Wednesday, December 25, 2024

ಪ್ರಿಯಕರನ ಜತೆ ಸೇರಿ ಗಂಡನಿಗೆ ಮಹೂರ್ತ ಇಟ್ಟ ಪತ್ನಿ.!

ಬೆಂಗಳೂರು: ಗಂಡನ ಕೊಲೆಗೆ ಪ್ರಿಯಕರನಿಗೆ ಸುಪಾರಿ ನೀಡಿದ ಪತ್ನಿ ಸಮೇತವಾಗಿ ಇಬ್ಬರು ಕೊಲೆ ಆರೋಪಿಗಳನ್ನ ವಿದ್ಯಾರಣ್ಯಪುರ ಪೊಲೀಸರು ಬಂಧನ ಮಾಡಿದ್ದಾರೆ.

ಕಳೆದ ನವೆಂಬರ್ 6 ರಂದು ವಿದ್ಯಾರಣ್ಯಪುರದ ವಡೇರಹಳ್ಳಿಯಲ್ಲಿ ಮೂಲತ: ಪಶ್ಚಿಮ ಬಂಗಾಳ ಮೂಲದ 60 ವರ್ಷದ ರಾಕೇಶ್ ತೋಮಂಗ ಎಂಬಾತನ ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು. ಪ್ರಿಯಕರನ ಜೊತೆ ಸೇರಿ ಪತಿಯ ಕತ್ತು ಹಿಸುಕಿ ಪತ್ನಿ ಕೊಂದಿದ್ದಳು.

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡ್ತಿದ್ದ ಮೃತ, ಆರೋಪಿ
ಪತಿಗೆ ಊಟ ಕೊಡಲು ತೆರಳುತ್ತಿದ್ದ ವೇಳೆ ಆರೋಪಿ ಬಾಬು ಮೃತನ ಪತ್ನಿಗೆ ಪರಿಚಿತಳಾಗಿದ್ದ, ಗಂಡನಿಗೆ ಮದ್ಯಪಾನ ಮಾಡಿಸಿ ಕಬಾಬ್ ತಿನ್ನಿಸಿ ಕತ್ತು ಹಿಸುಕಿ ಪತ್ನಿ ಹಾಗೂ ಇನ್ನೊಬ್ಬ ಆರೋಪಿ ಸೇರಿ ಪತಿಯನ್ನ ಕೊಂದಿದ್ದರು.

ಮೃತ ರಾಕೇಶ್ ತೋಮಂಗ ಕುಡಿತಕ್ಕೆ ದಾಸನಾಗಿ ಲೈಂಗಿಕ ಆಸಕ್ತಿ ಕಳೆದುಕೊಂಡಿದ್ದ, ಪತಿಯ ಕುಡಿತದ ಚಟವನ್ನೆ ಬಂಡವಾಳ ಮಾಡಿಕೊಂಡು ಪತ್ನಿ ಮುಹೂರ್ತ ಇಟ್ಟಿದ್ದಾಳೆ. ಅದರಂತೆ ಕೊಲೆ ದಿನ ಕಂಠಪೂರ್ತಿ ಕುಡಿದು ನಿದ್ರೆಗೆ ಪತಿ ಜಾರಿದ್ದ. ಪತಿ ಎಣ್ಣೆಮತ್ತಲ್ಲಿ ಟೈಟ್ ಆಗಿ ನಿದ್ರೆಗೆ ಜಾರ್ತಿದ್ದಂತೆ ಎಂಟ್ರಿಕೊಟ್ಟಿದ್ದ ಆರೋಪಿ ಬಾಬು ಅಲಿ, ಈ ವೇಳೆ ಪತಿ ಗಂಡನ ಕೈ ಕಾಲು ಹಿಡಿದುಕೊಂಡು ನಿದ್ರೆಯಲ್ಲಿದ್ದ ರಾಕೇಶ್ ತೋಮಂಗನ ಮೇಲೆ ಕೂತು ಕತ್ತು ಹಿಸುಕಲು ಆರೋಪಿ ಬಾಬು ಅಲಿ ಮುಂದಾಗಿದ್ದಾನೆ.

ಮಾರನೇ ದಿನ ಪತಿ ಕುಡಿದು ಎದೆ ಉರಿ ಅಂತೇಳ್ತಾ ಸಾವನ್ನಪ್ಪಿದ್ರು ಎಂದು ಪೊಲೀಸರಿಗೆ ಕರೆ ಮಾಡಿದ್ದ ಪತ್ನಿ, ಆದ್ರೆ ಮೃತ ರಾಕೇಶ್ ತೋಮಂಗನ ಕತ್ತಿನ ಮೇಲೆ ಪರಚಿದ ಕೈ ಗುರುತಿನ ಕಲೆಗಳಿದ್ವು ಮೊದಲಿಗೆ ಅನುಮಾನಾಸ್ಪದ ಸಾವು ಅಂತ ಕೇಸ್ ದಾಖಲಿಸಿಲಾಯಿತು. ನೀನು ಗಂಡಸಾದ್ರೆ ಅವನನ್ನ ಸಾಯಿಸಿ ಬಾ ಇಲ್ಲವಾದ್ರೆ ನನ್ನ ಬಿಟ್ಟುಬಿಡು ಎಂದು ಪತಿ ಪ್ರಿಯಕರ ಬಾಬು ಅಲಿಗೆ ಗಂಡನನ್ನ ಸಾಯಿಸಿದ್ರೆ ಮಾತ್ರ ನಿನ್ನೊಂದಿಗೆ ಮತ್ತೆ ಸೇರೋದಾಗಿ ಅವಾಜ್ ಹಾಕಿದ್ದಳಂತೆ.

