Wednesday, December 25, 2024

ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗಾಗಿ ಬೃಹತ್ ಸಮಾವೇಶ

ವಿಜಯನಗರ:ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗಾಗಿ ಇಂದು ನಡೆಯಲಿರೋ ಸಮಾವೇಶ. ಪಂಚಮಸಾಲಿ 2 ಎ, ಮೀಸಲಾತಿ ಜನಜಾಗೃತಿ ಬೃಹತ್ ಸಮಾವೇಶ ಮತ್ತು ವೀರರಾಣಿ ಕಿತ್ತೂರು ಚನ್ನಮ್ಮ 199 ವಿಜಯೋತ್ಸವ, ಹೊಸಪೇಟೆಯ ಸಹಕಾರಿ ಕ್ರೀಡಾಂಗಣದಲ್ಲಿ ಸಮಾವೇಶ ನಡೆಯಲಿದೆ.

ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ( ರಿ) ವಿಜಯನಗರ ಜಿಲ್ಲಾ ಘಟಕದಿಂದ ಆಯೋಜನೆ ನಡೆಯಲಿದ್ದು, ಹರಿಹರ ಪೀಠದ ಶ್ರೀಗಳಾದ ಶ್ರೀ ವಚನಾನಂದ ಶ್ರೀಗಳು ಮತ್ತು ಹೊಸಪೇಟೆಯ ಶ್ರೀ ಕೊಟ್ಟರು ಸಂಸ್ಥಾನ ಮಠದ ಬಸವಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.

ಶ್ರೀ ಕೊಟ್ಟೂರು ಸ್ವಾಮಿ ಮಠದಿಂದ ಕುಂಭಮೇಳ, ಮೆರವಣಿಗೆ ನಡೆಯಲಿದೆ. ಹೊಸಪೇಟೆಯ ನಾನಾ ಕಡೆ ಸಂಚಾರ ಮಾಡಿ, ಮೆರವಣಿಗೆ ವೇದಿಕೆಗೆ ತೆರಳಲಿದೆ. 11 ಗಂಟೆಗೆ ಕಾರ್ಯಕ್ರಮ ನಡೆಯಲ್ಲಿದ್ದು,  ಬೃಹತ್ ಸಮಾವೇಶ 30 ಸಾವಿರಕ್ಕೂ ಅಧಿಕ ಜನರು ಸೇರೋ ನಿರೀಕ್ಷೆ ಇದೆ.

RELATED ARTICLES

Related Articles

TRENDING ARTICLES