Monday, December 23, 2024

ವಿನಯ್ ಗುರೂಜಿ ವಿರುದ್ಧ ಅಪಪ್ರಚಾರ: ಪ್ರತಿಭಟನೆಗೆ ಸಜ್ಜಾದ ಭಕ್ತವೃಂದ

ಶಿವಮೊಗ್ಗ : ಗೌರಿಗದ್ದೆಯ ವಿನಯ್ ಗುರೂಜಿಯವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದು, ಇದರ ವಿರುದ್ಧ ನ. 14 ರಂದು ಪ್ರತಿಭಟನಾ ಮೆರವಣಿಗೆ ಮನವಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ವಿನಯ್ ಗುರೂಜಿ ಭಕ್ತ ವೃಂದ ತಿಳಿಸಿದೆ. ಇಂದು ಸುದ್ಧಿಗೋಷ್ಟಿ ನಡೆಸಿ ಈ ಬಗ್ಗೆ ಮಾತನಾಡಿದ ರಾಘವೇಂದ್ರ ಹೆಬ್ಬಾರ್ ಮತ್ತು ಶಂಕರ್ ವಿನಯ್ ಗುರೂಜಿಯವರು ಈ ನಾಡಿನ ಧಾರ್ಮಿಕ ನಾಯಕರಾಗಿದ್ದಾರೆ. ಈ ದೇಶದ ಸಂಸ್ಕೃತಿಯ ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ನಾಡಿನಾದ್ಯಂತ ಅಲ್ಲದೆ ದೇಶ-ವಿದೇಶಗಳಲ್ಲೂ ಭಕ್ತರಿದ್ದಾರೆ. ಇಂತಹ ವ್ಯಕ್ತಿಯ ಬಗ್ಗೆ ಇತ್ತೀಚೆಗೆ ಅಪಪ್ರಚಾರ ನಡೆಯುತ್ತಿದೆ. ಅವರ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿದೆ. ಇದು ಅವರ ಭಕ್ತವೃಂದಕ್ಕೆ ತುಂಬಾ ನೋವಾಗಿದೆ ಎಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಗುರೂಜಿಯವರ ಬಗ್ಗೆ ಅಪಪ್ರಚಾರ ಬರುತ್ತಿದೆ. ಅವರು ಸಲಿಂಗ ಕಾಮಿ ಎಂದು ಬಿಂಬಿಸಲಾಗುತ್ತಿರುವುದರಿಂದ ಭಕ್ತರ ಭಾವನೆಗಳಿಗೆ ಧಕ್ಕೆ ತರಲಾಗುತ್ತಿದೆ. ಆಪಾದನೆ ಮಾಡುವವರು ದಾಖಲೆಗಳಿದ್ದರೆ ನ್ಯಾಯಾಲಯದ ಮೊರೆ ಹೋಗಲಿ. ಸರ್ಕಾರ ಸಹ ಈ ಬಗ್ಗೆ ತನಿಖೆ ನಡೆಸಿ, ಕಾಣದ ಕೈಗಳಿಗೆ ಮಟ್ಟ ಹಾಕಬೇಕೆಂದು ಒತ್ತಾಯಿಸಿದ್ದಾರೆ.

ಆಶ್ರಮದ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುವುದು ಹವ್ಯಾಸವಾಗಿಬಿಟ್ಟಿದೆ. ಗುರೂಜಿಯವರನ್ನು ಅಪರಾಧಿ ಎಂದು ಬಿಂಬಿಸಿ ಭಕ್ತರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲಾಗುತ್ತಿದೆ ಎಂದು ದೂರಿದ್ದಾರೆ. ಗುರೂಜಿಯವರ ಬೆಂಬಲಕ್ಕೆ ಭಕ್ತರಿದ್ದು, ಇಂತಹ ಅಪಪ್ರಚಾರಕ್ಕೆ ಭಕ್ತರು ಒಳಗಾಗದೆ ಅವರಿಗೆ ಆತ್ಮಸ್ಥೈರ್ಯ ತುಂಬಲು ನ. 14 ರ ಬೆಳಿಗ್ಗೆ 10-30ಕ್ಕೆ ಶಿವಪ್ಪನಾಯಕ ಪ್ರತಿಮೆ ಮುಂಭಾಗದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES