Monday, December 23, 2024

ನಿಲ್ಲಿಸಿದ್ದ ಲಾರಿ ರಾತ್ರೋ ರಾತ್ರಿ ಎಗರಿಸುತ್ತಿದ್ದ ಕಳ್ಳರು ಅಂದರ್​.!

ಬೀದರ; ಬಸವಕಲ್ಯಾಣ ತಾಲೂಕಿನ ಮತ್ತು ಹಣಮಂತ ವಾಡಿ ಸೇರಿದಂತೆ ಬೇರೆ ಕಡೆಗಳಲ್ಲಿ ರಸ್ತೆ ಬದಿ ನಿಲ್ಲಿಸಿದ ಲಾರಿ ಕಳವು ಮಾಡುತ್ತಿದ್ದ ಮೂವರನ್ನ ಬಂಧನ ಮಾಡಲಾಗಿದೆ.

ಜಿಲ್ಲೆಯಲ್ಲಿ ಒಟ್ಟು ನಾಲ್ಕು ಕಡೆ ಲಾರಿ ಕಳ್ಳವು ಮಾಡಿದ್ದ ಈ ಆರೋಪಿಗಳು, ಬಂಧಿತ ರೋಪಿಗಳು ಬೀದರ ತಾಲೂಕಿನ ವೈಲೂರನ ಶೇಖ ವಹಾಬ್, ಮಹಾರಾಷ್ಟ್ರದ ಉದಗಿರ ನಿವಾಸಿ ಆದಿಲ ಮೆರಾಜ, ಹೈದರಾಬಾದ್ ನಿವಾಸಿ ಖುರ್ಷಿದ್ ಅಹ್ಮದ್ ಎಂದು ಗುರುತಿಸಲಾಗಿದೆ.

ಎಲ್ಲರೂ ಮಲಗಿದ ವೇಳೆಯಲ್ಲಿ ರಾತ್ರೋ ರಾತ್ರಿ ಎಂಟ್ರಿಯಾಗಿ ಕ್ಷಣಾರ್ಧದಲ್ಲಿಯೇ ಲಾರಿಯನ್ನ ಈ ಕಳ್ಳರು ಎಗರಿಸುತ್ತಿದ್ದರು. ಆರೋಪಿಗಳಿಗೆ ತಲೆಕೆಡಿಸಿಕೊಂಡಿದ್ದ ಬಸವಕಲ್ಯಾಣ ಪೊಲೀಸರು ಕಡೆಗೂ ಆರೋಪಿಗಳನ್ನ ಎಡೆಮುರಿ ಕಟ್ಟುವಲ್ಲಿ ಈಗ ಯಶಸ್ವಿಯಾಗಿದ್ದಾರೆ.

ಜಿಲ್ಲೆಯಲ್ಲಿ ಲಾರಿ ಕಳವು ಹೆಚ್ಚಾದ ಹಿನ್ನಲೆಯಲ್ಲಿ ಸಿಪಿಐ ವಿಜಯಕುಮಾರ, ‌ಸಬ್ ಇನ್ಸ್ಪೆಕ್ಟರ್ ಅಂಬರೀಶ ವಾಘಮೋರೆ ನೇತ್ರತ್ವದಲ್ಲಿ ಲಾರಿಗಳ ಪತ್ತೆ ಕಾರ್ಯವನ್ನ ನಡೆಸುತ್ತಿದ್ದ ವೇಳೆಯಲ್ಲಿ ಈ ಕಳ್ಳರು ಬಂಧನ ಮಾಡಲಾಗಿದೆ.

RELATED ARTICLES

Related Articles

TRENDING ARTICLES