Monday, December 23, 2024

ಚಂದ್ರಗಿರಿ ರುದ್ರನ ಖದರ್​ಗೆ ಬೆಚ್ಚಿಬಿದ್ದ ಸ್ಯಾಂಡಲ್​ವುಡ್

ಕೆಲವೊಂದು ಡೈರೆಕ್ಟರ್​ಗಳು ಒಂದಷ್ಟು ಸ್ಟಾರ್ಸ್​ಗೆ ಅಂತ ಫಿಕ್ಸ್ ಆಗಿಬಿಟ್ಟಿರ್ತಾರೆ. ಅದು ಅವ್ರ ವೇವ್​ಲೆಂಥ್ ಹಾಗೂ ಕೆಲಸ ಮಾಡೋ ಮನಸ್ಥಿತಿ, ಪರಿಸ್ಥಿತಿಗಳನ್ನು ಒಟ್ಟುಗೂಡಿಸಿರುತ್ತೆ. ಸದ್ಯ ಹಾಗೆ ಸಿಂಕ್ ಆದ ಜೋಡಿಗಳಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್ ಹಾಗೂ ಡೈರೆಕ್ಟರ್ ಹರ್ಷ ಮುಂಚೂಣಿಯಲ್ಲಿದ್ದಾರೆ. ಟೀಸರ್​ನಿಂದ ಸದ್ದು ಮಾಡ್ತಿರೋ ಇವ್ರ ವೇದ ಝಲಕ್ ನೀವೊಮ್ಮೆ ಕಣ್ತುಂಬಿಕೊಳ್ಳಿ.

  • 60ರ ದಶಕ.. ಮಚ್ಚು.. ಸೆಂಟ್ರಲ್ ಜೈಲ್​ನ ಬ್ಯಾಕ್​ಡ್ರಾಪ್
  • ನಾಲ್ಕನೇ ಬಾರಿ ಒಂದಾದ ಶಿವಣ್ಣ- ಹರ್ಷಗೆ ಗೀತಕ್ಕ ಸಾಥ್
  • ಧನುಷ್​ರ ಅಸುರನ್ ನೆನಪಿಸ್ತಿರೋ ವೇದ ವೆಪನ್ಸ್ ಟೀಸರ್

124 ಸಿನಿಮಾಗಳ ಬಳಿಕ ತಮ್ಮದೇ ಹೋಮ್ ಬ್ಯಾನರ್ ನಿರ್ಮಿಸಿ, ಸ್ವಂತ ನಿರ್ಮಾಣದಲ್ಲಿ ಸಿನಿಮಾ ಮಾಡೋ ಮನಸ್ಸು ಮಾಡಿರೋ ಶಿವರಾಜ್​ಕುಮಾರ್, ವೇದ ಸಿನಿಮಾನ ತೆರೆಗೆ ತರೋ ತವಕದಲ್ಲಿದ್ದಾರೆ. ಗೀತಾ ಪಿಕ್ಚರ್ಸ್​ ಬ್ಯಾನರ್​ನಡಿ ಗೀತಾ ಶಿವರಾಜ್​ಕುಮಾರ್ ನಿರ್ಮಾಣದ ಚೊಚ್ಚಲ ಸಿನಿಮಾ ವೇದ. ಟೈಟಲ್ ಹಾಗೂ ಫಸ್ಟ್​ಲುಕ್​ ನಿಂದಲೇ ಎಲ್ಲರ ಹುಬ್ಬೇರಿಸಿದ್ದ ವೇದ, ಇದೀಗ ಟೀಸರ್​ನಿಂದ ಆ ಕ್ಯೂರಿಯಾಸಿಟಿ ಲೆವೆಲ್ ಮತ್ತಷ್ಟು ಹೆಚ್ಚಿಸಿದೆ.

ಯೆಸ್.. ಇದು ರೀಸೆಂಟ್ ಆಗಿ ಲಾಂಚ್ ಆಗಿರೋ ವೇದ ಟೀಸರ್ ಝಲಕ್. ಚಂದ್ರಗಿರಿಯಲ್ಲಿ ಸೆಂಟ್ರಲ್ ಜೈಲ್ ಬ್ಯಾಕ್​ಡ್ರಾಪ್​ನಲ್ಲಿ ನಡೆಯೋ ರಕ್ತಸಿಕ್ತ ಭಯಾನಕ ಹಾಗೂ ಭೀಭತ್ಸ ಕಥಾನಕ ಇದಾಗಿದ್ದು, 60ರ ದಶಕದ ಪೀರಿಯಾಡಿಕ್ ಕಥಾನಕ ಹೊಂದಿರಲಿದೆ. ಟೀಸರ್ ನೋಡಿದ್ರೆ, ಬಹುಶಃ ಯಾವುದಾದ್ರು ನೈಜ ಘಟನೆ ಆಧಾರಿತ ಎಳೆಯನ್ನು ಇಟ್ಕೊಂಡು ಹರ್ಷ ಕಥೆ ಹೆಣೆದಿದ್ರಾ ಅನ್ನೋ ಸಂದೇಹ ಮೂಡುತ್ತೆ.

ಅಷ್ಟರ ಮಟ್ಟಿಗೆ ಇಂಟೆನ್ಸ್ ಎಮೋಷನ್ಸ್ ಹಾಗೂ ಕ್ರೌರ್ಯದ ಮೇಲೆ ಈ ವೇದ ಸಿನಿಮಾ ಆಧಾರವಾಗಿದೆ. ಇಲ್ಲಿ ಶಿವಣ್ಣಗೆ ಹೀರೋಯಿನ್ ಇಲ್ಲ. ಇದೇ ಮೊದಲ ಬಾರಿ ಹೀರೋಯಿನ್ ಇಲ್ಲದೇನೇ ಕಥಾನಾಯಕನ ಜರ್ನಿ ಮುಂದುವರೆಯೋ ಶಿವಣ್ಣ ಸಿನಿಮಾ ಇದಾಗಲಿದ್ದು, ರುದ್ರನಾಗಿ ಮಚ್ಚು ಹಿಡಿದು ರಕ್ತ ಹರಿಸೋ ಸೀಕ್ವೆನ್ಸ್ ಸಖತ್ ಥ್ರಿಲ್ ಕೊಡ್ತಿದೆ.

ಡಿಸೆಂಬರ್ 23ಕ್ಕೆ ವರ್ಲ್ಡ್​ವೈಡ್ ತೆರೆಗೆ ಬರೋಕೆ ಸಜ್ಜಾಗಿರೋ ವೇದ, ಸದ್ಯ ಟೀಸರ್​ನಿಂದ ಧೂಳೆಬ್ಬಿಸ್ತಿದೆ. ಅಂದಹಾಗೆ ಇದು ಡೈರೆಕ್ಟರ್ ಹರ್ಷ ಅವ್ರ ಕ್ರಿಯೇಟಿವಿಟಿಯ ಕೈಗನ್ನಡಿಯಾಗಿದ್ದು, ಶಿವಣ್ಣ ಅವ್ರಿಗೆ ಮಗದೊಮ್ಮೆ ಹೊಸ ಇಮೇಜ್ ಹಾಗೂ ನ್ಯೂ ಲುಕ್ ಕೊಟ್ಟಿದ್ದಾರೆ. ಪಂಚೆಯಲ್ಲಿ ಶಿವಣ್ಣ ಮಚ್ಚು ಹಿಡಿಯೋ ಖದರ್​ಗೆ ಎಲ್ಲರೂ ಬೆಚ್ಚಿ ಬೀಳುವಂತಿದೆ.

ನೋಡೋಕೆ ಇದು ತಮಿಳಿನ ಧನುಷ್ ನಟನೆಯ ಅಸುರನ್ ಸಿನಿಮಾದ ಫ್ಲೇವರ್ ಅನಿಸಿದ್ರೂ, ಕಥೆಯಲ್ಲಿ ಯುನಿಕ್​ನೆಸ್ ಇದೆ. ಇನ್ನು ಭಜರಂಗಿ, ವಜ್ರಕಾಯ ಹಾಗೂ ಭಜರಂಗಿ 2 ಬಳಿಕ ಶಿವಣ್ಣ- ಹರ್ಷ ನಾಲ್ಕನೇ ಬಾರಿ ಮೋಡಿ ಮಾಡೋಕೆ ಸಜ್ಜಾಗಿದ್ದಾರೆ. ಅಪ್ಪು ಅಕಾಲಿಕ ನಿಧನದಿಂದ ಭಜರಂಗಿ-2 ಪ್ರೊಮೋಷನ್ಸ್ ಕೂಡ ಕೈ ಬಿಡಲಾಗಿತ್ತು. ಒಳ್ಳೆಯ ಸಿನಿಮಾವೊಂದು ಥಿಯೇಟರ್​ನಲ್ಲಿ ಸದ್ದು ಮಾಡಲಿಲ್ಲವಾದ್ರೂ ಒಟಿಟಿ ಹಾಗೂ ಟಿವಿಯಲ್ಲಿ ದಾಖಲೆ ಬರೆದಿತ್ತು. ಆದ್ರೀಗ ವೇದ ಥಿಯೇಟ್ರಿಕಲ್ ರಿಲೀಸ್​ಗೆ ಹೊಸ ಮುನ್ನುಡಿ ಬರೆಯಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES