ಧಾರವಾಡ: ಧಾರವಾಡ ನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಎರಡು ಮರಿಗಳ ಜೊತೆ ಚಿರತೆ ಪ್ರತ್ಯಕ್ಷವಾಗಿರೋ ಶಂಕೆ. ಧಾರವಾಡದ ಕೆಲಗೇರಿ ಕುಮಾರೇಶ್ವರ ಬಡಾವಣೆಯಲ್ಲಿ ಓಡಾಟ ನಡೆಸಿದ್ದು, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಚಿರತೆ ಹೋಲುವ ಪ್ರಾಣಿಯ ಓಡಾಟ
ಆತಂಕದಲ್ಲಿ ಸ್ಥಳೀಯ ಜನರಿದ್ದಾರೆ.
ಇತ್ತೀಚೆಗೆ ಬಡಾವಣೆಗಳಲ್ಲಿನ ಬೀದಿ ನಾಯಿಗಳೋ ಕಣ್ಮರೆ, ಒಂದೊಂದೆ ನಾಯಿಗಳು ನಾಪತ್ತೆಯಾಗುತ್ತಿದೆ. ಬೀದಿ ನಾಯಿಗಳನ್ನು ಹೊತ್ತೊಯ್ಯಲು ಚಿರತೆ ಬಂದಿರೋ ಶಂಕೆ ವ್ಯಕ್ತವಾಗಿದೆ. ನಿತ್ಯ ರಾತ್ರಿ ಆಗಾಗ ಬೊಗಳುತ್ತಿರೋ ನಾಯಿಗಳು, ನಾಯಿಗಳ ಶಬ್ದ ಕೇಳಿ ಮನೆಯೊಂದರ ಸಿಸಿ ಕ್ಯಾಮರಾ ಪರಿಶೀಲಿಸಿದ ಸ್ಥಳೀಯರು. ಚಿರತೆಯಂತಹ ಪ್ರಾಣಿ, ಎರಡು ಮರಿಗಳು ಓಡಾಡಿರೋ ದೃಶ್ಯ ಪತ್ತೆಯಾಗಿದೆ.
ಇದರಿಂದ ಆತಂಕಗೊಂಡ ಸ್ಥಳೀಯರು. ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿರೋ ಸ್ಥಳೀಯರು. ಚಿರತೆ ಪತ್ತೆ ಕಾರ್ಯ ಆರಂಭಿಸಿದ ಅರಣ್ಯ ಇಲಾಖೆ. ರಾತ್ರಿ ಕ್ಯಾಮರಾಗಳನ್ನಿಟ್ಟು ಚಿರತೆ ಪತ್ತೆ ಮಾಡಲು ಅಧಿಕಾರಿಗಳ ನಿರ್ಧಾರ. ಜನತೆ ಆತಂಕಗೊಳ್ಳದಂತೆ ಅರಣ್ಯಾಧಿಕಾರಿಗಳ ಮನವಿ ಮಾಡಿದ್ದಾರೆ.
ಆದಷ್ಟು ಬೇಗ ಪತ್ತೆ ಮಾಡುವುದಾಗಿ ಅರಣ್ಯಾಧಿಕಾರಿಗಳ ಹೇಳಿಕೆ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ನಂ. 4ರ ಬೈಪಾಸ್‌ಗೆ ಹೊಂದಿಕೊಂಡಿರೋ ಕುಮಾರೇಶ್ವರ ಬಡಾವಣೆ. ರಸ್ತೆ ಆಚೆಗೆ ಇರೋ ಅರಣ್ಯ ಚಿಕ್ಕಮಲಿಗವಾಡ ಅರಣ್ಯ ಪ್ರದೇಶ. ಈ ಹಿನ್ನೆಲೆ ರಸ್ತೆ ದಾಟಿ ಚಿರತೆಗಳು ಬಂದಿರೋ ಸಾಧ್ಯತೆ ವ್ಯಕ್ತವಾಗಿದೆ.