Monday, December 23, 2024

ಸರ್ಕಾರಿ ಶಾಲೆಯಲ್ಲಿ ಕುಡುಕರ ಆವಳಿ

ಚಾಮರಾಜನಗರ: ಸರ್ಕಾರಿ ಶಾಲೆಯಲ್ಲಿ ಕುಡುಕರ ಆವಳಿ, ಶಾಲಾವರಣದಲ್ಲಿ ಮಧ್ಯದ ಬಾಟಲಿಗಳು. ರಾತ್ರಿ ವೇಳೆ ಶಾಲಾವರಣಕ್ಕೆ ನುಗ್ಗಿ ಮದ್ಯಪಾನ ಮಾಡಿ ಶಾಲಾ ಆಸ್ತಿ ಹಾನಿ ಮಾಡಿರುವ ಕಿಡಿಗೇಡಿಗಳು.

ಹನೂರು ಪೋಲಿಸ್ ಠಾಣೆಗೆ ದೂರು ನೀಡಿದ ಶಾಲೆಯ ಮುಖ್ಯ ಶಿಕ್ಷಕರು. ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಎಲ್ಲೆಮಾಳ ಗ್ರಾಮದ ಸರ್ಕಾರಿ ಪ್ರೌಡಶಾಲೆಯಲ್ಲಿ ಘಟನೆ. ಶೈಕ್ಷಣಿಕ ಚಟುವಟಿಕೆಗಳಿಗೆ ಭಂಗ ತರುವ ಜತೆಗೆ ಮಕ್ಕಳಲ್ಲಿ ಭಯದ ವಾತಾವರಣ ಸೃಷ್ಟಿಸಿರುವ ಕಿಡಿಗೇಡಿಗಳು.

ಶಾಲೆಗೆ ಆಗಮಿಸಿದ ಮಕ್ಕಳು ಹಾಗೂ ಶಿಕ್ಷಕರು ಘಟನೆ ಕಂಡು ಆತಂಕ. ಎಸ್ ಡಿ ಎಂ ಸಿ ಅದ್ಯಕ್ಷರು ಹಾಗೂ ಮುಖ್ಯ ಶಿಕ್ಷಕ
ನಾಗಕನ್ನಿಕಾಲಕ್ಷ್ಮಿ ರಿಂದ ಹನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES

Related Articles

TRENDING ARTICLES