Wednesday, December 25, 2024

ಆಕಾಶದಲ್ಲಿ ಎರಡು ವಿಮಾನಗಳ ನಡುವೆ ಢಿಕ್ಕಿ ಆರು ಸಾವು

ಟೆಕ್ಸಾಸ್​; ಶನಿವಾರದಂದು ಟೆಕ್ಸಾಸ್‌ನ ಡಲ್ಲಾಸ್ ಎಕ್ಸಿಕ್ಯೂಟಿವ್ ಏರ್‌ಪೋರ್ಟ್‌ನಲ್ಲಿ ಬೋಯಿಂಗ್ ಬಿ-17 ಫ್ಲೈಯಿಂಗ್ ಫೋರ್ಟ್ರೆಸ್ ಬಾಂಬರ್ ಮತ್ತು ಬೆಲ್ ಪಿ-63 ಕಿಂಗ್‌ಕೋಬ್ರಾ ಫೈಟರ್ ಯುದ್ದ ವಿಮಾನಗಳ ನಡುವೆ ಢಿಕ್ಕಿ ಸಂಭವಿಸಿದೆ.

ಟೆಕ್ಸಾಸ್‌ನ ಡಲ್ಲಾಸ್ ಏರ್ ಶೋನಲ್ಲಿ ಎರಡು ವಿಮಾನಗಳು ಆಕಾಶದಲ್ಲಿ ಡಿಕ್ಕಿ ಹೊಡೆದವು, ತಕ್ಷಣವೇ ನೆಲಕ್ಕೆ ಬಿದ್ದು ಬೆಂಕಿ ಹೊತ್ತಿಕೊಂಡಿತು. ಘರ್ಷಣೆಯಲ್ಲಿ ಆರು ಜನರು, ಎಲ್ಲಾ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

ಶನಿವಾರ ನಡೆದ ವೈಮಾನಿಕ ಪ್ರದರ್ಶನದಲ್ಲಿ ಮಧ್ಯಾಹ್ನ ಸುಮಾರು 1.20ಕ್ಕೆ ಘಟನೆ ನಡೆಯಿತು. ವಿಮಾನಗಳ ವಿಂಗ್ಸ್‌ ಪರಸ್ಪರ ತಗುಲಿ ಢಿಕ್ಕಿ ಸಂಭವಿಸಿ ಅಪಘಾತ ನಡೆದಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತಿಳಿಸಿರುವುದಾಗಿ ವರದಿಯಾಗಿದೆ.

ಘಟನೆ ನಡೆದ ಕೂಡಲೇ ರಕ್ಷಣಾ ತಂಡಗಳು ಸ್ಥಳಕ್ಕಾಗಮಿಸಿ ತುರ್ತು ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಸಿಬಂದಿ ಸೇರಿ ಆರು ಮಂದಿ ಘಟನೆಯಲ್ಲಿ ಸಾವನ್ನಪ್ಪಿದ್ದು, ಇನ್ನೀತರರು ಸಾವೊನ್ನೊಪ್ಪಿರುವ ಶಂಕೆಯನ್ನ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES