ಬಾಗಲಕೋಟೆ : ಜಿಲ್ಲೆಯ ಶಿಕ್ಷಕ ಶಂಕರ ತೆಗ್ಗಿ ಶಿಕ್ಷಣ ಇಲಾಖೆಗೇ ಮಾದರಿಯಾಗಿದ್ದಾರೆ. ಬದಾಮಿ ತಾಲ್ಲೂಕಿನ ಕೂಳಗೇರಿ ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಿ ಬಡ ಮಕ್ಕಳಿಗೆ ಉಚಿತವಾಗಿ ಪಾಠ ಮಾಡುತ್ತಿದ್ದಾರೆ. ಅಕ್ಷರ ಯಾತ್ರೆ ಮನೆ-ಮನೆಗಳಿಗೆ ತೆರಳಿ ಮಕ್ಕಳನ್ನು ಒಗ್ಗೂಡಿಸಿ ಶಿಕ್ಷಣ ನೀಡುತ್ತಿದ್ದಾರೆ. ಇದು ಗ್ರಾಮೀಣ ವಿದ್ಯಾರ್ಥಿಗಳಿಗೆ ಖುಷಿ ತರಿಸಿದೆ.
ನಾನೂ ಸಹ ಬಡ ಕುಟುಂಬದಲ್ಲಿ ಜನಿಸಿದವನು.ನಾನು ಕಲಿತ ವಿದ್ಯೆ ವ್ಯರ್ಥವಾಗಬಾರದು.ನಮ್ಮ ನಾಡಿಗಾಗಿ ಸಾಕಷ್ಟು ಮಹನೀಯರು ದುಡಿದಿದ್ದಾರೆ. ಕೆಲವರು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಇಂಥ ಮಹನಿಯರ ಮುಂದೆ ಈ ನನ್ನ ಕಾರ್ಯ ದೊಡ್ಡದಲ್ಲ ಎನ್ನುತ್ತಾರೆ ಉಪನ್ಯಾಸಕ ಶಂಕರ ತೆಗ್ಗಿ. ಒಟ್ಟಾರೆ ಹಣದ ಮೇಲೆ ನಿಂತಿರುವ ಶಿಕ್ಷಣದ ವ್ಯವಸ್ಥೆಯಲ್ಲಿ ಶಂಕರ ತೆಗ್ಗಿ ಅವರ ಕಳಕಳಿ ಎಲ್ಲರಿಗೂ ಮಾದರಿ.
ನಿಜಗುಣ ಮಠಪತಿ, ಪವರ್ ಟಿವಿ, ಬಾಗಲಕೋಟೆ