ಆಸ್ಟ್ರೇಲಿಯಾ: ಇಂದು ನಡೆದ ಐಸಿಸಿ ಟಿ-20 ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ತಂಡ ಭರ್ಜರಿ 5 ವಿಕೆಟ್ಗಳಿಂದ ಭರ್ಜರಿ ಜಯಸಾಧಿಸಿತು. ಈ ಮೂಲಕ ಎರಡನೇ ಬಾರಿಗೆ ಇಂಗ್ಲೆಂಡ್ ತಂಡ ಪ್ರಶಸ್ತಿಯನ್ನ ಎತ್ತಿ ಹಿಡಿದ ತಂಡ ಎನ್ನಿಸಿಕೊಂಡಿತು.
ಆಸ್ಟ್ರೇಲಿಯಾದ ಮೇಲ್ಬರ್ನ್ನಲ್ಲಿ ನಡೆದ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನ ಬಗ್ಗು ಬಡಿದು ಇಂಗ್ಲೆಂಡ್ ತಂಡ ಎರಡನೇ ಬಾರಿಗೆ ಟಿ-20 ವಿಶ್ವಕಪ್ ಪ್ರಶಸ್ತಿ ಕಿರೀಟವನ್ನ ಮುಡಿಗೇರಿಸಿಕೊಂಡಿತು. ಈ ಮೊದಲು 2010 ರಲ್ಲಿ ಇಂಗ್ಲೆಂಡ್ ತಂಡ ವಿಶ್ವಕಪ್ ಪ್ರಶಸ್ತಿಯನ್ನ ವಿಜೇತವಾಗಿತ್ತು.
ಮೊದಲು ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿತು. ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 137 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ 19 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿ ಪಾಕಿಸ್ತಾನ ನಿಡಿದ ಗುರಿ ತಲುಪಿತು. ಇಂಗ್ಲೆಂಡ್ ಪರ ಬೆನ್ ಸ್ಟ್ರೋಕ್ ಅರ್ಧ ಶತಕ ಮಿಂಚಿ ಇಂಗ್ಲೆಂಡ್ ಗೆಲುವಿಗೆ ಕಾರಣರಾದರು.
ಇನ್ನು ಅಪರೂಪ ಎಂಬತೆ ಸಮಿಫೈನಲ್ಗೆ ಲಗ್ಗೆ ಇಟ್ಟು ನ್ಯೂಜಿಲೆಂಡ್ ತಂಡವನ್ನ ಎದುರಿಸಿ ಗೆಲುವು ಕಾಣೋ ಮೂಲಕ ಪಾಕಿಸ್ತಾನ ತಂಡ ಫೈನಲ್ಗೆ ಎಂಟ್ರಿಯಾಗಿತ್ತು. ಆದರೆ, ಇಂದು ನಡೆದ ಫೈನಲ್ ಪಂದ್ಯದಲ್ಲಿ ಯಾವ ಆಟಗಾರರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡದ ಕಾರಣಕ್ಕೆ ಮುಗ್ಗರಿಸಬೇಕಾಯಿತು. ಈ ಮೂಲಕ ಎರಡನೇ ಬಾರಿಗೆ ಪ್ರಶಸ್ತಿ ಮುಡಿಗೇರಿಕೊಳ್ಳಬೇಕೆಂಬ ಅದೆಷ್ಟೋ ಕನಸು ಕಂಡಿದ್ದ ಅಭಿಮಾನಿಗಳಿಗೆ ಪಾಕಿಸ್ತಾನ ಆಟಗಾರರು ತಣ್ಣೀರೆರಚಿದರು.