Saturday, January 18, 2025

ಸ್ವಾರಿ ಬ್ರದರ್ ಇದು ನಿಮ್ಮ ಕರ್ಮ.. ಇಂಗ್ಲೆಂಡ್​ ಅರ್ಹ ತಂಡವೆಂದು ಅಖ್ತರ್​ಗೆ ಶಮಿ ತಿರುಗೇಟು​​.!

ನವದೆಹಲಿ: ಇಂದು ಆಸ್ಟ್ರೇಲಿಯಾದ ಮೇಲ್ಬೋರ್ನ್​ನಲ್ಲಿ ನಡೆದ ಟಿ-20 ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಪಾಕಿಸ್ತಾನ ತಂಡ ಸೋಲು ಅನುಭವಿಸಿ ಭಾರೀ ಮುಖಭಂಗ ಅನುಭವಿಸಿದೆ. ಈ ಹಿಂದೆ ಭಾರತಕ್ಕೆ ಕಾಲೆಳೆದಿದ್ದ ಶೋಯೆಬ್‌ ಅಖ್ತರ್‌​ ಅವರಿಗೆ ಈಗ ಮೊಹಮ್ಮದ್ ಶಮಿ ಟಾಂಗ್​ ನೀಡಿದ್ದಾರೆ.

ಇದಕ್ಕೂ ಮೊದಲು ಭಾರತ ತಂಡ ಇಂಗ್ಲೆಂಡ್​ ತಂಡವನ್ನ ಸಮಿಫೈನಲ್​ನಲ್ಲಿ ಎದುರಿಸಿತ್ತು. ಈ ವೇಳೆ ಭಾರತ ಭಾರೀ ಅಂತರದಿಂದ ಸೋಲು ಅನುಭವಿತ್ತು. ಇದಕ್ಕೆ ಪಾಕಿಸ್ತಾನ ವೇಗಿ ಶೋಯೆಬ್​ ಅಖ್ತರ್​ ಟ್ವೀಟ್​ ಮಾಡಿ, ಭಾರತದ ಸೋಲು ಅತ್ಯಂತ ಮುಜುಗರ ತರಿಸಿದೆ. ಟೀಂ ಇಂಡಿಯಾ ಅತ್ಯಂತ ಭಯಂಕರವಾಗಿ ಆಡಿದರೂ ಸೋಲುವುದಕ್ಕೆ ಈ ತಂಡ ಅರ್ಹವಾಗಿತ್ತು. ಫೈನಲ್‌ಗೆ ಬರಲು ಭಾರತ ತಂಡ ಅರ್ಹರಾಗಿರಲಿಲ್ಲ. ಭಾರತ ತಂಡದಲ್ಲಿ ಎಕ್ಸ್‌ಪ್ರೆಸ್‌ ವೇಗಿ ಇರಲಿಲ್ಲ. ಒಂದು ಪಂದ್ಯದಲ್ಲೂ ಚಹಾಲ್ ಆಡಲಿಲ್ಲ. ಭಾರತದ ಬೌಲಿಂಗ್ ತುಂಬಾ ಕೆಟ್ಟದಾಗಿತ್ತು.

ಇದಕ್ಕೆ ಇಂದು ಟಿ-20 ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಪಾಕಿಸ್ತಾನ ತಂಡ ಸೋಲು ಅನುಭವಿಸಿದ ಹಿನ್ನಲೆಯಲ್ಲಿ ಮೊಹಮ್ಮದ್​ ಶಮಿ ಪಾಕಿಸ್ತಾನದ ಮಾಜಿ ವೇಗಿಗೆ ಕಾಲೆಳೆದಿದ್ದಾರೆ.

ಪಾಕಿಸ್ತಾನ ಸೋಲು ಕಾಣುತ್ತಿದ್ದಂತೆ ಟ್ವೀಟ್​ ಮಾಡಿದ ಶಮಿ, ಸ್ವಾರಿ ಬ್ರದರ್​ ಇದು ನಿಮ್ಮ ಕರ್ಮ ಎಂದಿದ್ದಾರೆ. ಅಲ್ಲದೇ, ಫೈನಲ್​ ಪಂದ್ಯದಲ್ಲಿ ಜಯ ಸಾಧಿಸಿದ ಇಂಗ್ಲೆಂಡ್​ ತಂಡಕ್ಕೆ ಶುಭಕೋರಿದರು. ಫೈನಲ್​ನಲ್ಲಿ ಗೆಲುವು ಕಂಡ ತಂಡ ಅರ್ಹವಾದದ್ದು, ಬೆನ್‌ಸ್ಟೋಕ್ಸ್ ಅದ್ಭುತ ಇನ್ನಿಂಗ್ಸ್ ಆಡಿದ್ದಕ್ಕೆ ಹಾಗೂ ಬೌಲಿಂಗ್​ ಮಾಡಿದ್ದಕ್ಕೆ ಶುಭಕೋರಿದರು.

 

RELATED ARTICLES

Related Articles

TRENDING ARTICLES