ರಾಯಚೂರು: 2023ರ ಚುನಾವಣೆಯಲ್ಲಿ ಜೆಡಿಎಸ್ ರಣತಂತ್ರ ಸಿಂಧನೂರು ಕ್ಷೇತ್ರದ ಶಾಸಕ ನಾಡಗೌಡ ಬಿಚ್ಚಿಟ್ಟ ರಹಸ್ಯ.ಪಕ್ಷ ಅಧಿಕಾರಕ್ಕೆ ಬಂದರೆ ಪ್ರಮುಖ ಸಮಾಜಗಳಲ್ಲಿ ನಾಲ್ಕು- ಐದು ಉಪ ಮುಖ್ಯಮಂತ್ರಿಗಳು. ರಾಜ್ಯ ಜೆಡಿಎಸ್ ಸಭೆಯಲ್ಲಿ ಚರ್ಚೆ ಮುಂದೆ ತೀರ್ಮಾನ ಆಗುತ್ತದೆ ಎಂದು ಹೇಳಲಾಗುತ್ತಿದೆ.
ಬೇರೆ ರಾಜ್ಯಗಳಲ್ಲಿ ಪ್ರಮುಖ ಸಮಾಜಗಳಿಗೆ ಅವಕಾಶ ಕೊಟ್ಟಿರುವ ಹಾಗೆ ಇಲ್ಲಿಯೂ ಕೊಡಬೇಕು. ಸಿಎಂ ಇಬ್ರಾಹಿಂ ಪಕ್ಷಕ್ಕೆ ಬಂದಿರುವುದರಿಂದ ಅಲ್ಪಸಂಖ್ಯಾತರಲ್ಲಿ ಬದಲಾವಣೆಯಾಗಲಿದೆ. ಕೇವಲ ಮುಸಲ್ಮಾನರಿಗೆ ಅಷ್ಟೇ ಸೀಮಿತ ಅಲ್ಲ, ವೀರಶೈವ ಸಮಾಜದ ಸ್ವಾಮೀಜಿಗಳು ಅವರನ್ನು ಇಷ್ಟಪಡುತ್ತಾರೆ. ಪ್ರಮುಖ ಸಮಾಜಗಳಿಗೆ ಕೊಡಬೇಕೆಂದು ಮಾತು ಕತೆಗಳು ಈಗಾಗಲೇ ನಡೆದಿದೆ.
ನಾಡಗೌಡರ ನಡೆ ಸಾಧನೆಯ ಕಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸಿಗೆ ಮತ್ತು ಬಿಜೆಪಿಗೆ -ಜೆಡಿಎಸ್ ಶಾಸಕ ಸವಾಲೆಸಗಿದ್ದಾರೆ. ಧೈರ್ಯ ಇದ್ರೆ ಮುಂದಿನ ಮುಖ್ಯಮಂತ್ರಿ ಯಾರು? ಎನ್ನುವುದು ಅನೌನ್ಸ್ ಮಾಡಲಿ ಎಂದು ಸವಾಲೆಸಗಿದ್ದಾರೆ. ಡಿಕೆ ಶಿವಕುಮಾರ್, ಸಿದ್ದರಾಮಣ್ಣನ,ಅಥವಾ ಹೊಸದಾಗಿ ಆಗಿರುವ ರಾಷ್ಟ್ರೀಯ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆನ.
ಬಿಜೆಪಿ ಹೇಳೋಕೆ ಸಾಧ್ಯವಿಲ್ಲ ಈಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮುಂದಿನ ಮುಖ್ಯಮಂತ್ರಿ ಅಂತ ಹೇಳಲಿ.ನಾವು ಹೇಳುತ್ತೇವೆ ನಮ್ಮ ಮುಖ್ಯಮಂತ್ರಿ ಕುಮಾರಣ್ಣ ನಾವು ಪಲ್ಯಕ್ಕೆಯಲ್ಲಿ ದೇವರು ಇಟ್ಟುಕೊಂಡಿದ್ದೀವಿ. ದೇವರು ಇರೋ ಪಲ್ಲಕ್ಕಿಗೆ ನಮಸ್ಕಾರ ಮಾಡುತ್ತಾರ,ಅವರ ಪಲ್ಲಕ್ಕಿಯಲ್ಲಿ ದೇವರೇ ಇಲ್ಲ.ಯಾರು ಮುಖ್ಯಮಂತ್ರಿ ಅಂತ ಹೇಳಕ್ಕೆ ತಯಾರಿಲ್ಲ ಜನ ಓಟ್ ಹೇಗೆ ಹಾಕಬೇಕು ಎಮದು ಹೇಳಿದ್ದಾರೆ.