Monday, December 23, 2024

ಚೆನ್ನೈನಲ್ಲಿ ‘ಜೈಲರ್’​​​ ಕಿಕ್​ಸ್ಟಾರ್ಟ್​​​​.. ರಜನಿ, ಶಿವಣ್ಣ ಗೆಟ್​​ರೆಡಿ

ಕಾಲಿವುಡ್​ನಲ್ಲೂ ಹ್ಯಾಟ್ರಿಕ್​ ಹೀರೋ ಕಮಾಲ್​ ಮಾಡಲಿದ್ದಾರೆ. ಯೆಸ್​​.. ಸೆನ್ಸೆಷನ್​ ಕ್ರಿಯೇಟ್​​ ಮಾಡಿರೋ ಜೈಲರ್​ ಚಿತ್ರದ ಪೋಸ್ಟರ್​ಗಳು ಚಿತ್ರರಸಿಕರ ಎದೆಯಲ್ಲಿ ಕಿಚ್ಚಿನ ಕಿಡಿ ಹಚ್ಚಿವೆ. ರಜನಿಕಾಂತ್​​​, ಶಿವಣ್ಣ ಕಾಂಬಿನೇಷನ್​​ನ ತೆರೆಯ ಮೇಲೆ ನೋಡೋ ತವಕ ಕೂಡ ಹೆಚ್ಚಾಗಿದೆ. ಈಗಾಗ್ಲೇ ಜೈಲರ್​​ ಟೀಮ್​​​ ಸೇರಿಕೊಂಡಿರುವ ಸೆಂಚುರಿ ಸ್ಟಾರ್​​ ಅಭಿಮಾನಿಗಳಿಗೆ ಸರ್​ಪ್ರೈಸ್​ ಕೊಟ್ಟಿದ್ದಾರೆ.

  • ನ್ಯಾಷನಲ್​ ಲೆವೆಲ್​​ನಲ್ಲಿ ಸಿಂಹದಮರಿಯ ಘರ್ಜನೆ ಜೋರು

ಶಿವರಾಜ್​ ಕುಮಾರ್​​​​. ಆಲ್ವೇಸ್​ ಯಂಗ್​ ಅಂಡ್​ ಎನರ್ಜಿಟಿಕ್​ ಹೀರೋ. ಅರವತ್ತಾದ್ರೂ  ಆ್ಯಕ್ಷನ್​ ವೇಂಚರ್​ ಸಿನಿಮಾಗಳಲ್ಲಿ ಟೆರರ್​​​. ಪ್ರೇಕ್ಷಕರ ಎದೆಯಲ್ಲಿ ಟೆಂಪರೇಚರ್​ ಹೆಚ್ಚಿಸೋ ಜಬರ್ದಸ್ತ್​​ ಹೀರೋ. ಯೆಸ್​​.. ಶಿವಣ್ಣನ ಸಿನಿಕರಿಯರ್​​ನಲ್ಲಿ ಬರೋಬ್ಬರಿ 125 ಸಿನಿಮಾಗಳನ್ನು ಕಂಪ್ಲೀಟ್​ ಮಾಡಲಿದ್ದಾರೆ. ಇದ್ರ ಜತೆಗೆ ಕಾಲಿವುಡ್​ನಲ್ಲಿ ತಲೈವಾ ಜತೆಗೂ ಸ್ಕ್ರೀನ್​​​​ ಶೇರ್​ ಮಾಡೋಕೆ ಸಜ್ಜಾಗಿದ್ದಾರೆ.

ಯೆಸ್​​​.. ಡಾ.ಶಿವಣ್ಣ ಪ್ಯಾನ್​ ಇಂಡಿಯಾ ಲೆವೆಲ್​ನಲ್ಲಿ ಕಮಾಲ್​ ಮಾಡ್ತಿದ್ದಾರೆ. ರಜನಿಕಾಂತ್​ ಅಭಿನಯದ ಜೈಲರ್​ ಚಿತ್ರದಲ್ಲಿ ಲೀಡ್​ ರೋಲ್​ನಲ್ಲಿ ಅಬ್ಬರಿಸ್ತಿದ್ದಾರೆ. ರಜನಿ, ಹ್ಯಾಟ್ರಿಕ್​ ಹೀರೋ ಕಾಂಬೋಗೆ ಪ್ರೇಕ್ಷಕರು ತಲೆಕೆಡಿಸಿಕೊಂಡಿದ್ದಾರೆ. ಸದ್ಯ, ಚೆನ್ನೈನಲ್ಲಿ ಜೈಲರ್​ ಚಿತ್ರದ ಶೂಟಿಂಗ್​ ಶುರುವಾಗಿದ್ದು, ಶಿವಣ್ಣ ಜೈಲರ್​ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.

ಇಬ್ರೂ ಸೂಪರ್​ ಸ್ಟಾರ್​ಗಳನ್ನು ಒಂದೇ ಚಿತ್ರದಲ್ಲಿ ತೋರಿಸ್ತಾ ಇರೋದ್ರಿಂದ ಜವಾಬ್ದಾರಿ ಕೂಡ ಜಾಸ್ತಿ ಆಗಿದೆ. ಕರುನಾಡಿನ ಸಿಂಹದಮರಿ ಶಿವರಾಜ್​​ಕುಮಾರ್​ ಈ ಚಿತ್ರದ ಮೂಲಕ ಚೆನ್ನೈ ಅಬಿಮಾನಿಗಳ ದಿಲ್​ ದೋಚಲಿದ್ದಾರೆ. ಅಂತೂ ಕನ್ನಡಿಗರು ಹೆಮ್ಮೆ ಪಡುವ ರೀತಿಯಲ್ಲಿ ಪ್ಯಾನ್​ ಇಂಡಿಯಾ ಲೆವೆಲ್​ನಲ್ಲಿ ನಮ್ಮ ಕಲಾವಿದ್ರು ಸದ್ದು ಮಾಡ್ತಿದ್ದಾರೆ. ಶಿವಣ್ಣನ ರೋಲ್​ ಏನು ಅನ್ನೋದು ಇನ್ನೂ ಸಸ್ಪೆನ್ಸ್​​ ಆಗಿದ್ದು, ಪಸ್ಟ್​​ ಲುಕ್​ ಹೇಗಿರಲಿದೆ ಅನ್ನೋ ಕಾತರದಲ್ಲಿದ್ದಾರೆ.

ಬೀಸ್ಟ್‌, ಡಾಕ್ಟರ್ ಸಿನಿಮಾಗಳ ಖ್ಯಾತಿಯ ನಿರ್ದೇಶಕ ನೆಲ್ಸನ್‌ ದಿಲೀಪ್​​​​​ಕುಮಾರ್​​​​​​​​ ಚಿತ್ರದಲ್ಲಿ ಘಟಾನುಘಟಿಗಳು ನಟಿಸ್ತಾ ಇರೋದು ಚಿತ್ರದ ಮೇಲಿನ ಕುತೂಹಲ ಕೆರಳಿಸಿದೆ. ಜೈಲರ್‌ ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಎಂದು ಹೇಳಲಾಗಿದೆ. ಇದು ರಜನಿಕಾಂತ್ ಅವರ 169ನೇ ಸಿನಿಮಾವಾಗಿದೆ. ಏನೆ ಇರಲಿ ಸದ್ಯದಲ್ಲೇ ಈ ಚಿತ್ರದ ಮತ್ತಷ್ಟು ಎಕ್ಸ್​ಕ್ಲೂಸಿವ್​ ಅಪ್ಡೇಟ್ಸ್​ ಸಿಗಲಿ ಎಂಬುದೇ ಅಭಿಮಾನಿಗಳ ಆಶಯವಾಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯುರೋ, ಪವರ್ ಟಿವಿ

RELATED ARTICLES

Related Articles

TRENDING ARTICLES