Monday, January 6, 2025

‘ಜಮಾಲಿಗುಡ್ಡ’  ಕೌಂಟ್​​ಡೌನ್ ಸ್ಟಾರ್ಟ್​​​​​​​.. ಡಾಲಿ ರೋರಿಂಗ್​​​​​​

ಒನ್ಸ್ ಅಪಾನ್​ ಎ ಟೈಮ್​ ಇನ್​ ಜಮಾಲಿಗುಡ್ಡ ನಟ ರಾಕ್ಷಸನ ಬಹುನಿರೀಕ್ಷಿತ ಸಿನಿಮಾ. ವಿಭಿನ್ನ ಪೋಸ್ಟರ್​​​, ಸಣ್ಣ ಪುಟ್ಟ ಗ್ಲಿಂಪ್ಸ್​​​ ಮೂಲಕವೇ ಸಿಕ್ಕಾಪಟ್ಟೆ  ಹೈಪ್​ ಕ್ರಿಯೇಟ್​ ಮಾಡಿರೋ ಚಿತ್ರ. ಹತ್ತು ಹಲವು ವಿಶೇಷಗಳಿಂದ ಗಮನ ಸೆಳೆಯುತ್ತಿರುವ ಜಮಾಲಿ ಗುಡ್ಡದ ಕಥೆಗೆ ಕೌಂಟ್​ಡೌನ್​ ಸ್ಟಾರ್ಟ್​ ಆಗಿದೆ. ಯೆಸ್​​.. ಜಮಾಲಿಗುಡ್ಡದ ರಹಸ್ಯಗಳ ಬಗ್ಗೆ ತಿಳಿಬೇಕಾ..? ನೀವೇ ಓದಿ.

  • ಹಿರೋಶಿಮಾ, ನಾಗಸಾಕಿ, ಚುಕ್ಕಿಯ ಜಮಾಲಿಗುಡ್ಡದ​ ಜರ್ನಿ

ನಟ ಭಯಂಕರ ಡಾಲಿ ಧನಂಜಯ ರೆಟ್ರೋ ಸ್ಟೈಲ್​ನಲ್ಲಿ ಮತ್ತೆ ಬೆಳ್ಳಿತೆರೆಯ ಮೇಲೆ ಮಿಂಚೋಕೆ ಬರ್ತಿದ್ದಾರೆ. ಆದ್ರೆ, ಈ ಬಾರಿಯ ಪ್ರೇಮಕಾವ್ಯ ತುಸು ವಿಭಿನ್ನವಾಗಿರಲಿದೆ. ಈಗಾಗ್ಲೇ ಚಿತ್ರದ ಪೋಸ್ಟರ್​ಗಳು ಕಥೆಯ ಮೇಲಿನ ಭರವಸೆಯನ್ನು ದುಪ್ಪಟ್ಟು ಮಾಡಿವೆ. ಜೊತೆಗೆ ಪ್ರತಿ ಪಾತ್ರಗಳ ಹಿಂದೆ ಮನಮೋಹಕ ಹಾಗೂ ಮನಕಲಕುವ ಕಥೆ ಇರಲಿದೆ. ಆ ಕಥೆಗಳ ಒಳಗೆ ಮತ್ತೊಂದು ಕುತೂಹಲವನ್ನು ತೆರೆದಿಡಲು ಜಮಾಲಿಗುಡ್ಡದ ಕಥೆ ರೆಡಿಯಾಗಿದೆ.

ಕ್ಯಾಚಿ ಟೈಟಲ್​ ಮೇಲೆ ಸೆನ್ಸೇಷನ್​ ಕ್ರಿಯೇಟ್​ ಮಾಡಿರೋ ಜಮಾಲಿಗುಡ್ಡದಲ್ಲಿ ಹರಳು ಹುರಿದ ಹಾಗೆ ಮಾತನಾಡೋ ಬ್ಯೂಟಿ ಕ್ವೀನ್​ ಅದಿತಿ ಇದ್ದಾರೆ. ಯಾವುದೇ ಪಾತ್ರ ಕೊಟ್ಟರೂ  ನೀರು ಕುಡಿದಷ್ಟೆ ಲೀಲಾಜಾಲವಾಗಿ ನಟಿಸೋ ಡಾಲಿ ಈ ಚಿತ್ರದಲ್ಲಿ ಖೈದಿಯಾಗಿ ಆ್ಯಕ್ಟ್ ಮಾಡ್ತಿದ್ದಾರೆ. ಅಭಿನಯ ಚತುರನ ಕಲಾತ್ಮಕತೆಯನ್ನು ನೋಡೋ ತವಕ ಅಭಿಮಾನಿಗಳಲ್ಲೂ ಮನೆ ಮಾಡಿದೆ.

ಹೀರೋಶಿಮಾ, ನಾಗಾಸಾಕಿ, ಚುಕ್ಕಿ, ಹೀಗೆ ಕ್ಯಾಚಿ ರೋಲ್​ಗಳು ತಮ್ಮ ಪಾತ್ರ ನಿಭಾಯಿಸಲಿವೆ. ಡಿಸೆಂಬರ್​​ ಮಂತ್​​​ ಚಿತ್ರಗಳ ಪಾಲಿಗೆ ಲಕ್ಕಿಯಾಗಿರೋದ್ರಿಂದ ಜಮಾಲಿಗುಡ್ಡ ಚಿತ್ರ ಕೂಡ ಡಿಸೆಂಬರ್​ 30ಕ್ಕೆ ತೆರೆಗೆ ಬರಲಿದೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ರಿಲೀಸ್​ ಆಗ್ತಿರೋ ಜಮಾಲಿಗುಡ್ಡದ ವಿಭಿನ್ನ ಕಥೆಗೆ ಪ್ರೇಕ್ಷಕರು ಕೂಡ ಎಗ್ಸೈಟ್​ ಆಗಿದ್ದಾರೆ.

ನಿಹಾರಿಕಾ ಮೂವೀಸ್ ಬ್ಯಾನರ್​​ನಡಿ ಶ್ರೀಹರಿ ನಿರ್ಮಾಣದಲ್ಲಿ, ಕುಶಾಲಗೌಡ ನಿರ್ದೇಶನದಲ್ಲಿ  ಸಿನಿಮಾ ಮೂಡಿ ಬರ್ತಿದೆ. ರಿಲೀಸ್ ಡೇಟ್ ಜೊತೆ ಒಂದಷ್ಟು ಕ್ಯಾರೆಕ್ಟರ್ಸ್​ನ ರಿವೀಲ್ ಮಾಡಿದ್ದ ಚಿತ್ರತಂಡ, ಸಿನಿಮಾ ಟೈಟಲ್​ನಂತೆ ಆ ಪಾತ್ರಗಳಿಗೂ ವೆರೈಟಿ ನೇಮ್ಸ್ ನೀಡಿ ಹುಬ್ಬೇರಿಸುವಂತೆ ಮಾಡಿದೆ.

ನಾಗಸಾಕಿಯಾಗಿ ಯಶ್ ಶೆಟ್ಟಿ, ರುಕ್ಮಿಣಿಯಾಗಿ ಅದಿತಿ ಪ್ರಭುದೇವ, ಬಾಳೇಗೌಡರಾಗಿ ನಂದ ಗೋಪಾಲ್, ಪಾಯಲ್ ಆಗಿ ಹಿರಿಯ ನಟಿ ಭಾವನಾ, ಪಟ್ಲಿಂಗನಾಗಿ ಸಂತೋಷ್, ಶಕೀಲ್ ಪಾತ್ರದಲ್ಲಿ ಪ್ರಕಾಶ್ ಬೆಳವಾಡಿ ಕಾಣಸಿಗಲಿದ್ದಾರೆ. ಒಟ್ಟಾರೆ ‘ಒನ್ಸ್ ಅಪ್​ ಆನ್ ಎ ಟೈಮ್ ಜಮಾಲಿ ಗುಡ್ಡ’ ಒಂದೊಳ್ಳೆ ಪ್ರಯತ್ನವಾಗಿ ಮೂಡಿಬರಲಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES