ಕೋಲಾರ:ಕೋಲಾರ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿಯುತ್ತಾರಾ ಸಿದ್ದರಾಮಯ್ಯ..?, ಕೋಲಾರದಿಂದಲೇ ಸ್ಪರ್ಧೆ ಮಾಡುವಂತೆ ಸಿದ್ದು ಮೇಲೆ ಒತ್ತಡ ಹೇರಲಾಗಿದೆ. ಸಿದ್ದರಾಮಯ್ಯನವರಿಗೆ, ಪದೇ ಪದೇ ಸ್ಥಳೀಯ ಕೈ ಮುಖಂಡರಿಂದ ಮನವಿ ಮಾಡಿದ್ದಾರೆ.
ಹೀಗಾಗಿ ಕೋಲಾರದ ಪರಿಸ್ಥಿತಿ ತಿಳಿಯಲು ಮುಂದಾದ ಸಿದ್ದರಾಮಯ್ಯ. ಕೋಲಾರ ಜನತೆಯ ನಾಡಿ ಮಿಡಿತ ತಿಳಿಯಲು ಮುಂದಾದ ಸಿದ್ದರಾಮಯ್ಯ. ಕೋಲಾರ ಕ್ಷೇತ್ರದಲ್ಲಿ ಮಂದಿರ, ಮಸೀದಿ, ಚರ್ಚ್ ಗೆ ಭೇಟಿ ನೀಡಲಿರುವ ಸಿದ್ದು. ಟೆಂಪಲ್ ರನ್ ಬಳಿಕ ಸ್ಥಳೀಯ ಮುಖಂಡರು, ಸಂಘ ಸಂಸ್ಥೆಗಳೊಂದಿಗೆ ಸಿದ್ದು ಮೀಟಿಂಗ್ ಮಾಡಲಿದ್ದಾರೆ.
ಸಿದ್ದುಗೆ ಸಾಥ್ ನೀಡಲಿದ್ದಾರೆ ರಮೇಶ್ ಕುಮಾರ್, ಕೆ.ಎಚ್ ಮುನಿಯಪ್ಪ ಇಂದು ಇಡೀ ದಿನ ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ರೌಂಡ್ಸ್ ಮಾಡಲಿದ್ದಾರೆ. ಇಂದು ಸುಮಾರು 14 ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಸಿದ್ದರಾಮಯ್ಯ,ಮೊದಲು ಶ್ರೀ ಕೋಲಾರಮ್ಮ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಮೆಥೋಡಿಸ್ಟ್ ಚರ್ಚ್, ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ, ಕಾಲೇಜ್ ಸರ್ಕಲ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ, ಇಟಿಸಿಎಂ ವೃತ್ತ, ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತದನಂತರ, ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾಲಾರ್ಪಣೆ, ಬಂಗಾರಪೇಟೆ ವೃತ್ತ, ಕನಕ ಮಂದಿರಕ್ಕೆ ಭೇಟಿ,ಯೋಗಿ ಶ್ರೀ ನಾರಾಯಣ ಯತೀಂದ್ರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ದರ್ಗಾಕ್ಕೆ ಭೇಟಿ, ಕ್ಲಾಕ್ ಟವರ್, ನರಸಾಪುರ ಕೆರೆ ವೀಕ್ಷಣೆ, ಶ್ರೀ ಆಂಜನೇಯ ದೇವಾಲಯಕ್ಕೆ ಭೇಟಿ, ಕುರುಬರಹಳ್ಳಿ ಗೇಟ್,ವೇಮಗಲ್ ರಸ್ತೆ, ಸೀತಿ ಬೆಟ್ಟದಲ್ಲಿ ಪೂಜಾ ಕಾರ್ಯಕ್ರಮ. ಹಾಗೂ ದಿವಂಗತ ಬೈರೇಗೌಡ ಸಮಾಧಿ ಸ್ಥಳಕ್ಕೆ ಭೇಟಿ, ಗರುಡಾಪಾಳ್ಯಕ್ಕೆ ಭೇಟಿ ಮಾಡಲಿದ್ದು, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ವಿವಿಧ ಸಂಘ ಸಂಸ್ಥೆಗಳ, ಪದಾಧಿಕಾರಿಗಳು ಸಿದ್ದುಗೆ ಸಾಥ್ ನೀಡಲಿದ್ದಾರೆ.