ಬೆಂಗಳೂರು : ಸೋಮವಾರ ಮಧ್ಯಾಹ್ನ ಮೂರು ಗಂಟೆಗೆ ಶಾಂತಿನಗರ ಸಾರಿಗೆ ಇಲಾಖೆ ಕೇಂದ್ರ ಕಚೇರಿಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಮ್ಮುಖದಲ್ಲಿ ಓಲಾ ಉಬರ್ ಕಂಪನಿಗಳ ಜೊತೆ ಸಭೆ ನಡೆಸಲಿದ್ದಾರೆ.
ಸರ್ಕಾರದ ನಿಗದಿತ ದರಕ್ಕಿಂತ ಅಧಿಕ ಹಣ ವಸೂಲಿಗಿಳಿದಿದ್ದ ಓಲಾ ಉಬರ್ ಆ್ಯಪ್‌ಗಳ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಕ್ಯಾಬ್ ಬುಕ್ಕಿಂಗ್ ಆ್ಯಪ್‌ಗಳಾದ ಓಲಾ, ಉಬರ್ಗಳಿಗೆ ದರ ನಿಗದಿ ಪಡಿಸುವ ಕುರಿತು ಹಾಗೂ ಆಟೋರಿಕ್ಷಾ ಅನುಮತಿ ನೀಡುವ ಹಾಗೂ ಕಂಪನಿಗಳೊಂದಿಗೆ ಚರ್ಚಿಸಿ ಮುಂದಿನ 10 ದಿನಗಳಲ್ಲಿ ಹೊಸದಾಗಿ ದರ ನಿಗದಿಪಡಿಸಬೇಕು. ಅನುಮತಿಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ಇಲಾಖೆಗೆ ಹೈಕೋರ್ಟ್ ಸೂಚಿಸಿತ್ತು. ಈ ಬೆನ್ನಲ್ಲೇ ಓಲಾ, ಉಬರ್ ಕಂಪನಿಗಳಿಗೆ ಸರ್ಕಾರ ಮೂಗುದಾರ ಹಾಕಿ, ಹೊಸ ಪ್ರಯಾಣ ದರ ಪರಿಷ್ಕರಣೆಗೆ ಮುಂದಾಗಿದೆ. ಸಭೆಯಲ್ಲಿ ಓಲಾ ಉಬರ್ ಕಂಪನಿಗಳು ಆಟೋ ಚಾಲಕರು ಭಾಗಿಯಾಗಲಿದ್ದಾರೆ.
ಸರ್ಕಾರವು ಬೆಂಗಳೂರಿನಲ್ಲಿ ಕನಿಷ್ಠ ಆಟೋ ದರ ಮೊದಲ 2 ಕಿಮೀಗೆ 30, ನಂತರದ ಪ್ರತಿ ಕಿ.ಮೀಗೆ 15 ಸದ್ಯ ನಿಗದಿ ಮಾಡಿದೆ. ಮೊದಲ 5 ನಿಮಿಷಕ್ಕೆ ಯಾವುದೇ ವೇಟಿಂಗ್ ಚಾರ್ಜ್ ಇರುವುದಿಲ್ಲ ಮತ್ತು ನಂತರ ಪ್ರತಿ 15 ನಿಮಿಷಕ್ಕೆ 5 ಇದೆ. ರಾತ್ರಿ ಪ್ರಯಾಣದಲ್ಲಿ ರಾತ್ರಿ 10ರಿಂದ ಬೆಳಗ್ಗೆ 5ಶೇ.50 ದರ ಹೆಚ್ಚು ನಿಗದಿಪಡಿಸಿದೆ.ಆದ್ರೆ, ಈ ದರ ಸಾಕಾಗ್ತಿಲ್ಲ ಅಂತ ಆಗ್ರಿಗೇಟರ್ ಸಂಸ್ಥೆಗಳ ಎರಡು ಕಿಲೋ ಮೀಟರ್ ಗೆ 100 ನಿಗದಿ ಮಾಡ್ತಿವೆ. ಹೀಗಾಗಿ ನೂತನ ದರ ನಿಗದಿಗೆ ಸಾರಿಗೆ ಇಲಾಖೆ ಮುಂದಾಗಿದೆ.
ಒಟ್ಟಿನಲ್ಲಿ ಓಲಾ ಉಬರ್ ಕಂಪನಿಗಳು ಪ್ರಯಾಣಿಕರಿಂದ ಬೇಕಾಬಿಟ್ಟಿ ವಸೂಲಿ ಮಾಡಿವೆ. ಆದ್ರೆ ಸರ್ಕಾರ ಇವರ ಮೇಲೆ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳುವ ಪೌರುಷ ತೋರುತ್ತಿಲ್ಲ. ಈಗಾಗಲೇ ಎರಡು ಸಲ ಸಭೆ ಮಾಡಿದ್ರೂ ಒಮ್ಮತ ಮೂಡದ ಕಾರಣ ಸಭೆ ವಿಫಲವಾಗಿದೆ. ಸೋಮವಾರ ಆದ್ರೂ ಓಲಾ ಉಬರ್ ಉಸಾಬರಿ ತಾರ್ಕಿಕ ಅಂತ್ಯ ಕಾಣುತ್ತಾ ಕಾದುನೋಡಬೇಕಿದೆ.
ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು .