Thursday, December 19, 2024

ವ್ಹಾವ್.. ಗಂಧದಗುಡಿ ವೈಭವ.. ಅಪ್ಪು ಜರ್ನಿ ರಿವೀಲ್..!​​​

ದೊಡ್ಮನೆಯ ಕಲಾಸಿರಿ. ಮುಕುಠ ಮಣಿ, ದೇವತಾ ಮನುಷ್ಯನ ಕನಸಿನ ಸಿನಿಮಾ ಗಂಧದ ಗುಡಿ. ಯಾವುದೇ ಮೇಕಪ್​​ ಇಲ್ಲದೇ ಸಿಂಪಲ್​​ ಮ್ಯಾನ್​​ ಆಗಿ ಅಪ್ಪು ಅಭಿನಯಿಸಿದ ಚಿತ್ರ ಇದು. ಕಾಡು ಮೇಡು, ಪ್ರಾಣಿ ಪಕ್ಷಿಗಳ ಜೊತೆ ಅಪ್ಪು ಕಾಲ ಕಳೆದ ಜರ್ನಿ ಹೇಗಿದೆ ಅನ್ನೋ ಕುತೂಹಲ  ನಿಮಗೆಲ್ಲಾ ಇದೆ. ಸದ್ಯ, ಈ ಸೊಬಗನ್ನು ಕಣ್ತುಂಬಿಕೊಳ್ಳೋ ಸದಾವಕಾಶ ಸಿಕ್ಕಿದೆ. ಏನದು ಗುಡ್​​​ನ್ಯೂಸ್​ ಅಂತೀರಾ..? ಈ ಸ್ಟೋರಿ ಓದಿ.

  • ಶೂಟಿಂಗ್​ ಸೆಟ್​​ನಲ್ಲಿ ಅಪ್ಪು ಹೇಗಿದ್ರು..? ಸ್ಪೆಷಲ್​​​ ಗಿಫ್ಟ್​​​​​​​​

ಗಂಧದ ಗುಡಿ ಸಿನಿಮಾವನ್ನು ಇಡೀ ಕರುನಾಡು ಅಪ್ಪಿ, ಒಪ್ಪಿ ಮುದ್ದಾಡಿದೆ. ಅಪ್ಪು ರಿಯಲ್​ ಜರ್ನಿಯನ್ನು ಕಂಡು ಥ್ರಿಲ್​ ಆಗಿದೆ. ಕರುನಾಡಿನ ವನಸಿರಿಯ ವೈಭವವನ್ನು ಕಂಡು ಬೆರಗಾಗಿದೆ. ಕಾಮನ್​ ಮ್ಯಾನ್​ನಂತೆ ಕಾಡು ಮೇಡು ಅಲೆದಿರುವ ಅಪ್ಪು ಅವರ ಸಿಂಪ್ಲಿಸಿಟಿಗೆ ಎಲ್ಲರೂ ಭಾವುಕರಾಗಿದ್ದಾರೆ. ಯೆಸ್​​.. ಇದು ಪವರ್​​ ಸ್ಟಾರ್​​ ರಿಯಲ್​ ಜರ್ನಿ. ಸಣ್ಣ ಪುಟ್ಟ ಮೇಕಿಂಗ್​ ವೀಡಿಯೋ ಕಂಡು ಥ್ರಿಲ್​ ಆಗಿದ್ದ ಪ್ರೇಕ್ಷಕರಿಗೆ ಗುಡ್​​ನ್ಯೂಸ್​​​ ಸಿಕ್ಕಿದೆ.

ಯೆಸ್​​.. ಮನೆಯಲ್ಲಿ ಅಪ್ಪು ಹೇಗಿರ್ತಾರೋ, ಹಾಗೆಯೇ ನ್ಯಾಚುರಲ್​ ಆಗಿ ಗಂಧದಗುಡಿಯಲ್ಲಿ ಕಾಣಿಸ್ತಾರೆ. ಶೂಟಿಂಗ್​ನಲ್ಲಿ ಕಳೆದ ಸುಂದರ ಕ್ಷಣಗಳನ್ನು ಅಭಿಮಾನಿಗಳಿಗೆ ತೆರೆದಿಡೋ ಪ್ರಯತ್ನ ಪಿಆರ್​ಕೆ ಪ್ರೊಡಕ್ಷನ್​ ಮಾಡ್ತಿದೆ. ಸದ್ಯ ಅಪ್ಪು ಜರ್ನಿಯ ಸ್ಪೆಷಲ್​ ಪ್ರೊಮೋ ರಿಲೀಸ್​ ಆಗಿದ್ದು, ಸಖತ್​​ ಥ್ರಿಲ್ಲಿಂಗ್ ಆಗಿದೆ.

ಸಾವಿರಾರು ಕೋಟಿಯ ಒಡೆಯ ಸಾಮಾನ್ಯನಂತೆ ಕಾಡುಗಳಲ್ಲಿ ಬೈಕ್ ಏರಿ ಹೋಗುವ ಬಿಹೈಂಡ್​​ ದಿ ಸೀನ್ಸ್​​ ತೋರಿಸುವ ಪ್ರಯತ್ನವಿದು. ಜಲಪಾತಗಳ ನಡುವೆ, ಕಗ್ಗತ್ತಲ ಕಾಡಿನ ನಡುವೆ ಅಪ್ಪು ಹೇಗಿರ್ತಾ ಇದ್ರು ಅನ್ನೋ ಎಕ್ಸ್​​ಕ್ಲೂಸಿವ್​ ದೃಶ್ಯಗಳನ್ನು ಇದೇ ಡಿಸೆಂಬರ್​ 14ಕ್ಕೆ ರಿವೀಲ್​ ಮಾಡಲಾಗ್ತಿದೆ. ಈ ಕುರಿತಾಗಿ ಅಶ್ವಿನಿ ಪುನೀತ್ ರಾಜ್​ಕುಮಾರ್​ ಪ್ರೊಮೋ ಹಂಚಿಕೊಳ್ಳುವ ಮೂಲಕ ಅಧಿಕೃತವಾಗಿ ಹಂಚಿಕೊಂಡಿದ್ದಾರೆ.

ಗಂಧದ ಗುಡಿ ಚಿತ್ರದಲ್ಲಿ ಪರಿಸರ ಕಾಳಜಿಯ ಜೊತೆಗೆ, ವನ್ಯಮಾತೆಯ ಸಂರಕ್ಷಣೆಯ ಬಗ್ಗೆಯೂ ತೋರಿಸಲಾಗಿತ್ತು. ಜೊತೆಗೆ ಅಪ್ಪು ಸಿಂಪ್ಲಿಸಿಟಿ ಎಲ್ಲರ ಕಣ್ಣಂಚಲ್ಲಿ ನೀರು ತರಿಸಿತ್ತು. ಹಾಗಾಗಿ, ತೆರೆಮರೆಯಲ್ಲಿ ಅಪ್ಪು ಹೇಗಿರ್ತಾ ಇದ್ರು ಅನ್ನೋ ಕುತೂಹಲ ಎಲ್ರಿಗೂ ಇದೆ. ಡಿಸೆಂಬರ್​ 14 ಕ್ಕೆ ರಿಲೀಸ್​ ಆಗಲಿರೋ ವಿಡೀಯೋಗಳ ಮೇಲೆ ಎಲ್ಲರ ಚಿತ್ರ ನೆಟ್ಟಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್ ಟಿವಿ

RELATED ARTICLES

Related Articles

TRENDING ARTICLES