ಪತ್ನಿ ಹಾಗೂ ಬಾಬು ಅಲಿಯ ಸಂಬಂಧದ ಬಗ್ಗೆ ಅನುಮಾನಗೊಂಡಿದ್ದ ಮೃತ ರಾಕೇಶ್ ತೋಮಂಗ. ಈ ಹಿಂದೆ ಎರಡು ಮೂರು ಬಾರಿ ಪತ್ನಿಗೆ ವಾರ್ನ್ ಕೊಲೆಯಾದ ಪತಿ ಮಾಡಿದ್ದ. ಬೆಳಗ್ಗೆ 7 ರಿಂದ ಸಂಜೆ 7 ಘಂಟೆ ಶಿಫ್ಟ್ ನಲ್ಲಿ ಕೆಲಸ ಮಾಡ್ತಿದ್ದ ಮೃತ,  ಇದನ್ನೆ ಬಂಡವಾಳ ಮಾಡಿಕೊಂಡು ಬೆರೊಬ್ಬನೆ ಜತೆಗೆ ಸರಸವಾಡತೊಡಗಿದ್ದಾಳೆ. ನಮ್ಮಿಬ್ಬರ ಸಂಬಂಧಕ್ಕೆ ಪತಿ ಅಡ್ಡಿಯಾಗ್ತಿದ್ದಾನೆ, ಅವನನ್ನು ಮುಗಿಸು ಇಲ್ಲಾ ನನ್ನ ಬಿಡು ಎಂದಿ ಪತ್ನಿ ಹೇಳಿದ್ದಳು.

ಮೃತ ಗಮನಕ್ಕೆ ಬಾರದೇ ಮೃತನ ಮನೆಯಲ್ಲಿ ಕೊಲೆಗಾರ 9 ದಿನ ಅಡಗಿ ಕೂತಿದ್ದ, ರಾಕೇಶ್ ತೋಮಂಗನನ್ನ  ಕೊಲೆ ಮಾಡಲು ಮುಹೂರ್ತ ಇಟ್ಟಿದ್ದು ಅಕ್ಟೋಬರ್ 29 ರಂದು, ಆದರೆ ಪತ್ನಿ ಹಾಗೂ ಪ್ರಿಯಕರ ಹತ್ಯೆ ಮಾಡಿದ್ದು ನವೆಂಬರ್ 6 ರಂದು, ಅಕ್ಟೊಬರ್ 29 ರಿಂದ ನವೆಂಬರ್ 6 ರವರೆಗೂ ಮೃತ ರಾಕೇಶ್ ತೋಮಂಗನ ಮನೆಯಲ್ಲಿ ಆರೋಪಿ ಅಡಗಿಕುಳಿತಿದ್ದ.

ಪತಿ ಹತ್ಯೆ ಮಾಡಲೇಬೇಕೆಂದು ಪತ್ನಿ ಪ್ರಿಯಕರನಿಗೆ ತನ್ನ ಹೆಸರಿನ ಮೇಲೆ ಒಂದು ಸಿಮ್​ ಕಾರ್ಡ್​ ನೀಡಿದ್ದಳು.  ತನ್ನ ಹಳೇ ಮೊಬೈಲ್ & ಸಿಮ್ ಬೀಸಾಕಿದ್ದ ಆರೋಪಿ, ಅಕ್ಟೋಬರ್ 29 ರಿಂದ ಹೊಸ ಸಿಮ್ ಕಾಲ್ ನಲ್ಲಿ ಆರೋಪಿಗಳು ಕರೆ ಮಾಡುತ್ತಿದ್ದರು. ಕೊಲೆಯ ನಂತರ ಬೆಳಗ್ಗೆ ಪತಿಯ ಅಕೌಂಟ್ ನಿಂದ ತನ್ನ ಅಕೌಂಟ್ ಗೆ ಹಣವನ್ನ ಪತ್ನಿ ವರ್ಗಾಯಿಸಿಕೊಂಡಿದ್ದಳು. ನಂತರ ತನ್ನ ಅಕೌಂಟ್ ನಿಂದ ಪ್ರಿಯಕರನ ಪೊನ್ ಪೇಗೆ ಹಣ ವರ್ಗಾಯಿಸಿದ್ದಾಳೆ. ಪೊನ್ ಕಾಲ್ ಹಾಗೂ ಬ್ಯಾಂಕ್ ಟ್ರಾನ್ಸಾಕ್ಷನ್ ನಲ್ಲಿ ಪೊಲೀರು ಜಾಲಾಡಿದಾಗ ಇಬ್ಬರು ಸಿಕ್ಕಿಬಿದ್ದಿದ್ದಾರೆ.

RELATED ARTICLES

Related Articles

TRENDING ARTICLES