೀಸರಿಂದ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES