Sunday, December 22, 2024

ಟಿಣಿಂಗ ಮಿಣಿಂಗ ಕಂಠದಲ್ಲಿ ಪ್ರಿಯಾಂಕಾ ‘ಉಗ್ರಾವತಾರ’

ಹೂವೆ ಹೂವೆ ಹಾಡಿನ ಮೂಲಕ ಸಿನಿಲೋಕದಲ್ಲಿ ಸಂಚಲನ ಮೂಡಿಸಿದ್ದ ಬ್ಯುಟಿಫುಲ್​ ಚೆಲುವೆ ಪ್ರಿಯಾಂಕ ಉಪೇಂದ್ರ ಆ್ಯಕ್ಷನ್​ ಕ್ವೀನ್​ ಲುಕ್​ನಲ್ಲಿ ಮಿಂಚ್ತಿದ್ದಾರೆ. ಯೆಸ್​​.. ವುಮೆನ್​ ಸೆಂಟ್ರಿಕ್​​ ಚಿತ್ರಗಳ ಮೂಲಕ ತನ್ನದೇ ಛಾಪು ಮೂಡಿಸಿರೋ ಪ್ರಿಯಾಂಕ ಖಾಕಿ ತೊಟ್ಟು ಉಗ್ರಾವತಾರಿಯಾಗಿದ್ದಾರೆ. ಸದ್ಯ ಈ ಚಿತ್ರದ ಗುಮ್ಮಾನಿ ಸಾಂಗ್​​ ಸಖತ್​ ಕಿಕ್ಕು ಕೊಡ್ತಿದ್ದು ಕೇಳುಗರ ದಿಲ್​ ದೋಚಿದೆ.

  • ಕತ್ರಿಗುಪ್ಪೆ ನಿವಾಸದಲ್ಲಿ ಬರ್ತ್​​ಡೇ ಬಿಗ್​​​​​​​​​​​​​​ ಸೆಲೆಬ್ರೇಷನ್​​​​​​​

ಬೆಂಗಾಳಿ ಚೆಲುವೆ ಪ್ರಿಯಾಂಕ ಉಪೇಂದ್ರ ಬರ್ತ್​ಡೇ ಸಂಭ್ರಮದಲ್ಲಿದ್ದಾರೆ. 46ನೇ ವಸಂತಕ್ಕೆ ಕಾಲಿಟ್ಟಿರೋ ಹೂವಂತ ಮನಸ್ಸಿರೋ ಬ್ಯೂಟಿಫುಲ್​ ಬೆಡಗಿ ಬರ್ತ್​ಡೇ ಖುಷಿಯಲ್ಲಿದ್ದಾರೆ. ಸ್ಯಾಂಡಲ್​ವುಡ್​​ ಸೇರಿದಂತೆ ರಾಜಕೀಯ, ಸ್ನೇಹಿತ ವರ್ಗದ ಕಡೆಯಿಂದ ಶುಭಾಷಯಗಳ ಮಹಾಪೂರ ಹರಿದು ಬರ್ತಿದೆ. ತಮ್ಮ ಕತ್ರಿಗುಪ್ಪೆ ನಿವಾಸದಲ್ಲಿ ಫ್ಯಾನ್ಸ್​ ಜೊತೆಗೆ ಕೇಕ್​ ಕಟ್​ ಮಾಡಿ ಬರ್ತ್​​​ಡೇನಾ ಅದ್ಧೂರಿಯಾಗಿ ಸೆಲೆಬ್ರೇಟ್​ ಮಾಡಿದ್ದಾರೆ.

ಹೆಚ್​ ಟು ಓ ಸಿನಿಮಾ ನಂತ್ರ ರಿಯಲ್​ ಸ್ಟಾರ್​ ಉಪ್ಪಿ ಕೈ ಹಿಡಿದ ಗಾರ್ಜಿಯಸ್​​​ ಬೆಡಗಿ ಚಿತ್ರರಂಗದಲ್ಲಿ ಇಂದಿಗೂ ಆ್ಯಕ್ಟಿವ್​ ಆಗಿದ್ದಾರೆ. ವುಮೆನ್​ ಸೆಂಟ್ರಿಕ್​ ಚಿತ್ರಗಳ ಮೂಲಕ ಇಂದಿಗೂ ಕನ್ನಡಿಗರ ಎದೆಯಲ್ಲಿ ಶಾಶ್ವತವಾಗಿ ನೆಲೆ ಊರಿದ್ದಾರೆ. ಹಾರರ್​​​​ ಥ್ರಿಲ್ಲರ್ ಜೊತೆಗೆ ಸಾಮಾಜಿಕ ಕಳಕಳಿಯ ಸಿನಿಮಾಗಳಲ್ಲು ಬ್ಯುಸಿಯಾಗಿದ್ದಾರೆ. ಇಂದು ಬರ್ತ್​ ಡೇ ಸಲುವಾಗಿ ತಮ್ಮ ನಿವಾಸದಲ್ಲಿ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಿ ಬರ್ತ್​ಡೇ ಆಚರಿಸಿಕೊಂಡಿದ್ದಾರೆ.

  • ಪ್ರಿಯಾಂಕಾಗೆ ಬರ್ತ್​​​ಡೇ ಗಿಫ್ಟ್​ ಕೊಟ್ಟ ಕೈಮರ ಚಿತ್ರತಂಡ
  • ಎಷ್ಟೇ ಬ್ಯುಸಿ ಇದ್ರೂ ಪ್ರಿಯಾಂಕ ಚಿತ್ರಕ್ಕೆ ಉಪ್ಪಿ ಫುಲ್​ ಸಾಥ್​

ಕೋಟಿಗೊಬ್ಬ ಚಿತ್ರದ ನಂತ್ರವೂ ಸಿನಿಕರಿಯರ್​​ ಮುಂದುವರೆಸಿದ ಪ್ರಿಯಾಂಕ ಶ್ರೀಮತಿ, ದೇವಕಿ, ಮಮ್ಮಿ, ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬ್ಯುಸಿ ಆದ್ರು. ಜೊತೆಗೆ ತಮಿಳು, ತೆಲುಗು, ಬೆಂಗಾಳಿ ಚಿತ್ರಗಳಲ್ಲೂ ಆ್ಯಕ್ಟ್​ ಮಾಡಿ ಸೈ ಎನಿಸಿಕೊಂಡ್ರು. ಈ ನಡುವೆ ಉಗ್ರಾವತಾರ ಚಿತ್ರದ ಗುಮ್ಮಾನಿ ಸಾಂಗ್​ ಬಿಡುಗಡೆ ಸಮಾರಂಭಕ್ಕೆ ಉಪ್ಪಿ ಹಾಜಾರಿದ್ದು, ಪತ್ನಿಗೆ ಸಾಥ್​ ಕೊಟ್ರು.

ಬರ್ತ್​ಡೇಗೆ ಕೈಮರ ಚಿತ್ರತಂಡ ಪೋಸ್ಟರ್​ ರಿಲೀಸ್​  ಮಾಡಿ ಸ್ಪೆಷಲ್​ ಗಿಪ್ಟ್​ ಕೊಡ್ತು. ಸ್ಟಾರ್​ ನಟಿಯರ ಪೈಪೋಟಿ ನಡುವೆಯೂ ಇಂದಿಗೂ ಪ್ರಿಯಾಂಕ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಮಿಸ್​ ನಂದಿನಿ, ಉಗ್ರಾವತಾರ, ದಿ ವೈರಸ್​​​, ಕಮರೊಟ್ಟು 2, ಡಿಟೆಕ್ಟಿವ್​ ತೀಕ್ಷ್ಣ, ಬಂಗಾಲಿ ಸೇರಿದಂತೆ ಅನೇಕ ಪ್ರಾಜೆಕ್ಟ್​ಗಳಲ್ಲಿ  ಕಾಲ್​ಶೀಟ್​ ಕೊಟ್ಟಿದ್ದಾರೆ.

ಪ್ರಿಯಾಂಕ ಉಪೇಂದ್ರ ದಂಪತಿಗೆ ಆಯುಷ್​, ಐಶ್ವರ್ಯಾ ಮಕ್ಕಳಿದ್ದಾರೆ. ಅಮೇರಿಕಾದಲ್ಲಿ ಓದಿದ್ರು, ಸ್ಟಾರ್​ ನಟಿಯಾಗಿ ಮಿಂಚಿದ್ರೂ, ಭಾರತೀಯ ಸಂಪ್ರದಾಯ ಮರೆಯದ ಸುಸಂಸ್ಕೃತ ನಾರಿಯಾಗಿ ಕಂಗೊಳಿಸ್ತಾರೆ. ಎಲ್ಲರನ್ನೂ ಗೌರವಿಸುತ್ತಾ ತುಂಬ ಕುಟುಂಬದ ಹುಡುಗಿಯಾಗಿ, ಕರ್ನಾಟಕದ ಮುದ್ದಿನ ಸೊಸೆಯಾಗಿ ಬಾಳ್ತಿದ್ದಾರೆ. ಅವರ ವೈಯಕ್ತಿಕ ಜೀವನ, ಸಿನಿಮಾ ಎರಡು ಸುಖಮಯವಾಗಿರಲಿ ಎಂದು ಆಶಿಸೋಣ.

ರಾಕೇಶ್​ ಆರುಂಡಿ, ಪಿಲ್ಮ್​​ ಬ್ಯುರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES